ಸಿನಿಮಾದಲ್ಲಿ ನಟಿಸುತ್ತಿದ್ದ ಕಲಾವಿದರು ಪ್ರೊಮೋಷನ್ ಪಡೆದುಕೊಂಡು ನಿರ್ದೇಶಕರಾಗಿ, ನಾಯಕನಾಗಿ ಅಬ್ಬರಿಸುವುದು ಸ್ಯಾಂಡಲ್ ವುಡ್ ನ ಮಟ್ಟಿಗೇನು ಹೊಸದಲ್ಲ. ಈಗಾಗಲೇ ಅನೇಕ ನಿರ್ದೇಶಕರು ಹೀರೋಗಳಾಗಿ ಶೈನಿಂಗ್ ನಲ್ಲೂ ಇದ್ದಾರೆ. ಸದ್ಯಕ್ಕೆ ಈ ಕ್ಯಾಟಗೆರಿಗೆ ಹೊಸ ಸೇರ್ಪಡೆ ಸ್ಮೈಲ್ ಸೀನು.
ಹೌದು ನಿರ್ದೇಶಕ ಸ್ಮೈಲ್ ಸೀನು ಇದೀಗ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ದ್ವಿಭಾಷಾ ಸಿನಿಮಾಗಳ ಮೂಲಕ ಹೀರೋ ಆಗಿ ನಟಿಸುತ್ತಿರುವುದು ವಿಶೇಷವಾಗಿದ್ದು, ಈ ಸಿನಿಮಾವನ್ನು ಸಂಪತ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಸ್ಮೈಲ್ ಸೀನು ಕನ್ನಡದಲ್ಲಿ ‘ತೂಪಾನ್’, ‘ಬಳ್ಳಾರಿ ದರ್ಬಾರ್’, ’18 ಟು 25′ ಹೀಗೆ ಅನೇಕ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದು, ಇದೇ ಮೊದಲ ಬಾರಿಗೆ ನಾಯಕನಟರಾಗಿ ಬೇರೆಯವರ ನಿರ್ದೇಶನದಲ್ಲಿ ನಟಿಸುತ್ತಿದ್ದಾರೆ.
No Comment! Be the first one.