ಯೋಗರಾಜ್ ಭಟ್ ಆ್ಯಕ್ಷನ್ ಕಟ್ ಹೇಳಿದ್ದ ಪಂಚತಂತ್ರ ಸಿನಿಮಾದ ನಾಯಕಿ ಸೋನಲ್ ಮೊಂತೆರೋ ಸದ್ಯ ಪಂಚತಂತ್ರದ ಬಳಿಕ ಸಖತ್ ಬ್ಯುಸಿಯಾಗಿದ್ದಾರೆ. ಈಗಾಗಲೇ ಸಾಕಷ್ಟು ಆಫರ್ ಗಳು ಅವರನ್ನು ಹುಡುಕಿಕೊಂಡು ಬರುತ್ತಿದ್ದು, ಶೀಘ್ರದಲ್ಲಿ ಭಟ್ಟರು ಆರಂಭಿಸಲಿರುವ ಗಾಳಿಪಟ 2 ಚಿತ್ರದಲ್ಲಿಯೂ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಚಿತ್ರಕ್ಕೆ ನ್ಯಾಚುರಲ್ ರೇನ್ ಅವಶ್ಯಕತೆ ಇರುವುದರಿಂದ ಮಳೆಗಾಲಕ್ಕಾಗಿ ಚಿತ್ರತಂಡ ಕಾಯುತ್ತಿದೆ.
ಈ ನಡುವೆ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಸಿನಿಮಾವೊಂದಕ್ಕೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಅಯೋಗ್ಯ, ಚಮಕ್ ಹಿಟ್ ಸಿನಿಮಾಗಳನ್ನು ನೀಡಿರುವ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸಿನಿಮಾದಲ್ಲಿ ಸೋನಲ್ ವೈದ್ಯೆಯ ಪಾತ್ರದಲ್ಲಿ ಅಭಿನಯಿಸಲಿದ್ದು, ಉಪೇಂದ್ರ ಅವರ ಎದುರು ನಟಿಸಲು ಕೊಂಚ ನರ್ವಸ್ ಕೂಡ ಆಗಿದ್ದಾರೆ ಎನ್ನಲಾಗಿದೆ. ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ಸೋನಲ್ ನ ಶೂಟಿಂಗ್ ಶೆಡ್ಯೂಲ್ ಆರಂಭವಾಗಲಿದೆ.
Comments