ಇಂಜಿನಿಯರ್‌ ಸೌಂಡು ಮಾಡೋದು ಗ್ಯಾರೆಂಟಿ!

ಸಿನಿಮಾದ ಅಫಿಷಿಯಲ್ ಟೀಸರ್‌ ಈಗ ಬಿಡುಗಡೆಯಾಗಿದೆ. ನಮ್ಮೂರಿನಲ್ಲಿ ನಡೆದ ಘಟನೆಯೊಂದರ ಸುತ್ತ ನಡೆದ ವಿಚಾರವನ್ನೇ ಕಾಡುವಂತೆ ಕಟ್ಟಿದ್ದಾರೆ ಅನ್ನೋದರ ಸೂಚನೆ ಸಿಕ್ಕಿದೆ. ಅತಿರಂಜಕ ವಿಚಾರಗಳನ್ನು ತುರುಕದೇ ಹೇಳಬೇಕಾದ್ದನ್ನು ನೇರಾನೇರ ನಿರೂಪಿಸಿದ್ದಾರೆ ಅನ್ನೋದು ಟೀಸರಿನಲ್ಲೇ ಗೊತ್ತಾಗುತ್ತಿದೆ.

ನೋ ಡೌಟ್!

ಕನ್ನಡ ಚಿತ್ರರಂಗ ಪಥ ಬದಲಿಸುತ್ತಿದೆ. ಒಂದಕ್ಕಿಂತಾ ಒಂದು ಭಿನ್ನ ಚಿತ್ರಗಳಿಲ್ಲಿ ಜೀವಪಡೆಯುತ್ತಿವೆ. ಸಿನಿಮಾ ಅಂದರೆ ಹೀಗೇ ಇರಬೇಕು ಅಂತಾ ಅಘೋಷಿತ ಸೂತ್ರ, ಸಿದ್ದ ಚೌಕಟ್ಟಲ್ಲಿ ಒದ್ದಾಡುತ್ತಿದ್ದ ಕಾಲವೊಂದಿತ್ತು. ಅಲ್ಲಲ್ಲಿ ಕೆಲವರು ಹೊಸ ತನವನ್ನು ಪರಿಚಯಿಸುತ್ತಿದ್ದರು. ಆದರೆ ಈಗ ಕನ್ನಡ ಚಿತ್ರರಂಗ ಸಾರಾಸಗಟಾಗಿ ಬದಲಾವಣೆಯ ಹಾದಿ ಹಿಡಿದಿದೆಯಾ ಅನ್ನಿಸುತ್ತಿದೆ. ಈ ನೆಲದಲ್ಲೇ ನಿರ್ಮಾಗೊಂಡ ಸಿನಿಮಾಗಳು ನೂರಾರು ಕೋಟಿಗಳನ್ನು ಧಾಟಿ ಸಾವಿರ ಕೋಟಿ ವಹಿವಾಟು ನಡೆಸುತ್ತಿವೆ. ಆರು ಕೋಟಿಯ ಕಾಂತಾರ ನೂರು ಕೋಟಿಯ ಗಡಿ ದಾಟಿ ದಾಖಲೆ ನಿರ್ಮಿಸುತ್ತಿದೆ. ಕೆ.ಜಿ.ಎಫ್‌ ಜಗದೆಲ್ಲೆಡೆ ಅಬ್ಬರಿಸಿದೆ. ಇದರ ನಡುವೆ ಹೊಸ ನಿರ್ದೇಶಕರ ಸಿನಿಮಾಗಳು ಕೂಡಾ ಅಚ್ಛರಿ ಮೂಡಿಸುವಂತೆ ರೂಪುಗೊಳ್ಳುತ್ತಿವೆ.

