ಬೇಸ್ ವಾಯ್ಸ್ ವಸಿಷ್ಠ ಸಿಂಹ ಮತ್ತು ಪಂಚತಂತ್ರ ಸುಂದರಿ ಸೋನಲ್ ಮಂಟೋರಿಯಾ ತಲ್ವರ್ ಪೇಟೆಯ ಮೂಲಕ ಒಂದಾಗಿದ್ದಾರೆ. ಹೌದು ವಿಭಿನ್ನ ಟೈಟಲ್ ಮೂಲಕವೇ ಸಿನಿ ರಸಿಕರನ್ನು ಗಮನ ಸೆಳೆದಿರುವ ತಲ್ವರ್ ಪೇಟೆ ಸಿನಿಮಾದಲ್ಲಿ ಈ ಜೋಡಿ ಡ್ಯುಯೇಟ್ ಆಡಲಿದ್ದಾರೆ. ಈ ಚಿತ್ರಕ್ಕೆ ರಾಮ ಲಕ್ಷ್ಮಣ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಕಥೆ, ಚಿತ್ರಕತೆ, ಸಂಭಾಷಣೆಯ ಜವಾಬ್ದಾರಿಯನ್ನು ಅವರೇ ವಹಿಸಿಕೊಂಡಿದ್ದಾರೆ. ಸದ್ಯ ಫ್ರೀ ಪ್ರೊಡಕ್ಷನ್ ಹಂತದಲ್ಲಿರುವ ತಲ್ವಾರ್ ಪೇಟೆಯ ಶೂಟಿಂಗ್ ಮುಂದಿನ ತಿಂಗಳಿನಿಂದ ಶುರುವಾಗಲಿದೆ.

ಈಗಾಗಲೇ ನಾಯಕ, ವಿಲನ್, ಗಾಯಕನಾಗಿ ಕಾಣಿಸಿಕೊಂಡಿರುವ ವಸಿಷ್ಠ ಸಿಂಹ ಕೆಜಿಎಫ್ 2 ಸೇರಿದಂತೆ ಬಹಳಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಪಂಚತಂತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ ಸೋನಲ್ ಬುದ್ದಿವಂತ 2, ಗಾಳಿ ಪಟ 2 ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಪಾಕ್ ಗೆ ಟಾಂಗ್ ಕೊಟ್ಟ ಪಾರುಲ್!

Previous article

ರಜನಿಗೆ ನಯನಾತಾರ ಟಾರ್ಚರ್!

Next article

You may also like

Comments

Leave a reply

Your email address will not be published. Required fields are marked *