ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ನಟಿಯಾಗಿ, ನಿರ್ದೇಶನದ ವಿಭಾಗಗಳಲ್ಲಿ ಕೆಲಸ ಮಾಡಿದವರು ತೃಪ್ತಿ ಸುಂದರ್ ಅಭಿಕರ್. ಸಾಕಷ್ಟು ಕಿರುಚಿತ್ರಗಳು, ಜಾಹೀರಾತುಗಳನ್ನು ನಿರ್ದೇಶಿಸಿ ಹೆಸರು ಮಾಡಿರುವ ತೃಪ್ತಿ ಈಗ ಸಿನಿಮಾವೊಂದನ್ನು ನಿರ್ದೇಶಿಸಲು ಮುಂದಾಗಿದ್ದಾರೆ.
ತಮ್ಮದೇ ಶ್ಲೋಕ ಮೂವೀಸ್ ಬ್ಯಾನರಿನಲ್ಲಿ `ನಲ್ಕೆ’ ಎನ್ನುವ ಚಿತ್ರವನ್ನು ತೃಪ್ತಿ ನಿರ್ದೇಶಿಸುತ್ತಿದ್ದು, ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.
ಖ್ಯಾತ ಕಿರುತೆರೆ ನಿರ್ದೇಶಕ ಮತ್ತು ತೃಪ್ತಿ ಅವರ ಗುರುಗಳೂ ಆದ ಟಿ.ಎನ್. ಸೀತಾರಾಮ್ ನಲ್ಕೆ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಾರೆ. ಇಷ್ಟರಲ್ಲೇ ಚಿತ್ರೀಕರಣ ಆರಂಭಿಸಲಿರುವ ನಲ್ಕೆಗೆ ಕಿರಣ್ ಹಂಪಾಪುರ ಕ್ಯಾಮೆರಾ ಕಣ್ಣಾಗಿದ್ದಾರೆ.
ಈಗ ಬಿಡುಗಡೆಗೊಂಡಿರುವ ಪೋಸ್ಟರ್ ನೋಡಿದರೆ ಇದು ಕರಾವಳಿ ಪ್ರದೇಶದ ಗಾಢವಾದ ಕಥೆಯೊಂದನ್ನು ಹೊಂದಿರುವ ಲಕ್ಷಣಗಳು ಕಾಣುತ್ತಿವೆ. ಯಕ್ಷಗಾನಕ್ಕೆ ಸಂಬಂಧಿಸಿದ ವಿಶೇಷ ಕತೆ ಇದರಲ್ಲಿರಬಹುದು. ಯಕ್ಷಗಾನದಂಥಾ ಶೇಷ್ಟ ಕಲೆಯ ಕುರಿತಾಗಿ ಕನ್ನಡದಲ್ಲಿ ಸಿನಿಮಾವೊಂದು ಬಂದರೆ ನಿಜಕ್ಕೂ ಅದು ಸ್ವಾಗತಾರ್ಹ.
#
No Comment! Be the first one.