ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕವೇ ಸ್ಟಾರ್ಗಿರಿ ಪಡೆದುಕೊಂಡಿರುವವರು ನಿರ್ದೇಶಕ ಸುನಿ. ಸದಾ ಹೊಸತನದ ಕಥೆಗಳಿಗೇ ಹಾತೊರೆಯುತ್ತಾ ಬಂದಿರೋ ಅವರೀಗ ವಿಶಿಷ್ಟವಾದೊಂದು ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಮೂಲಕ ಹೊಸಾ ವರ್ಷಕ್ಕೆ ಹೊಸಾ ಥರದ ಪ್ರಯಾಣ ಆರಂಭಿಸೋ ತಯಾರಿಯಲ್ಲಿರೋ ಸುನಿಗೆ ನಟ ಶರಣ್ ಜೊತೆಯಾಗಿದ್ದಾರೆ!
ಸಿಂಪಲ್ ಸುನಿ ಶರಣ್ ಅವರಿಗಾಗೊಂದು ಚಿತ್ರ ಮಾಡಲು ತಯಾರಿ ಆರಂಭಿಸಿದ್ದಾರೆ. ಈ ಚಿತ್ರವನ್ನು ಸಿಂಪಲ್ ಸುನಿ ನಿರ್ಮಾಣ ಮಾಡುತ್ತಿರೋದು ವಿಶೇಷ. ಈ ನಿರ್ಮಾಣ ಕಾರ್ಯಕ್ಕೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡಾ ಜೊತೆಯಾಗಿದ್ದಾರೆ. ಈ ಮೂಲಕ ಸುನಿ ಕೈಗೆತ್ತಿಕೊಂಡಿರುವ ಕಥೆಯಲ್ಲಿಯೂ ವಿಶೇಷತೆಯಿದೆ. ಮಹಾಭಾರತದಲ್ಲಿ ತ್ರಿಶಂಕು ಸ್ವರ್ಗದ ಅಧ್ಯಾಯವಿದೆಯಲ್ಲಾ? ಅದರ ಎಳೆಯನ್ನೆತ್ತಿಕೊಂಡು ಬೇರೆಯದ್ದೇ ಥರದ ಕಾಮಿಡಿ ಥ್ರಿಲ್ಲರ್ ಕಥೆಯನ್ನುಪ್ರಯೋಗಿಸಲಾಗುತ್ತಿದೆಯಂತೆ.
ಈ ಚಿತ್ರದ ಬಗ್ಗೆ ಶರಣ್ ಕೂಡಾ ಖುಷಿಯಿಂದಲೇ ರೆಡಿಯಾಗುತ್ತಿದ್ದಾರೆ. ಯಾಕೆಂದರೆ ಸಿಂಪಲ್ ಸುನಿ ಈ ವರೆಗೆ ನೋಡಿರದಂಥಾ ಪಾತ್ರವನ್ನು ಶರಣ್ಗಾಗಿ ರೂಪಿಸಿದ್ದಾರಂತೆ. ಇನ್ನೂ ಈ ಚಿತ್ರಕ್ಕೆ ಹೆಸರಿಟ್ಟಿಲ್ಲ. ಹೊಸಾ ವರ್ಷದ ಆರಂಭದಲ್ಲಿಯೇ ಟೈಟಲ್ ಅನಾವರಣಗೊಳ್ಳೋ ಸಾಧ್ಯತೆಗಳಿವೆ. ಅದಾದ ನಂತರ ಚಿತ್ರೀಕರಣ ಶುರು ಮಾಡಿ ಒಂದೇ ಹಂತದಲ್ಲಿ ಮುಗಿಸಿಕೊಳ್ಳಲು ಸುನಿ ಯೋಜನೆ ಹಾಕಿಕೊಂಡಿದ್ದಾರೆ.
#
No Comment! Be the first one.