೮೦ರ ಕಾಲದ ಯುವಕರ ಎದೆಮೇಲೆ ತಯ್ಯಾತಕ್ಕ ಅಂಥಾ ಮಾದಕವಾಗಿ ಕುಣಿದು, ಕನಸಿಗೂ ಬಂದು ಅವರ ನಿದ್ದೆಗೆಡಿಸಿದ್ದವಳು ಡ್ಯಾನ್ಸರ್ ಕಂ ನಟಿ ಸಿಲ್ಕ್ ಸ್ಮಿತಾ!
ಈಕೆ ಆತ್ಮಹತ್ಯೆ ಮಾಡಿಕೊಂಡು ಸತ್ತು ಇಪ್ಪತ್ಮೂರು ವರ್ಷಗಳು ಕಳೆದರೂ ಇಂದಿಗೂ ಒಂದಲ್ಲಾ ಒಂದು ಕಾರಣಕ್ಕೆ ಈಕೆಯ ಹೆಸರು ಪ್ರಸ್ತಾಪವಾಗುತ್ತಲೇ ಇರುತ್ತದೆ. ಜನ ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ. ಆಕೆ ಉಳಿಸಿಹೋಗಿರುವ ನೆನಪುಗಳೇ ಅಂಥದ್ದು!
ಈಗ ಟಿಕ್ ಟಾಕ್ ವಿಡಿಯೋ ಮೂಲಕ ಸಿಲ್ಕ್ ಸ್ಮಿತಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ. ಥೇಟು ಸಿಲ್ಕ್ ಸ್ಮಿತಾ ಅಚ್ಚೊತ್ತಿದಂತೆ ಇರುವ ಹುಡುಗಿಯೊಬ್ಬಳು ತಮಿಳು ಹಾಡೊಂದಕ್ಕೆ ಟಿಕ್ ಟಾಕ್ ಮಾಡಿ ಬಿಟ್ಟಿದ್ದಾಳೆ. ಈಕೆ ಯಾರು, ಯಾವ ಊರು, ಹೆಸರೇನು ಅನ್ನೋದೇ ಯಾರಿಗೂ ಗೊತ್ತಾಗಿಲ್ಲ. ಆದರೆ ವಿಡಿಯೋ ಮಾತ್ರ ವೈರಲ್ ಆಗಿದೆ. ನೋಡಲಂತೂ ಈ ಹುಡುಗಿ ಸಿಲ್ಕ್ ಸ್ಮಿತಾ ತದ್ರೂಪು!
ಬಾಯಿ ಕೂಡಾ ತೆರೆಯದೇ, ಬರೀ ಕಣ್ಣಿನಲ್ಲೇ ಭಾವನೆ ವ್ಯಕ್ತಪಡಿಸಿರುವ ಈಕೆ ಯಾರು ಅನ್ನೋದು ನೋಡಿದವರೆಲ್ಲರ ಕುತೂಹಲವಾಗಿದೆ. ಒಂದು ವೇಳೆ ಇವಳು ಸಿಲ್ಕ್ ಸ್ಮಿತಾ ರಕ್ತ ಸಂಬಂಧಿಯಾ? ಅಂತಾ ಕೂಡಾ ಜನ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಅವೆಲ್ಲ ಏನಾದರೂ ಆಗಲಿ, ಸಿಲ್ಕ್ ಸ್ಮಿತಾ ಎನ್ನುವ ನಟಿ ಸತ್ತಮೇಲೂ ಈ ರೀತಿ ಕಾಡಿಸುತ್ತಿದ್ದಾಳೆ ಅಂದರೆ ಆಕೆಯ ಪವರ್ರು ಎಂಥಾದ್ದಿರಬೇಕು ಊಹಿಸಿ..