ಅದು ೨೦೧೭ರ ಮಾರ್ಚ್ ತಿಂಗಳು. ಇಡೀ ತಮಿಳು ಚಿತ್ರರಂಗದಲ್ಲಿ  ಆವತ್ತು ಸಂಚಲನವೆದ್ದಿತ್ತು. ಬಣ್ಣಲೋಕದಲ್ಲಿ ಥರ ಥರದ ಮೇಕಪ್ಪು ಮಾಡಿಕೊಂಡು ಸಭ್ಯರಂತೆ ಬದುಕುತ್ತಾ ನಾನಾ ಆಟ ಕಟ್ಟುವವರೆದೆಯಲ್ಲಿ ಭಯದ ನಗಾರಿ ಬಾರಿಸಲು ಶುರುವಾಗಿತ್ತು. ಇದೆಲ್ಲದಕ್ಕೆ ಕಾರಣವಾಗಿದ್ದವಳು ತಮಿಳುನಾಡಿನ ಫೇಮಸ್ ಸಿಂಗರ್ ಕಂ ರೇಡಿಯೋ ಜಾಕಿ ಸುಚಿತ್ರಾ ಕಾರ್ತಿಕ್!

ಸುಚಿತ್ರಾ ಒಂದರ ಹಿಂದೊಂದರಂತೆ ತಮಿಳು ಚಿತ್ರರಂಗದ ಸೆ ಕ್ಸ್ ಸ್ಕ್ಯಾಂಡಲ್‌ಗಳನ್ನು, ಪರ್ಸನಲ್ ಅಫೇರುಗಳನ್ನು ಸಾಕ್ಷಿ ಸಮೇತವಾಗಿ ಜಾಹೀರು ಮಾಡಿದ್ದಳು. ಕನ್ನಡದ ನಟಿ ಸಂಚಿತಾ ಶೆಟ್ಟಿಯ ವಿಡಿಯೋ ಲೀಕ್ ಆಗಿದ್ದರ ಹಿಂದಿದ್ದವಳೂ ಇದೇ ಸುಚಿತ್ರಾ. ‘ತಮಿಳು ಚಿತ್ರರಂಗದ ಕಾಮುಕತನವನ್ನು ಬಟಾಬಯಲು ಮಾಡ್ತೀನಿ ಅಂತೊಂದು ಪ್ರತಿಜ್ಞೆ ಮಾಡಿದ್ದ ಈಕೆಯ ಟಾರ್ಗೆಟ್ ತಮಿಳಿನ ಪ್ರಸಿದ್ಧ ನಟ ಕಂ ರಜನೀಕಾಂತ್ ಅಳೀಮಯ್ಯ ಧನುಷ್ ಮತ್ತು ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ಆಗಿದ್ದರು!

ಈಕೆ ತನ್ನ ಟ್ವಿಟರ್ ಮೂಲಕ ಧನುಷ್ ಹಾಗೂ ನಟಿ ತ್ರಿಶಾ ಜೊತೆಗಿರುವ ಖಾಸಗಿಯಾದ ಚಿತ್ರ ವಿಚಿತ್ರ ಭಂಗಿಗಳ ಫೋಟೋವನ್ನು ಜಾಹೀರು ಮಾಡಿದ್ದಾಳು. ಪಕ್ಕಾ ಖಾಸಗಿಯಾದ ಈ ಫೋಟೋಗಳೇ ತ್ರಿಶಾ ಮತ್ತು ಧನುಷ್ ನಡುವೆ ಬೇರೆ ವ್ಯವಹಾರಗಳಿರುವ ಹೊಳಹನ್ನೂ ಬಿಟ್ಟು ಕೊಡುವಂತಿದ್ದವು.

