ಜೀ ಕನ್ನಡ ವಾಹಿನಿಯ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಷೋ ಸರಿಗಮಪ ಸೀಸನ್ ೧೫ ಈಗ ಅದ್ದೂರಿ ಗ್ರಾಂಡ್ ಫಿನಾಲೆಯ ಹಂತವನ್ನು ತಲುಪಿದೆ. ಈಗಾಗಲೇ ಸೆಮಿಫೈನಲ್ಸನಲ್ಲಿ ಆಯ್ಕೆಯಾದ ಆರು ಜನ ಫೈನಲಿಸ್ಟ್ಗಳಲ್ಲಿ ಸರಿಗಮಪ-೧೫ರ ವಿಜೇತರನ್ನು ಆಯ್ಕೆಮಾಡಲು ಗ್ರಾಂಡ್ ಫಿನಾಲೆ ವೇದಿಕೆ ಈಗಾಗಲೇ ಸಜ್ಜಾಗಿದೆ. ಆರಂಭದಲ್ಲಿ ನಡೆದ ಮೆಗಾ ಆಡಿಶನ್ನಲ್ಲಿ ಆಯ್ಕೆಯಾದ ೨೦ ಜನ ಗಾಯಕರ ನಡುವೆ ಶುರುವಾದ ಈ ಸಂಗೀತ ಸ್ಪರ್ಧೆಯು ಈಗ ಯಶಸ್ವಿಯಾಗಿ ಇಪ್ಪತ್ತು ವಾರಗಳನ್ನು ಮುಗಿಸಿ, ಆರು ಜನರ ಜೊತೆಗೆ ಈಗ ಗ್ರಾಂಡ್ ಫಿನಾಲೆಯ ಹಂತವನ್ನು ತಲುಪಿದೆ. ವಿಶೇಷವಾಗಿ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಹಾವೇರಿ ಜಿಯ ಕುರಿಗಾಹಿ ಪ್ರತಿಭೆ ಹನುಮಂತ ಈಗ ಗ್ರಾಂಡ್ ಫಿನಾಲೆಯ ಹಂತವನ್ನು ತಲುಪಿzನೆ.
ಆತನ ಜೊತೆಗೆ ತನ್ನ ಮಧುರ ಕಂಠದ ಮೂಲಕವೇ ವೀಕ್ಷಕರ ಮನಗೆದ್ದ ವಿಜೇತ್ ಹಾಗೂ ಶಾಸ್ತ್ರೀಯ ಸಂಗೀತವನ್ನ ಕರಗತ ಮಾಡಿಕೊಂಡ ಕೀರ್ತನ್ ಹೊಳ್ಳ ಕೂಡ ಗ್ರಾಂಡ್ ಫಿನಾಲೆ ಹಂತವನ್ನು ತಲುಪಿzರೆ. ಇವರೊಂದಿಗೆ ಗ್ರಾಂಡ್ ಫಿನಾಲೆಯಲ್ಲಿ ಪೈಪೋಟಿ ನಡೆಸುತ್ತಿರುವವರು ಅಮ್ಮನ ಪ್ರೀತಿಯ ಜೊತೆಗೆ ಸಂಗೀತದ ಮೂಲಕ ಜನರ ಪ್ರೀತಿ ಗಳಿಸಿದ ಬೆಂಗಳೂರಿನ ರಿತ್ವಿಕ್, ಸ್ವರಗಳನ್ನ ಸುಲಲಿತವಾಗಿ ಹಾಡೋ ಸಾಧ್ವಿನಿ ಹಾಗೂ ತನ್ನ ಕಂಠದ ಕೇಳುಗರನ್ನು ಮೈಮರೆಸುವ ಮ್ಯಾಜಿಕಲ್ ವಾಯ್ಸನ ನಿಹಾಲ್ ತಾವ್ರೋ. ಈ ಎ ಭವಿಷ್ಯದ ಗಾಯಕರ ಈ ಸೀಸನ್ನಿನ ಭವಿಷ್ಯ ನಿರ್ಧಾರವಾಗುವುದು ಹಾಗೂ ಕಾನ್ಫಿಡೆಂಟ್ ಗ್ರೂಪ್ ನೀಡುವ ೩೫ಲP ರೂ.ಗಳ ಫ್ಲಾಟ್ ಯಾರ ಪಾಲಾಗುವುದೆಂದು ಇದೇ ೨೩ರ ಶನಿವಾರ ಸಂಜೆ ೬ ಗಂಟೆಗೆ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಸರಿಗಮಪ ಸೀಸನ್ ೧೫ರ ಗ್ರಾಂಡ್ ಫಿನಾಲೆ ಕಾರ್ಯಕ್ರಮಕ್ಕೆ ತಪ್ಪದೇ ಬನ್ನಿ. ಈ ಗ್ರಾಂಡ್ ಫಿನಾಲೆ ಕಾರ್ಯಕ್ರಮದ ನೇರಪ್ರಸಾರವನ್ನು ಜೀ೫ ಆಪ್ ನಲ್ಲಿ ವೀಕ್ಷಿಸಬಹುದಾಗಿದೆ.
#
No Comment! Be the first one.