ಒಂದಕ್ಕಿಂದ ಒಂದು ಮೇಲೆಂಬಂಥಾ ಸವಾಲಿನ ಪಾತ್ರಗಳಲ್ಲಿ ನಟಿಸುತ್ತಾ, ಅಂಥಾದ್ದನ್ನೇ ಆರಿಸಿಕೊಂಡು ಮುಂದುವರೆಯುತ್ತಿರುವವರು ಹರಿಪ್ರಿಯಾ. ಕೈ ತುಂಬಾ ವೆರೈಟಿ ವೆರೈಟಿ ಚಿತ್ರಗಳಿರುವಾಗಲೇ ಆಕೆ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾಳೆ.
ಈ ಮೂಲಕವೇ ಹರಿಪ್ರಿಯಾ ಮಜಾ ಟಾಕೀಸ್ ಸೃಜನ್ ಲೋಕೇಶ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಈ ಚಿತ್ರಕ್ಕೆ ಎಲ್ಲಿದ್ದೆ ಇಲ್ಲಿತನಕ ಎಂಬ ಟೈಟಲ್ ಅನ್ನೂ ಇಡಲಾಗಿದೆ.
ಈಗ ಮಜಾ ಟಾಕೀಸ್ ಶೋನಲ್ಲಿ ಬ್ಯುಸಿಯಾಗಿರೋ ಸೃಜ ಒಂದಷ್ಟು ಕಾಲದಿಂದ ಚಿತ್ರರಂಗದಿಂದ ದೂರ ಉಳಿದಿದ್ದರು. ಅವರೀಗ ತಮ್ಮ ತಂದೆ ಲೋಕೇಶ್ ಅಭಿನಯದ ಪರಸಂಗದ ಗೆಂಡೆತಿಮ್ಮ ಚಿತ್ರದ ಹಾಡಿನ ಸಾಲನ್ನೇ ಶೀರ್ಷಿಕೆಯಾಗಿಸಿಕೊಂಡು ಮರಳಿದ್ದಾರೆ. ಇದನ್ನು ಸೃಜನ್ ಅವರೇ ನಿರ್ಮಾಣವನ್ನೂ ಮಾಡಲಿದ್ದಾರೆ. ಎಲ್ಲಿದ್ದೆ ಇಲ್ಲಿತಂಕ ಚಿತ್ರವನ್ನು ಮಜಾ ಟಾಕೀಸ್ ಟೀಮೇ ರೂಪಿಸಲಿದೆ. ಈ ಶೋನ ಡೈಲಾಗ್ ರೈಟರ್ ಆಗಿದ್ದ ತೇಜಸ್ವಿ ನಿರ್ದೇಶನ ಮಾಡಲಿದ್ದಾರೆ. ಯಥೇಚ್ಚ ಕಾಮಿಡಿ ಸೇರಿದಂತೆ ಮಜವಾದ ಗುಣ ಲಕ್ಷಣಗಳನ್ನು ಹೊಂದಿರೋ ಈ ಕಥೆಯ ನಾಯಕಿಯಾಗಿ ಹರಿಪ್ರಿಯಾ ನಿಕ್ಕಿಯಾಗಿದ್ದಾರೆ.
#