ಚಿರು ಸರ್ಜಾ ಹಾಗೂ ಅದಿತಿ ಪ್ರಭುದೇವ್ ನಟಿಸಿರುವ ಕೌಟುಂಬಿಕ ಸಿನಿಮಾ ಸಿಂಗ. ಇದೇ ಜುಲೈ 19 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಂಗ ಬಹಳಷ್ಟು ವಿಚಾರಗಳಿಂದ ಸದ್ದು ಮಾಡುತ್ತಿದ್ದು, ಒಂದಿಲ್ಲೊಂದು ಕೌತುಕದ ಸಂಗತಿಗಳಿಂದ  ದಿನೇ ದಿನೇ ಕ್ಯೂರಿಯಾಸಿಟಿ ಹೆಚ್ಚಿಸುತ್ತಲೇ ಇದೆ. ಈ ಮಧ್ಯೆ ಚಿತ್ರತಂಡ ಮೇಕಿಂಗ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಚಿತ್ರೀಕರಣದ ಸಮಯದಲ್ಲಿ ನಡೆದಂತಹ ಮೋಜು ಮಸ್ತಿಗಳು ಹಾಗೂ ತಾರೆಯರು ತಂತ್ರಜ್ಞನರ ತುಂಟಾಟಗಳನ್ನು  ಈ ವಿಡಿಯೋದಲ್ಲಿ ಕ್ಯಾಪ್ಚರ್ ಮಾಡಲಾಗಿದೆ.

View this post on Instagram

Making of Sinnga..

A post shared by Chirranjeevi Sarja (@chirusarja) on

ಇನ್ನು ಸಿಂಗನ ಬಳಗದಲ್ಲಿ ಕಾಮಿಡಿ ಕಿಲಾಡಿಗಳ ದಂಡೇ ಇದ್ದು, ಬಹಳಷ್ಟು ನವೀನ ಪ್ರತಿಭೆಗಳಿಗೆ ಅವಕಾಶವನ್ನು ನೀಡಲಾಗಿದೆ. ಉಳಿದಂತೆ ರವಿಶಂಕರ್, ಅರುಣಾ ಬಾಲರಾಜ್, ರಂಜಿತಾ, ಚಂದ್ರಪ್ರಭ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.   ಇನ್ನು ಕೃಷ್ಣ ರುಕ್ಕು ಖ್ಯಾತಿಯ ವಿಜಯ್ ಕಿರಣ್ ಸಿಂಗನಿಗೆ ಆ್ಯಕ್ಷನ್ ಕಟ್ ಹೇಳಿದ್ದು, ಉದಯ್ ಕೆ. ಮೆಹ್ತಾ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣ, ಧರ್ಮ ವಿಶ್ ಸಂಗೀತ ಈ ಚಿತ್ರಕ್ಕಿದೆ.

 

CG ARUN

ಶೂಟಿಂಗ್ ಮುಗಿಸಿಕೊಂಡ ಸಾಹೋ!

Previous article

ಬಣ್ಣದ ಲೋಕಕ್ಕೆ ಆರ್ ಜಿ ವಿ ಸೊಸೆ!

Next article

You may also like

Comments

Leave a reply

Your email address will not be published. Required fields are marked *