ಟಾಲಿವುಡ್ನ ಶ್ರೀರೆಡ್ಡಿ ಬಾಲಿವುಡ್ ಫೈರ್ ಬ್ರ್ಯಾಂಡ್ ಕಂಗನಾ ರಣಾವತ್ಗೆ ಶಾಕ್ ನೀಡಿದ್ದಾರೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಬಯೋಪಿಕ್ನಲ್ಲಿ ಕಂಗನಾ ಅಭಿನಯಿಸುತ್ತಿದ್ದಾರೆ.. ಇದಕ್ಕೆ ಕಮೆಂಟ್ ಮಾಡಿರುವ ಶ್ರೀರೆಡ್ಡಿ, ತಮಿಳುನಾಡು ಸಾಮ್ರಾಜ್ಯವನ್ನು ಉಕ್ಕಿನ ಮಹಿಳೆ ಒಂದೇ ಒಂದು ಬೆರಳಿನಲ್ಲಿ ಆಳ್ವಿಕೆ ಮಾಡಿದರು. ಜಯಲಲಿತಾ ಸ್ಥಾನವನ್ನು ತುಂಬಲು ಇನ್ಯಾರಿಂದಲೂ ಸಾಧ್ಯವಿಲ್ಲ.
ತಲೈವಿ ಪಾತ್ರವನ್ನು ಮಾಡುವಂತಹ ವ್ಯಕ್ತಿಯನ್ನು ನಾನು ಇನ್ನೂ ನೋಡಿಯೋ ಇಲ್ಲ ಎಂದಿದ್ದಾರೆ. ಅವರಿಗೆ ಅವರೇ ಸಾಟಿ. ಆದರೆ ಬಯೋಪಿಕ್ ಎಂಬುದು ತುಂಬಾ ಮುಖ್ಯ. ಇದರಿಂದ ಮುಂದಿನ ತಲೆಮಾರಿಗೆ ಅವರ ಬಗ್ಗೆ ತಿಳಿದುಕೊಳ್ಳುವಂತಾಗುತ್ತದೆ. ದಕ್ಷಿಣದವರನ್ನೇ ಈ ಪಾತ್ರಕ್ಕೆ ಆಯ್ಕೆ ಮಾಡಿದ್ದರೆ ಸಾಕಾಗಿತ್ತು. ಕಂಗನಾ ರಣಾವತ್ ಬೇಡ” ಎಂದು ನೇರವಾಗಿ ಹೇಳುವ ಮೂಲಕ ಕಂಗನಾರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜಯಲಲಿತಾ ಜೀವನಾಧಾರಿತ ’ತಲೈವಿ’ ಸಿನಿಮಾ ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ತೆರೆಗೆ ತರಲಾಗುತ್ತಿದೆ. ತಮಿಳಿನಲ್ಲಿ ಈ ಸಿನಿಮಾಗೆ ’ತಲೈವಿ’, ಹಿಂದಿಯಲ್ಲಿ ’ಜಯ’ ಎಂಬ ಹೆಸರಿಡಲಾಗಿದೆ. ತಮಿಳಿನ ನಿರ್ದೇಶಕ ಎ.ಎಲ್.ವಿಜಯ್ ಜಯಲಲಿತಾ ಬಯೋಪಿಕ್ ನಿರ್ದೇಶನ ಮಾಡಲಿದ್ದಾರೆ.
No Comment! Be the first one.