ತಾಯಿ ಪರ ಪ್ರಚಾರದಲ್ಲಿ ಸೋನಾಕ್ಷಿ ಸಿನ್ಹಾ!

ಲೋಕಸಭಾ ಚುನಾವಣೆಯ ಕಾವು ರಂಗೇರಿದ್ದು, ಸೋನಾಕ್ಷಿ ಸಿನ್ಹಾ ಸದ್ಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಲೋಕಸಭಾ ಚುನಾವಣೆ ಕಾವು ಬೇರೆ ಬೇರೆ ರಾಜ್ಯಗಳಲ್ಲಿ ಹೆಚ್ಚಾಗಿಯೇ ಇದೆ. ಈಗಾಗಲೇ ರೋಡ್ ಶೋಗಳು ಸೇರಿದಂತೆ ಸಭೆ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿವೆ. ಇದೀಗ ಲಖನೌ ದಲ್ಲಿ ಕೂಡ ಚುನಾವಣೆ ಕಾವು ರಂಗೇರಿದೆ. ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರ ತಾಯಿ ಪೂನಂ ಸಿನ್ಹಾರ ಚುನಾವಣಗೆ ಸ್ಪರ್ಧೆ ಮಾಡುತ್ತಿದ್ದಾರೆ. ಲಖನೌ ದಲ್ಲಿ ಸ್ಪರ್ಧೆ ಮಾಡುತ್ತಿದ್ದು ಇದೀಗ ತಾಯಿಯ ಪರ ಪ್ರಚಾರಕ್ಕಿಳಿದಿದ್ದಾರೆ ಸೋನಾಕ್ಷಿ ಸಿನ್ಹ.

ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರ ವಿರುದ್ದ ಎಸ್ಪಿ ಪಕ್ಷದಿಂದ ಪೂನಂ ಸಿನ್ಹಾ ಕಣಕ್ಕಿಳಿದಿರುವುದು ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ. ಸದ್ಯ ಲಖನೌದಲ್ಲಿ ನಡೆದ ರೋಡ್ ಶೋನಲ್ಲಿ 6 ಕಿ.ಮೀ. ದೂರದವರೆಗೆ ಅಭ್ಯರ್ಥಿ ಜೊತೆ ರೋಡ್ ಶೋ ನಲ್ಲಿ ಭಾಗವಹಿಸಿದ್ದರು. ಇನ್ನು ಈ ವೇಳೆ ಜನರೆಡೆಗೆ ತಾವು ಕೈ ಬೀಸಿದ ಫೋಟೊವನ್ನು ಈ ನಟಿ ಸ್ವತಃ ತಮ್ಮ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಚುನಾವಣೆ ಕಾವು ಜೋರಾಗಿದೆ.


Posted

in

by

Tags:

Comments

Leave a Reply