ಇದಕ್ಕೆ ಈ ಕ್ಷಣದ ಉದಾಹರಣೆ ಎಂದರೆ ಸೋಮು ಸೌಂಡ್‌ ಇಂಜಿನಿಯರ್.‌ ನಿರ್ದೇಶಕ ದುನಿಯಾ ಸೂರಿ ಜೊತೆ ಸಹಾಯಕ, ಸಹ ನಿರ್ದೇಶಕನಾಗಿದ್ದ ಹುಡುಗ ಅಭಿ. ನಂತರ ದುನಿಯಾ ವಿಜಯ್‌ ಪಾಳಯಕ್ಕೆ ಕಾಲಿಟ್ಟ ಅಭಿ ಸಲಗ ಸಿನಿಮಾಗಾಗಿ ದುಡಿದಿದ್ದರು. ಸಹ ನಿರ್ದೇಶನದ ಸಹವಾಸದಿಂದ ಹೊರಬಂದು ಬೇಗ ಡೈರೆಕ್ಷನ್‌ ಆರಂಭಿಸಿದವರು ಅಭಿ. ಈಗ ಸೋಮು ಸೌಂಡ್‌ ಇಂಜಿನಿಯರ್‌ ಸಿನಿಮಾವನ್ನು ಮುಗಿಸಿದ್ದಾರೆ. ಸಲಗ ಸಿನಿಮಾದಲ್ಲಿ ಕೆಂಡ ಪಾತ್ರದ ಮೂಲಕವೇ ಹೆಸರು ಮಾಡಿದ ಶ್ರೇಷ್ಠ ಈ ಚಿತ್ರದ ಹೀರೋ. ಸಿನಿಮಾದ ಅಫಿಷಿಯಲ್ ಟೀಸರ್‌ ಈಗ ಬಿಡುಗಡೆಯಾಗಿದೆ. ನಮ್ಮೂರಿನಲ್ಲಿ ನಡೆದ ಘಟನೆಯೊಂದರ ಸುತ್ತ ನಡೆದ ವಿಚಾರವನ್ನೇ ಕಾಡುವಂತೆ ಕಟ್ಟಿದ್ದಾರೆ ಅನ್ನೋದರ ಸೂಚನೆ ಸಿಕ್ಕಿದೆ. ಅತಿರಂಜಕ ವಿಚಾರಗಳನ್ನು ತುರುಕದೇ ಹೇಳಬೇಕಾದ್ದನ್ನು ನೇರಾನೇರ ನಿರೂಪಿಸಿದ್ದಾರೆ ಅನ್ನೋದು ಟೀಸರಿನಲ್ಲೇ ಗೊತ್ತಾಗುತ್ತಿದೆ. ಪಾತ್ರಗಳೆಲ್ಲಾ ನಮ್ಮ ಕಣ್ಮುಂದೆಯೇ ಚಲಿಸುತ್ತಿವೆಯಾ ಎನ್ನುವಷ್ಟರ ಮಟ್ಟಿಗೆ ದೃಶ್ಯಗಳು ನೈಜವಾಗಿವೆ. ಶಿವು ಸೇನಾ ಕ್ಯಾಮೆರಾ ಈ ಚಿತ್ರದ ಅತ್ಯುತ್ತಮ ಅಂಶಗಳಲ್ಲಿ ಒಂದಾಗುತ್ತದೆ ಅನ್ನೋದು ಗ್ಯಾರೆಂಟಿ.

ಇಷ್ಟು ದಿನ ನಮ್ಮ ನೆಲದ ಯಾವ ಕಥೆಗಳನ್ನು ಸಿನಿಮಾದವರು ʻಕಲಾತ್ಮಕʼ ಚೌಕಟ್ಟಿನಲ್ಲಿ ಬಂಧಿಸಿದ್ದರೋ ಅದೇ ಕಂಟೆಂಟು ಇಂದು ಹಣವನ್ನು ದೋಚುವ ಫಾರ್ಮುಲಾ ಆಗಿ ಬದಲಾಗುತ್ತಿದೆ. ಚಿತ್ರರಂಗದ ಪಾಲಿಗೆ ಇದಕ್ಕಿಂತಾ ಸಡಗರ ಇನ್ಯಾವುದಿದೆ. ಇನ್ನೊಂದು ವಿಚಾರ ; ಕನ್ನಡ ಚಿತ್ರರಂಗದ ಮಟ್ಟಿಗೆ ಉತ್ತರ ಕರ್ನಾಟಕದಿಂದ ಬಂದ ಹುಡುಗರು ನಿರ್ದೇಶಕರಾಗಿ ಗೆದ್ದಿರೋದು ಕಡಿಮೆ. ಸೋಮು ಸೌಂಡ್‌ ಇಂಜಿನಿಯರ್‌ ಟೀಸರ್‌ ನೋಡಿದರೆ ಅಭಿ ಸ್ಯಾಂಡಲ್‌ ವುಡ್‌ ನಲ್ಲಿ ಪರ್ಮನೆಂಟಾಗಿ ನೆಲೆಲಿಲ್ಲುವ ನಿರ್ದೇಶಕರಾಗುತ್ತಾರೆ ಅಂತನ್ನಿಸುತ್ತಿದೆ… ಅನಿಸಿಕೆ, ಅಭಿಪ್ರಾಯಗಳೆಲ್ಲಾ ನಿಜವಾಗಲಿ…

Comments

Leave a Reply