ಕಾಲಿವುಡ್ ನ ಖ್ಯಾತ ನಟ ಸಿಂಬು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಹಳಷ್ಟು ದಿನಗಳಿಂದ ಹರಿದಾಡುತ್ತಲೇ ಇದೆ. ಇಲ್ಲಿಯವರೆಗೂ ಮದುವೆ ವಿಚಾರವಾಗಿ ತುಟಿಬಿಚ್ಚದಿದ್ದ ಸಿಂಬು, ಸದ್ಯಕ್ಕೆ ಮದುವೆಯಾಗುವ ಪ್ರಶ್ನೆಯೇ ಇಲ್ಲ. ಈ ಕ್ಷಣದಲ್ಲಿ ನಾನು ತುಂಬಾ ಹ್ಯಾಪಿಯಾಗಿದ್ದೇನೆ. ನನ್ನ ಕುಟುಂಬ ದೊಡ್ಡದಾಗುತ್ತಿದೆ.
ತಮ್ಮ ಮತ್ತು ತಂಗಿ ವಿವಾಹವಾಗಿದ್ದಾರೆ. ನಮ್ಮ ಫ್ಯಾಮಿಲಿ ಪೋಟೋ ಕೂಡ ದೊಡ್ಡದಾಗಿದೆ. ಕುಟುಂಬದ ಪ್ರೀತಿಯಲ್ಲಿ ತೇಲಾಡುತ್ತಿದ್ದೇನೆ. ಸದ್ಯಕ್ಕೆ ನನಗೆ ಮದುವೆಯಾಗುವ ಆಲೋಚನೆಯೇ ಇಲ್ಲ. ಸಿನಿಮಾಗಳ ಕಡೆ ಹೆಚ್ಚು ಗಮನ ಹರಿಸಬೇಕೆಂದಿದ್ದೇನೆ. ಗಾಳಿಸುದ್ದಿಗಳಿಗೆ ಕಿವಿಕೊಡಬೇಡಿ ಎಂದು ಮಾಧ್ಯಮಗಳ ಮೂಲಕ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಸದ್ಯ ಸಿಂಬು ಕನ್ನಡದ ಮಫ್ತಿ ತಮಿಳು ರಿಮೇಕ್ ನಲ್ಲಿ ಸಿಂಬು ನಾಯಕನಾಗಿ ಅಭಿನಯಿಸುತ್ತಿದ್ದಾರೆ.
No Comment! Be the first one.