ವಿವಾದಿತ ನಟಿ ಶ್ರೀರೆಡ್ಡಿ, ವಿವಾದಾತ್ಮಕ ಆರೋಪಗಳನ್ನು ಮಾಡುತ್ತಲೇ ಸುದ್ದಿಯಾದವರು. ಇವಳ ಕೆಂಗಣ್ಣಿಗೆ ಟಾಲಿವುಡ್ ಮತ್ತು ಕಾಲಿವುಡ್ ನ ಬಹುತೇಕ ದೊಡ್ಡ ನಟರು, ನಿರ್ದೇಶಕರು, ನಿರ್ಮಾಪಕರೇ ಹೆಚ್ಚು ಗುರಿಯಾಗಿದ್ದಾರೆ. ಲೈಂಗಿಕ ದೌರ್ಜನ್ಯ, ವಂಚನೆ ಪ್ರಕರಣ ಇತ್ಯಾದಿ ಆರೋಪಕ್ಕೆ ಗುರಿಯಾಗಿ ಈಗಲೂ ತಲೆ ಎತ್ತದಂತಾಗಿದ್ದಾರೆ. ಇನ್ನು ಶ್ರೀರೆಡ್ಡಿ ತಮಿಳಿನ ಫೇಮಸ್ ಡೈರೆಕ್ಟರ್ ರಾಘವ ಲಾರೆನ್ಸ್ ಸಿನಿಮಾದಲ್ಲಿ ನಟಿಸುವುದಾಗಿಯೂ ಒಪ್ಪಿಕೊಂಡಿದ್ದು, ಕಾಲಿವುಡ್ ಪ್ರವೇಶಕ್ಕೆ ಎದುರು ನೋಡುತ್ತಿದ್ದಾರೆ.
ಈ ಮಧ್ಯೆ ಶ್ರೀರೆಡ್ಡಿ ತಮಿಳು ನಾಡಿನ ರಾಜಕೀಯ ಪ್ರವೇಶಕ್ಕೂ ಚಿಂತಿಸಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ಶ್ರೀರೆಡ್ಡಿ ಸಂದರ್ಶನವೊಂದನ್ನು ನೀಡಿದ್ದು, ಸದ್ಯ ತಮಿಳು ನಾಡಿನ ರಾಜಕೀಯದಲ್ಲಿ ಆಸಕ್ತಿ ಹೊಂದಿರುವ ಶ್ರೀರೆಡ್ಡಿ ತಮಿಳುನಾಡಿನ ದೊಡ್ಡ ಪಕ್ಷವೊಂದನ್ನು ಸೇರಲಿದ್ದಾರಂತೆ. ಅಧಿಕೃತ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ. ಲೋಕಸಭಾ ಚುನಾವಣೆಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿರುವ ವೈ.ಎಸ್. ಜಗಮೋಹನ್ ರೆಡ್ಡಿ ಅವರ ಪರ ಪ್ರಚಾರದಲ್ಲಿಯೂ ತೊಡಗಿಕೊಂಡಿದ್ದರು.
No Comment! Be the first one.