ತಿಂಗಳುಗಳ ಹಿಂದಷ್ಟೇ ಆರಂಭವಾಗಿದ್ದ ಚಿರಂಜೀವಿ ಸರ್ಜಾ ಅಭಿನಯಿಸುತ್ತಿರುವ ಸಿಂಗ ಸಿನಿಮಾ ಅದಾಗಲೇ ಶೂಟಿಂಗ್ ಮುಗಿಸಿರೋದು ಮಾತ್ರವಲ್ಲ, ಹೆಚ್ಚೂಕಮ್ಮಿ ಬಿಡುಗಡೆಗೂ ತಯಾರಾಗಿಬಿಟ್ಟಿದೆ. ಜನವರಿಯಲ್ಲಿ ಶುರುವಾದ ಕಮರ್ಷಿಯಲ್ ಚಿತ್ರವೊಂದು ಇಷ್ಟು ಬೇಗ ಹೇಗೆ ಬಿಡುಗಡೆಗೆ ತಯಾರಾಗಲು ಸಾಧ್ಯ ಅನ್ನೋದು ಎಲ್ಲರಿಗೂ ಆಶ್ಚರ್ಯ. ಮೊನ್ನೆ ದಿನ ‘ಸಿಂಗ’ನ ಟೀಸರ್ ಕೂಡಾ ರಿಲೀಸಾಗಿಬಿಟ್ಟಿದೆ.
ಹೇಗೆ ಇಷ್ಟು ಸ್ಪೀಡಾಗಿ ಸಿನಿಮಾ ತಯಾರಾಯಿತು ಅನ್ನೋದರ ಜಾಡು ಹಿಡಿದು ಹುಡುಕಿದಾಗ ಸಿಕ್ಕ ಮಾಹಿತಿಯೆಂದರೆ ಇದು 2013ರಲ್ಲಿ ತಮಿಳಿನಲ್ಲಿ ತೆರೆಕಂಡಿದ್ದ ಕುಟ್ಟಿಪುಲಿ ಸಿನಿಮಾದ ರಿಮೇಕು ಅನ್ನೋದು. ಈಗಾಗಲೇ ಪಕ್ಕದ ರಾಜ್ಯದಲ್ಲಿ ಬಂದು ಹಿಟ್ ಆಗಿದ್ದ ಸಿನಿಮಾ ಆಗಿರೋದರಿಂದ ಚಿತ್ರೀಕರಣವನ್ನು ಸಲೀಸಾಗಿ ಮಾಡಿಮುಗಿಸಿದ್ದಾರೆ. ಅಂದಹಾಗೆ, ಇದು ತಮಿಳಿನ ರಿಮೇಕ್ ಸಿನಿಮಾ ಅನ್ನೋದನ್ನು ಚಿತ್ರತಂಡ ಎಲ್ಲೂ ಹೇಳಿಕೊಂಡಿಲ್ಲ. ಎಂ. ಮುತ್ತಯ್ಯ ಮತ್ತು ಭೂಪತಿ ಪಾಂಡ್ಯನ್ ಸೇರಿ ನಿರ್ದೇಶಿಸಿದ್ದ ಕುಟ್ಟಿ ಪುಲಿಯಲ್ಲಿ ನಟ ಸಸಿಕುಮಾರ್ ಹೀರೋ ಆಗಿ ನಟಿಸಿದ್ದರು. ಥ್ರಿಲ್ಲರ್ ಜೊತೆಗೆ ಆಕ್ಷನ್ ಜಾನರಿನ ಈ ಸಿನಿಮಾ ಒಂದು ಮಟ್ಟಕ್ಕೆ ಹೆಸರು ಮಾಡಿತ್ತು. ಉದಯ್ ಮೆಹ್ತಾ ನಿರ್ಮಿಸುತ್ತಿರುವ ಈ ಚಿತ್ರವನ್ನು ವಿಜಯ್ ಕಿರಣ್ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ರಾಮ್ ಲೀಲಾ ಅನ್ನೋ ಸಿನಿಮಾದಲ್ಲಿ ಚಿರು ಇದೇ ವಿಜಯ್ ಕಿರಣ್ ಜೊತೆ ಕೆಲಸ ಮಾಡಿದ್ದರು.
No Comment! Be the first one.