ಸೋಶಿಯಲ್ ಮೀಡಿಯಾ ಮನುಷ್ಯನನ್ನು ಹೆಚ್ಚು ಕಂಟ್ರೋಲ್ ಮಾಡುತ್ತಿರುವ ಮಾಧ್ಯಮ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ. ಇನ್ನು ಈ ವೇದಿಕೆಯ ಮೂಲಕವೇ ಸಿನಿ ತಾರೆಯರು ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಜತೆ ಜತೆಗೆ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸಾಧನವನ್ನಾಗಿಯೂ ಈಗೀಗ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ ಸಾಕಷ್ಟು ಮಂದಿ ಮಹಿಳೆಯರಿಗೆ ಲೈಂಗಿಕ ಶೋಷಣೆ, ಕಿರುಕುಳ ಕೊಡುವುದನ್ನೇ ವೃತ್ತಿಯನ್ನಾಗಿಸಿ ಸಾಕಷ್ಟು ಸ್ತ್ರೀಯರ ಬಾಳಿಗೆ ಕಗ್ಗಂಟಾಗಿ ಉಳಿದಿದ್ದಾರೆ. ಇಂತಹ ಸಾಕಷ್ಟು ಪ್ರಕರಣಗಳು ಈಗೀಗ ಹೆಚ್ಚು ಬೆಳಕಿಗೆ ಬರುತ್ತಿದ್ದು, ಸೈಬರ್ ಪೊಲೀಸರು ಸರಿಯಾಗಿಯೇ ಅಂತಹವರಿಗೆ ಬಿಸಿ ಮುಟ್ಟಿಸುವ ಕಾಯಕದಲ್ಲಿಯೂ ನಿರತರಾಗಿದ್ದಾರೆ. ಈ ಮಧ್ಯೆ ಪೊಲೀಸರು ಹಂಗೆ ತಿರುಗಿ ಹಿಂಗೆ ತಿರುಗುವಷ್ಟರಲ್ಲಿ ಪೊಲೀಸರ ಕಣ್ಣಿಗೂ ಮಣ್ಣೆರಚಿ ಅಲ್ಲಿಂದಿಲ್ಲೊಂದು ಪ್ರಕರಣಗಳು ನಡೆದುಹೋಗುತ್ತದೆ. ಸದ್ಯ ಬಾಲಿವುಡ್ ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ ಇಂತಹುದೇ ಪ್ರಕರಣವನ್ನು ಎದುರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸುಚಿತ್ರಾ ಕೃಷ್ಣಮೂರ್ತಿಯವರ ಫೇಸ್ ಬುಕ್ ಮೆಸೇಂಜರಿಗೆ ಅಪರಿಚಿತನೊಬ್ಬ ಸಂದೇಶ ರವಾನಿಸಿದ್ದು, ”ಕೃಷ್ಣಮೂರ್ತಿ ನೀನು ನನ್ನ ಕೋರಿಕೆಯನ್ನ ತೀರಿಸುತ್ತೀರಾ” ಎಂದು ಕೇಳಿದ್ದಾನೆ. ಇದರಿಂದ ಕುಪಿತಗೊಂಡ ಸುಚಿತ್ರಾ ತಕ್ಷಣವೇ ಪೊಲೀಸರ ಮೊರೆ ಹೋಗಿದ್ದಾರೆ. ಸುಚಿತ್ರ ತಕ್ಷಣವೇ ಆ ಫೇಸ್ ಬುಕ್ ಖಾತೆಯನ್ನು ಮುಂಬೈ ಪೊಲೀಸರಿಗೂ ಟ್ಯಾಗ್ ಮಾಡಿ, ಫೇಸ್ ಬುಕ್ ನಲ್ಲಿ ಈ ರೀತಿಯಾಗಿ ಸಂದೇಶ ಕಳುಹಿಸಿದ್ದಾನೆ. ದಯವಿಟ್ಟು ಇದರ ಬಗ್ಗೆ ಗಮನಹರಿಸಿ ಎಂದು ದೂರಿದ್ದಾರೆ. ಸುಚಿತ್ರಾ ಟ್ವೀಟ್ ಗೆ ಸ್ಪಂದಿಸಿರುವ ಮುಂಬೈ ಪೊಲೀಸರು ಈಗಾಗಲೇ ಆ ಖಾತೆಯ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ರೀ ಟ್ವೀಟ್ ಮಾಡಿದ್ದಾರೆ. ಅಲ್ಲದೇ ನೀವು ನೀಡಿದ ಮಾಹಿತಿಯನ್ನು ಸೈಬರ್ ಕ್ರೈಂ ವಿಭಾಗಕ್ಕೆ ರವಾನೆ ಮಾಡಲಾಗಿದೆ. ನಿಮಗೆ ಏನಾದರೂ ಸಮಸ್ಯೆ, ಆತಂಕ ಇದ್ದಲ್ಲಿ 100ಗೆ ಕರೆ ಮಾಡಿ’ ಎಂದು ಧೈರ್ಯ ತುಂಬಿದ್ದಾರೆ. ಸುಚಿತ್ರಾ ಕೃಷ್ಣಮೂರ್ತಿ ಟಿವಿ ನಟಿ, ಕೆಲವು ಸಿನಿಮಾದಲ್ಲೂ ನಟಿಸಿದ್ದಾರೆ. ಬರಹಗಾರ್ತಿ ಹಾಗೂ ಗಾಯಕಿಯೂ ಆಗಿದ್ದಾರೆ.
No Comment! Be the first one.