ಸೂಪರ್ಸ್ಟಾರ್ ರಜನೀಕಾಂತ್ ಕಿರಿಯ ಪುತ್ರಿ ಸೌಂದರ್ಯ ತಮ್ಮ ಮದುವೆ ದಿನಾಂಕವನ್ನು ಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ. ಮುಂದಿನ ವಾರ ಫೆಬ್ರವರಿ 11ರಂದು ಅವರು ಉದ್ಯಮಿ, ನಟ ವಿಶಗನ್ ವನಂಗಮುಡಿ ಅವರನ್ನು ವರಿಸಲಿದ್ದಾರೆ. ಇದು ಸೌಂದರ್ಯ ಅವರ ಎರಡನೇ ಮದುವೆ. ಈ ಮೊದಲು ಅವರು ಉದ್ಯಮಿ ಅಶ್ವಿನ್ ರಾಮ್ಕುಮಾರ್ ಅವರನ್ನು ಮದುವೆಯಾಗಿದ್ದರು. ಇವರ ದಾಂಪತ್ಯಕ್ಕೆ ಪುತ್ರ ’ವೇದ್’ ಇದ್ದಾನೆ. ಹೊಂದಾಣಿಕೆಯ ಕಾರಣ ನೀಡಿ 2007ರಲ್ಲಿ ದಂಪತಿ ವಿಚ್ಛೇದನ ಪಡೆದಿದ್ದರು.
ಮೂಲತಃ ಗ್ರಾಫಿಕ್ ಡಿಸೈನರ್ ಆದ ಸೌಂದರ್ಯ ಹತ್ತಾರು ತಮಿಳು ಚಿತ್ರಗಳಿಗೆ ಗ್ರಾಫಿಕ್ ಡಿಸೈನ್ ಮಾಡಿದ್ದಾರೆ. ಮುಂದೆ ’ಕೊಚ್ಚಾಡಿಯಾನ್’ ಚಿತ್ರದೊಂದಿಗೆ ನಿರ್ದೇಶಕಿಯಾಗಿದರು. ರಜನೀಕಾಂತ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ’ವೇಳಯಿಲ್ಲಾ ಪಟ್ಟಧಾರಿ೨’ ಅವರ ನಿರ್ದೇಶನದ ಮತ್ತೊಂದು ಸಿನಿಮಾ. ಸೌಂದರ್ಯರನ್ನು ವರಿಸುತ್ತಿರುವ ವಿಶಗನ್ ಅವರು ಉದ್ಯಮಿ ವನಂಗಮುಡಿ ಅವರ ಪುತ್ರಿ. ವಿಶಗನ್ಗೂ ಇದು ಎರಡನೇ ವಿವಾಹ. ಈ ಮೊದಲು ಅವರು ಕನಿಕಾ ಕುಮಾರನ್ ಅವರನ್ನು ವರಿಸಿದ್ದರು. ’ವಂಜಗರ್ ಉಲಗಂ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ವಿಶಗನ್ ನಟಿಸಿದ್ದಾರೆ.
https://twitter.com/soundaryaarajni/status/1092303005871833089 #
No Comment! Be the first one.