ಸದಾ ಒಂದಿಲ್ಲೊಂದು ತಂಟೆ ತಕರಾರುಗಳ ಮೂಲಕವೇ ವಿವಾದವೆಬ್ಬಿಸುವ ನಟಿ ಶ್ರೀರೆಡ್ಡಿ. ಸದ್ಯ ಅಂತಹುದೇ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ತೆಲುಗು ಬಿಗ್ ಬಾಸ್ ಹೌಸ್ ಬಗ್ಗೆ ನೆಗೆಟೀವ್ ಕಮೆಂಟ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವಿವಾದದ ಕಿಡಿ ಹೊತ್ತಿಸಿರುವ ಶ್ರೀರೆಡ್ಡಿ ಬಿಗ್ ಬಾಸ್ ಮನೆ ಈಗ ವೇಶ್ಯಾವಾಟಿಯ ಮನೆಯಂತಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೇ ಈ ಕುರಿತು ಮಾತನಾಡಿರುವ ಶ್ರೀರೆಡ್ಡಿ ತೆಲುಗು ಬಿಗ್ ಬಾಸ್ ಸೀಸನ್ 3 ರಲ್ಲಿ ಆಫರ್ ನೀಡುವುದಾಗಿ ನನ್ನನ್ನು ಸಂಪರ್ಕಿಸಿದರು. ಹೈದರಾಬಾದಿನ ಮಾಸಬ್ ಟ್ಯಾಂಕ್ ಬಳಿ ಇರುವ ಗೋಲ್ಕೊಂಡ ಹೋಟೆಲ್ ಗೆ ಬರಲು ಹೇಳಿದರು. ಅಭಿಷೇಕ್ ಎನ್ನುವವರು ನನ್ನನ್ನು ಸಂಪರ್ಕಿಸಿ ಅಲ್ಲಿ ಹೇಗಿರಬೇಕು? ಏನು ಮಾಡಬೇಕು ಎಂಬ ವಿಷಯಗಳನ್ನು ತಿಳಿಸಿದರು ಎಂದು ಒಂದೊಂದಾಗಿ ಬಹಿರಂಗಪಡಿಸಿದ್ದಾರೆ. ತಮ್ಮ ಮಾತನ್ನು ಮುಂದುವರೆಸಿದ ಶ್ರೀರೆಡ್ಡಿ ಅಭಿಷೇಕ್ ಎಂಬುವವರು ನಿಮಗೆ ಬೆಡ್ ಶೀಟ್ ಒಳಗೆ ಸೆಕ್ಸ್ ಮಾಡುವುದು ಇಷ್ಟವೇ? ಕ್ಯಾಮೆರಾಕ್ಕೆ ಕಾಣದಂತೆ ಆ ಕೆಲಸ ಮಾಡಲು ಸಿದ್ಧರಿದ್ದೀರಾ ಎಂದು ಕೇಳಿದರು. ಆಗ ನಾನು ನಗುತ್ತಲೇ ನಾಚಿಕೆಯಾಗುತ್ತದೆ ಎಂದು ಹೇಳಿದೆ ಎಂಬುದಾಗಿಯೇ ತಿಳಿಸಿದ್ದಾರೆ.