ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ತಳ್ಳಿದ ರಭಸಕ್ಕೆ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಆಯತಪ್ಪಿ ಕೆಳಗೆ ಬಿದ್ದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ವತಃ ಸೋನಾಕ್ಷಿ ಸಿನ್ಹಾ ಕೂಡ ಇನ್ ಸ್ಟಾಗ್ರಾಮ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ತಾಪ್ಸಿ ಪಾನ್ನು, ವಿದ್ಯಾಬಾಲನ್, ನಿತ್ಯಮೆನನ್ ಮಧ್ಯೆ ಕುಳಿತು ಮಂಗಳ್ ಮಿಷನ್ ಚಿತ್ರದ ಬಗ್ಗೆ ಮಾತನಾಡುತ್ತಿದ್ದ ಅಕ್ಷಯ್ ಕುಮಾರ್ ಅವರನ್ನು ಪಕ್ಕದಲ್ಲಿಯೇ ಕುಳಿತಿದ್ದ ಸೋನಾಕ್ಷಿ ಸಿನ್ಹಾ ತಳ್ಳಿದ್ದಾರೆ. ಇದರಿಂದಾಗಿ ಕುರ್ಚಿಯ ಮೇಲೆ ಕುಳಿತಿದ್ದ ಅಕ್ಷಯ್ ಕುಮಾರ್ ಹಾಗೆಯೇ ಕೆಳಗೆ ಬಿದಿದ್ದಾರೆ. ನಂತರ ಯಾಕಮ್ಮ ತಾಯಿ ಎನ್ನುವಂತೆ ಕೈ ತೋರಿಸುತ್ತಾ ನಗುತ್ತಲೇ ಮೇಲೆದ್ದು ಪುನಃ ತಮ್ಮ ಚೇರ್ ಮೇಲೆ ಕುಳಿತಿದ್ದಾರೆ. ಸೋನಾಕ್ಷಿ ಏನನ್ನೋ ಸಾಧಿಸಿದಂತೆ ಜೋರಾಗಿ ನಕ್ಕು ಸುಮ್ಮನಾಗಿದ್ದಾರೆ.