ಮದುವೆಯಾದ ನಂತರ ಚಿತ್ರರಂಗದಿಂದ ದೂರವಾದಳು ಅಂದುಕೊಳ್ಳುವಷ್ಟರಲ್ಲಿಯೇ ಸಿಂಧು ಲೋಕನಾಥ್ ಮತ್ತೆ ಟ್ರ್ಯಾಕಿಗೆ ಮರಳಿದ್ದಾಳೆ. ಇತ್ತೀಚೆಗಷ್ಟೇ ಹಿಂಗೊಂದು ದಿನ ಚಿತ್ರದಲ್ಲಿ ನಟಿಸಿದ್ದ ಸಿಂಧು ಇದೀಗ ಮತ್ತೆ ಹೊಸಾ ಅಲೆಯ ಚಿತ್ರವೊಂದಕ್ಕೆ ನಾಯಕಿಯಾಗಿ ಮರಳಿದ್ದಾಳೆ.
ಸಿಂಧು ಲೋಕನಾಥ್ ಈಗ ಕಾಣದಂತೆ ಮಾಯವಾದನು ಎಂಬ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾಳೆ. ಇದುವರೆಗೂ ನಟನೆಗೆ ಚಾಲೆಂಜ್ ಅನ್ನಿಸುವಂಥಾ, ಹೊಸತನವಿರೋ ಪಾತ್ರಗಳನ್ನೇ ಒಪ್ಪಿಕೊಂಡು ಬಂದಿರೋ ಸಿಂಧು, ಈ ಚಿತ್ರವನ್ನೂ ಅದೇ ಮಾನದಂಡದಲ್ಲಿ ಒಪ್ಪಿಕೊಂಡಿದ್ದಾಳಂತೆ.
ರಾಜ್ ನಿರ್ದೇಶನ ಮಾಡಲಿರೋ ಈ ಚಿತ್ರದಲ್ಲಿ ವಿಕಾಸ್ ನಾಯಕನಾಗಿ ನಟಿಸಲಿದ್ದಾನೆ. ಆದರೆ ಇಡೀ ಚಿತ್ರ ಫೋಕಸ್ ಆಗಿರೋದು ಸಿಂಧು ಪಾತ್ರದ ಮೇಲಂತೆ.ಎನ್‌ಜಿಓ ಒಂದರಲ್ಲಿ ಕೆಲಸ ಮಾಡೋ ನಾಯಕಿ, ಮನೆಯಿಲ್ಲದ ನಿರ್ಗತಿಕರಿಗೆ ಸೂರು ಮಾಡಿಕೊಳ್ಳುವ ಉದ್ದೇಶದಿಂದಲೇ ಹೋರಾಡುವವಳು. ಈ ಹಾದಿಯಲ್ಲಿ ಅನೇಕ ಭೂ ಮಾಫಿಯಾ ಮಂದಿಯನ್ನು ಎದುರು ಹಾಕಿಕೊಳ್ಳಬೇಕಾಗಿ ಬರುತ್ತೆ. ಇದರ ಸುತ್ತಾ ಸಾಗೋ ಥ್ರಿಲ್ಲರ್ ಕಥಾನಕವನ್ನು ಈ ಚಿತ್ರ ಹೊಂದಿದೆಯಂತೆ.
ಲೈಫ್ ಇಷ್ಟೇನೆ ಚಿತ್ರವೂ ಸೇರಿದಂತೆ ಇದುವರೆಗೂ ನಾನಾ ಪಾತ್ರಗಳ ಮೂಲಕ ಗಮನ ಸೆಳೆದಿರೋ ನಟಿ ಸಿಂಧೂ ಲೋಕನಾಥ್. ಇದೀಗ ಒಪ್ಪಿಕೊಂಡಿರೋ ಕಾಣದಂತೆ ಮಾಯವಾದನೋ ಚಿತ್ರದ ಪಾತ್ರ ತನ್ನ ಸೆಕೆಂಡ್ ಇನ್ನಿಂಗ್ಸ್‌ಗೆ ಭರ್ಜರಿ ಓಪನಿಂಗ್ ಕೊಡಲಿದೆ ಎಂಬ ಭರವಸೆ ಆಕೆಗಿರುವಂತಿದೆ.
#