ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ವಿ. ಆರ್. ಮಂಜುನಾಥ್ ಅವರ ಸ್ಟಾರ್ ಕನ್ನಡಿಗ ಎಂಬ ಅಪ್ಪಟ ದೇಸಿ ಸಿನಿಮಾ ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡಿದ್ದು, ಬಿಡುಗಡೆ ಹಂತವನ್ನು ತಲುಪಿದೆ. ಕೊಟ್ಟ ಮಾತಿನಂತೆ ಸ್ಟಾರ್ ಕನ್ನಡಿಗ ಚಿತ್ರತಂಡ ಸ್ವಾತಂತ್ರ್ಯ ದಿನಚರಣೆಯ ಅಂಗವಾಗಿ ತನ್ನ ಮೊದಲ ಹಾಡನ್ನೂ ಜೀ ಮ್ಯೂಜಿಕ್ ಸೌಥ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಿದೆ.

ಏನಿದು.. ಏನು ರೂಪ ಇವಳದು ಎಂಬ ಹಾಡನ್ನು ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರತಿಕ್ರಿಯೆಯೂ ವ್ಯಕ್ತವಾಗಿದ್ದು, ಈ ಮಧ್ಯೆ ಲೂಸ್ ಮಾದ ಯೋಗಿ ಸ್ಟಾರ್ ಕನ್ನಡಿಗ ಚಿತ್ರದ ಮೊದಲ ಹಾಡನ್ನು ಅಧಿಕೃತವಾಗಿ ರಿಲೀಸ್ ಮಾಡಿ ಮೆಚ್ಚಿಕೊಂಡಿದ್ದಾರೆ.

ಅತೀವ ಸಿನಿಮಾಸಕ್ತಿಯಿಂದ ಬಣ್ಣದ ಲೋಕದ ಸೆಳೆತಕ್ಕೆ ಬಿದ್ದ ವಿ. ಆರ್. ಮಂಜುನಾಥ್ ನಟಿಸಿ, ನಿರ್ದೇಶನ ಮಾಡುತ್ತಿದ್ದು, ಅವರ ಆಟೋ ಸ್ನೇಹಿತರಾದ ಚೆನ್ನೀರ, ಹರೀಶ್ ಜೋಗಿ, ಅರುಣ್ ಕುಮಾರ್, ಭೈರವ, ಲಕ್ಷ್ಮೀ, ಮತ್ತು ಪ್ರಭು ನಿರ್ಮಾಣದ ಹೊಣೆಯನ್ನು ವಹಿಸಿಕೊಂಡಿದ್ದಾರೆ. ಮಂಜುನಾಥ್ ಗೆ ಶಾಲಿಭಟ್ ನಾಯಕಿಯಾಗಿ ಜತೆಯಾಗಿದ್ದು, ಚಿತ್ರದಲ್ಲಿ ಆಟೋ ಗೆಳತಿಯಾಗಿಯೂ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ನಿರ್ಮಾಪಕರ ಪಾತ್ರದಲ್ಲಿ ರಾಕ್‌ಲೈನ್ ಸುಧಾಕರ್, ಆಟೋ ಮಾಲೀಕನಾಗಿ ಕೋಬ್ರಾ ನಾಗರಾಜ್, ನವ ಪ್ರತಿಭೆಗಳಾಗಿ ಕಿರಣ್, ರೋಹಿತ್, ಕೆವಿನ್ ಮತ್ತಿತರರು ನಟಿಸಿದ್ದಾರೆ.

CG ARUN

ಸೈರಾ ನರಸಿಂಹರೆಡ್ಡಿಗೆ ಶುಭಕೋರಿದ ಕಿಚ್ಚ!

Previous article

ಸದ್ದು ಮಾಡುತ್ತಿದೆ ಕಪಟ ನಾಟಕ ಸೂತ್ರಧಾರಿಯ ಯಾಕೆ ಅಂತ ಗೊತ್ತಿಲ್ಲ ಕಣ್ರೀ ಸಾಂಗು!

Next article

You may also like

Comments

Comments are closed.