ಕನ್ನಡದ ಸದಭಿರುಚಿಯ ನಿರ್ದೇಶಕರಲ್ಲಿ ಒಬ್ಬರಾಗಿರುವ ಶ್ರೀನಿ ಉರುಫ್ ಎಂ.ಜೆ. ಶ್ರೀನಿವಾಸ್ ಮದುವೆಗೆ ರೆಡಿಯಾಗಿದ್ದಾರೆ. ಪತ್ರಕರ್ತೆ ಶ್ರುತಿ ಎಂಬುವವರ ಜತೆ ಶ್ರೀನಿವಾಸ ಕಲ್ಯಾಣ ಜರುಗಲಿದೆ. ಇದು ಪಕ್ಕಾ ಲವ್ ಮ್ಯಾರೇಜ್ ಆಗಿದ್ದು, ಬಹಳ ವರ್ಷಗಳಿಂದ ಇವರು ಗೆಳೆಯರಾಗಿದ್ದು, ನಂತರ ಆ ಸ್ನೇಹ ಪ್ರೇಮಕ್ಕೆ ತಿರುಗಿ ಮದುವೆಯ ಸ್ಟೇಜಿಗೆ ತಲುಪಿದೆ.

ಇದೇ ತಿಂಗಳ 30ರಂದು ಈ ಜೋಡಿಯ ವಿವಾಹ ನೆರವೇರಲಿದ್ದು, ಮೈಸೂರಿನಲ್ಲಿ ಮದುವೆ ಸಂಬಂಧಿ ಕಾರ್ಯಕ್ರಮಗಳು ನಡೆಯಲಿದೆ. ರಿಯಲ್ ಸ್ಟಾರ್ ಉಪೇಂದ್ರ ಜತೆ ಗುರುತಿಸಿಕೊಂಡಿದ್ದ ಶ್ರೀನಿ ಟೋಪಿವಾಲ ಸಿನಿಮಾದ ಮೂಲಕ ನಿರ್ದೇಶನಕ್ಕಿಳಿದವರು. ಬಳಿಕ ಶ್ರೀನಿವಾಸ ಕಲ್ಯಾಣ, ಬೀರ್ ಬಲ್ ಚಿತ್ರಗಳಲ್ಲಿ ನಟನೆ ಹಾಗೂ ನಿರ್ದೇಶನವನ್ನು ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಸದ್ಯ ದಯಾಳ್ ಪದ್ಮನಾಭನ್ ಅವರ ರಂಗನಾಯಕಿಯಲ್ಲಿ ನಟಿಸುತ್ತಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಕನ್ನಡದ ಗಾಯಕನಿಗೆ ಅಮೆರಿಕಾದಲ್ಲಿ ಗೌರವ!

Previous article

ಟಾಲಿವುಡ್ ನಲ್ಲೂ ಐ ಲವ್ ಯು ಫೀವರ್ ಸಾಧ್ಯತೆ!

Next article

You may also like

Comments

Leave a reply

Your email address will not be published. Required fields are marked *