ಲಕ್ಷ್ಮಣ್ ಶಿವಶಂಕರ್ ರೂಪಿಸಿದ ಚೆಂದದ ಗೀತೆ…
ದೇಶದ ಗಡಿ ಕಾಯುವ ವೀರಯೋಧರಿಗೆ ಧನ್ಯವಾದ ಸಮರ್ಪಿಸುವ, ಹುರುಪು ತುಂಬುವಂಥಾ ಒಂದಷ್ಟು ಗೀತೆಗಳು ಸೃಷಟಿಯಾಗುತ್ತಿವೆ. ನಮ್ಮ ಯೋಧರನ್ನು ಬಲಿತೆಗೆದುಕೊಂಡ ಪುಲ್ವಾಮಾ ದಾಳಿಗೆ ಪ್ರತಿ ದಾಳಿ ಮಾಡಿದ ಯೋಧರಂತೂ ಈಗ ಭಾರತೀಯರ ಪಾಲಿನ ರಿಯಲ್ ಹೀರೋಗಳಾಗಿ ಕಂಗೊಳಿಸುತ್ತಿದ್ದಾರೆ. ಇದೀಗ ಪ್ರತೀಭಾವಂತ ನಟ ಲಕ್ಷ್ಮಣ ಶಿವಶಂಕರ್ ಮತ್ತೆ ತಮ್ಮದೇ ಶೈಲಿಯಲ್ಲಿ ಭಾರತೀಯ ಲಯೋಧರಿಗಾಗಿಯೇ ಹಾಡೊಂದನ್ನು ರೂಪಿಸಿದ್ದಾರೆ. ಮರೆಯಲಾರೆ ನಿನ್ನ ಕೀರ್ತಿ ಧೀರ ನೀನು ಅಮರನು ಎಂಬ ಹಾಡೀಗ ಯೂಟ್ಯೂಬ್ ನಲ್ಲಿ ದೇಶಭಕ್ತಿಯ ಸಂಚಲನ ಮೂಡಿಸುತ್ತಿದೆ. ಇದನ್ನು ನಟರಾಗಿ ಗುರುತಿಸಿಕೊಂಡಿರೋ ಲಕ್ಷ್ಮಣ ಶಿವಶಂಕರ್ ಅವರೇ ಬರೆದು ರೂಪಿಸಿದ್ದಾರೆ. ಕಿಶನ್ ಮೂರ್ತಿ ಸಂಗೀತ ಸಂಯೋಜನೆ ಮಾಡಿರುವ ಈ ಗೀತೆಯನ್ನು ಸಂಹಿತಾ ಭಾರಧ್ವಾಜ್ ಹಾಡಿದ್ದಾರೆ.
ಶತ್ರು ದೇಶದ ಗಡಿಯಾಚೆಗೆ ನುಗ್ಗಿ ಶೌರ್ಯ ಮೆರೆಯೋ ಯೋಧರಿಗೆ ಹುರುಪು ತುಂಬಿವಂತೆ ಈ ಹಾಡು ಮೂಡಿ ಬಂದಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿಯೂ ಇದು ವ್ಯಾಪಕವಾಗಿ ಹರಿದಾಡಲಾರಂಭಿಸಿದೆ. ಎಲ್ಲೆಡೆಯಿಂದಲೂ ಒಳ್ಳೆ ಮಾತುಗಳೂ ಕೇಳಿ ಬರುತ್ತಿವೆ. ಕೆಂಪಿರ್ವೆ ಚಿತ್ರದ ಮೂಲಕವೇ ಪ್ರತಿಭಾವಂತ ನಟನಾಗಿ ಹೊರ ಹೊಮ್ಮಿರುವ ಲಕ್ಷ್ಮಣ್ ಶಿವಶಂಕರ್ ಹಿರಿಯ ನಿರ್ದೇಶಕ ಸಿ ವಿ ಶಿವಶಂಕರ್ ಅವರ ಪುತ್ರ. ಇದೀಗ ಕನ್ನಡದಲ್ಲಿ ಅಗಾಧ ಅವಕಾಶಗಳೊಂದಿಗೆ ಬ್ಯುಸಿಯಾಗಿರುವ ಅವರ ಪ್ರತಿಭೆಯ ಮತ್ತೊಂದು ಮಗ್ಗುಲು ಈ ಹಾಡಿನ ಮೂಲಕ ಅನಾವರಣಗೊಂಡಿದೆ.
No Comment! Be the first one.