ಅನೇಕ ತಿಂಗಳುಗಳಿಂದ ಲಂಡನ್ ನ ಫಿಡಲ್ ಕ್ಯಾಂಪಿನಲ್ಲಿದ್ದ ಸಿಂಬು ಮತ್ತೆ ಫಿಟ್ ಅಂಡ್ ಸ್ಟ್ರಾಂಗ್ ಆಗಿದ್ದಾರೆ. ಸದ್ಯದಲ್ಲೇ ಹೊಸ ಸಿನಿಮಾದಲ್ಲಿಯೂ ಸಿಂಬು ವೆಂಕಟ್ ಪ್ರಭು ನಿರ್ದೇಶನದ ಮಾನಾಡು ಸಿನಿಮಾದಲ್ಲಿ ನಟಿಸುತ್ತಿದ್ದು, ತಿಂಗಳಾಂತ್ಯಕ್ಕೆ ಸಿನಿಮಾ ಸೆಟ್ಟೇರಲಿದೆ.
ಹೊಸ ಲುಕ್ ನಲ್ಲಿರುವ ಸಿಂಬು ಅನೇಕ ನಿರ್ಮಾಪಕರು ಮತ್ತು ನಿರ್ದೇಶಕರನ್ನು ಸೆಳೆಯುತ್ತಿದ್ದು, ಮನೆ ಬಾಗಿಲಿಗೆ ಆಫರ್ ಗಳು ಹುಡುಕಿ ಬರುತ್ತಿದೆ. ವರದಿಯ ಪ್ರಕಾರ ಈಗಾಗಲೇ ಸುಮಾರು ಮೂರು ಸಿನಿಮಾಗಳಲ್ಲಿ ಸಿಂಬು ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮಾನಾಡು ಸಿನಿಮಾದ ನಂತರ ಹೆಸರಾಂತ ಖಳನಟ ಎಂ.ಆರ್. ರಾಧಾ ಅವರ ಬಯೋಪಿಕ್ ನಲ್ಲಿಯೂ ಸಿಂಬು ನಟಿಸಲಿದ್ದಾರೆ. ಈ ಹಿಂದೆ ಕೋವಿಲ್ ಸಿನಿಮಾದಲ್ಲಿ ಒಂದಾಗಿದ್ದ ಹರಿ ಮತ್ತು ಸಿಂಬು ಜೋಡಿ ಮತ್ತೆ ಒಂದಾಗುವ ಸಾಧ್ಯತೆಯೂ ಇದೆ ಎಂದು ಬಹಿರಂಗಗೊಂಡಿದೆ. ಅಲ್ಲದೇ ಸಿಂಬು ಫಿಟ್ ನೆಸ್ ಕ್ಯಾಂಪಿನಲ್ಲಿ ಹರಿಯೂ ಸಹಭಾಗಿಯಾಗಿದ್ದು, ಈಗಾಗಲೇ ಪ್ರಾಜೆಕ್ಟ್ ಒಂದರ ಕುರಿತಾಗಿಯೂ ಮಾತನಾಡಿದ್ದಾರಂತೆ. ಸದ್ಯದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದ್ದು, ಸಿಂಬು ಮತ್ತು ಹರಿ ಕಾಂಬಿನೇಷನ್ನಿನ ಹೊಸ ಸಿನಿಮಾವನ್ನು ಸಿಂಬು ಅಭಿಮಾನಿಗಳು ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.