ಸಾಲು ಸಾಲು ಸಿನಿಮಾಗಳಲ್ಲಿ ಸಿಂಗಂ ಬ್ಯುಸಿ!

ಸಿಂಗಂ ಸೂರ್ಯ ಸಾಲು ಸಾಲು ಸಿನಿಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಅಲ್ಲದೇ ನಟಿಸಿದ ಬಹುತೇಕ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಲು ರೆಡಿಯಾಗಿದ್ದು, ಎರಡೆರಡು ತಿಂಗಳುಗಳ ಅಂತರದಲ್ಲಿ ರಿಲೀಸ್ ಭಾಗ್ಯವನ್ನು ಕಾಣಲಿದೆ. ಸೂರ್ಯ ನಟನೆಯ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಎನ್ ಜಿ ಕೆ ಮೇ 31ರಂದು ರಿಲೀಸ್ ಆಗಲಿದೆ. ಈ ಸಿನಿಮಾವನ್ನು ಸೆಲ್ವರ್ಗವನ್ ನಿರ್ದೇಶನ ಮಾಡಿದ್ದಾರೆ. ಇನ್ನು ಸೂರ್ಯನಿಗೆ ಸಾಯಿ ಪಲ್ಲವಿ, ರಾಹುಲ್ ಪ್ರೀತ್ ಸಿಂಗ್ ಜೊತೆಯಾಗಿದ್ದಾರೆ. ಇನ್ನು ಆ್ಯಕ್ಷನ್ ಥ್ರಿಲ್ಲರ್ ಕಾಪ್ಪನ್ ಸಿನಿಮಾವು ಆಗಸ್ಟ್ 30ರಂದು ರಿಲೀಸ್ ಆಗಲಿದೆ. ಈ ಸಿನಿಮಾವನ್ನು ಕೆ.ವಿ ಆನಂದ್ ನಿರ್ದೇಶನ ಮಾಡಿದ್ದಾರೆ.

ಸದ್ಯ ಸೂರ್ಯ ರವರು ಏರ್ ಡೆಕ್ಕರ್ ಫೌಂಡರ್ ಜಿ.ಆರ್. ಗೋಪಿನಾಥ್ ಅವರ ಬಯೋಪಿಕ್ ಸೂರಾರೈ ಪೊಟ್ಟೂರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಸುಧಾ ಕೊಂಗಾರ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸೂರ್ಯ ತಮ್ಮ 39ನೇ ಸಿನಿಮಾಕ್ಕೂ ಸಹಿ ಹಾಕಿದ್ದು, ಈ ಸಿನಿಮಾವನ್ನು ವಿಶ್ವಾಸಂ ಖ್ಯಾತಿಯ ಸಿವ ನಿರ್ದೇಶನ ಮಾಡುತ್ತಿದ್ದಾರೆ. ಈ ಕುರಿತು ಸದ್ಯದಲ್ಲೇ ಅಧಿಕೃತ ಮಾಹಿತಿಯೂ ಹೊರಬೀಳಲಿದೆ.

ಇನ್ನು ತಲಾ ಅಜಿತ್ ರವರ ಹುಟ್ಟುಹಬ್ಬದ ಪ್ರಯತ್ನ ನಿರ್ದೇಶಕ ಪಂಡಿರಾಜ್ ರವರು ಟ್ವೀಟ್ ಮಾಡಿ ಶುಭಕೋರಿದ್ದಾರೆ. ಅವರ ಟ್ವೀಟ್ ಗೆ ರಿಪ್ಲೈ ಮಾಡಿರುವ ಸೂರ್ಯ ಅವರ ಅಭಿಮಾನಿಗಳು ಸಿಂಗಂ ಸೂರ್ಯ ಜತೆಗೊಂದು ಸಿನಿಮಾ ಮಾಡಲು ಕೋರಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಪಂಡಿರಾಜ್ ಈಗಾಗಲೇ ಕಾಮಿಡಿ, ಫ್ಯಾಮಿಲಿ, ಸೆಂಟಿಮೆಂಟ್, ಮಾಸ್ ಸ್ಕ್ರಿಪ್ಟ್ ರೆಡಿಯಾಗುತ್ತಿದ್ದು, ಸದ್ಯದಲ್ಲೇ ಅನೌನ್ಸ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಪಂಡಿರಾಜ್ ಮತ್ತು ಕಾರ್ತಿಕ್ ಕಾಂಬಿನೇ಼ಷನ್ನಿನಲ್ಲಿ ಮೂಡಿಬಂದ ಕಾಡಾಕುಟ್ಟಿ ಸಿಂಗಮ್ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಹಾಗೇನಾದರೂ ಆದಲ್ಲಿ ಈ ಜೋಡಿ ಮತ್ತೊಂದು ಸಿನಿಮಾ ಮೂಲಕ ಕಮಾಲು ಮಾಡುವುದಂತೂ ಕನ್ ಫರ್ಮ್.

 


Posted

in

by

Tags:

Comments

Leave a Reply