ಇದೆಲ್ಲ ಹಾಗಿರಲಿ. ರೇಡಿಯೋ ಜಾಕಿ ಹಾಗೂ ಸಿಂಗರ್ ಆಗಿ ಒಂದಷ್ಟು ಜನಪ್ರಿಯತೆ ಮತ್ತು ಕೈ ತುಂಬಾ ಕಾಸು ಹೊಂದಿದ್ದ ಈ ಹೆಣ್ಣುಮಗಳು ಸುಚಿತ್ರಾ ಯಾಕೆ ಹೀಗೆ ತಮಿಳು ಚಿತ್ರ ರಂಗದ ಕಾಮ ಪುರಾಣ ಬಗೆದು ಹೊರ ಹಾಕಲು ನಿಂತಿದ್ದಾಳೆ. ಭಾರೀ ಪ್ರಭಾವ ಹೊಂದಿರೋ ಧನುಷ್‌ನನ್ನ ಆಕೆ ಯಾಕೆ ಟಾರ್ಗೆಟ್ ಮಾಡಿದ್ದಾಳೆ ಎಂಬೆಲ್ಲ ಪ್ರಶ್ನೆಗಳು ಸಹಜವಾಗೇ  ಹುಟ್ಟಿಕೊಂಡಿತ್ತು. ಈ ಬಗ್ಗೆ ಕೆದಕಿದರೆ ಕೆಲ ಭಯಾನಕ ಅಂಶಗಳು ಜಾಹೀರಾಗಿದ್ದವು. ಸುಚಿತ್ರಾ ಆರಂಭದಿಂದಲೂ ಚಿತ್ರರಂಗದಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿದ್ದವಳು. ನೋಡಲೂ ಚೆಂದಗಿದ್ದಾಳೆ. ಈಕೆ ತಮಿಳು ಕಿರುತೆರೆ ಮತ್ತು ಚಿತ್ರರಂಗದಲ್ಲಿ ಪ್ರಸಿದ್ಧ ನಟನಾಗಿರುವ ಕಾರ್ತಿಕ್‌ನನ್ನು ಮದುವೆಯಾಗಿದ್ದಳು.   ಇಂಥಾ ಹೊತ್ತಲ್ಲಿ ಈಕೆ ಕಾಮುಕರ ಮೇಲೆ ತಿರುಗಿ ಬೀಳಲು ಕಾರಣವಾಗಿರೋದು ಆಕೆಯ ಮೇಲೆ ನಡೆದಿರೋ ರೇಪ್ ಎಂಬ ವಿಚಾರವೀಗ ಎಲ್ಲೆಡೆ ಹರಿದಾಡಿತ್ತು. ಈಕೆಯ ಮೇಲೆ ರೇ ಪ್ ಮಾಡಿದಾತ ಧನುಷ್ ಎಂಬ ರೂಮರುಗಳೂ ಕಾಳ್ಗಿಚ್ಚಿನಂತೆ ಹರಡಿತ್ತು. ಹೀಗೆ ತನ್ನ ಮೇಲೆ ರೇಪ್ ನಡೆದಿರೋದರಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಸುಚಿತ್ರಾ ತಮಿಳು ಚಿತ್ರರಂಗದ ಕಾಮಪುರಾಣ ಜಾಹೀರು ಮಾಡಲು ನಿಂತಳಾ ಅನ್ನೋ ಅನುಮಾನವೂ ಕಾಡಿತ್ತು.

ಆದರೆ, ಸುಚಿತ್ರಾಳ ಟ್ವಿಟರ್ ಕದನ ತಾರಕಕ್ಕೇರುತ್ತಲೇ ಆಕೆಯ ಪತಿ ಕಾರ್ತಿಕ್ ಈ ಬಗ್ಗೆ ಮಾತಾಡಿದ್ದ. ತನ್ನ ಹೆಂಡತಿ ಮಾನಸಿಕವಾಗಿ ಡಿಸ್ಟರ್ಬ್ ಆಗಿದ್ದಾಳೆ. ಆಕೆ ಎಮೋಷನಲ್ ಮೂಡಿನಲ್ಲಿದ್ದಾಳೆ. ಈಗ ಆಕೆಯ ಟ್ವಿಟರ್‌ನಿಂದ ಜಾಹೀರಾಗುತ್ತಿರೋ ವಿಚಾರಗಳಿಗೂ ಆಕೆಗೂ ಸಂಬಂಧವಿಲ್ಲ. ತನ್ನ ಮಡದಿಯ ಟ್ವಿಟರ್ ಅಕೌಂಟನ್ನ ಯಾರೋ ಹ್ಯಾಕ್ ಮಾಡಿದ್ದಾರೆ ಅಂತೆಲ್ಲ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದ.

ಮೊದಮೊದಲ ಬಾರಿಗೆ ಮೀಟೂ ವಿಚಾರವನ್ನು ಮೀಟಿದ್ದ ಸುಚಿತ್ರಾ ಆನಂತರ ಸಡನ್ನಗಿ ಮಂಗಮಾಯವಾಗಿದ್ದಳು. ಈಕೆ ಅಬ್ರಾಡಿನಲ್ಲಿದ್ದಾಳೆ ಅನ್ನೋ ಸುದ್ದಿ ಕೇಳಿಬರುತ್ತಿತ್ತು. ನೆನ್ನೆ ದಿನ ಚೆನ್ನೈನ ಅಡ್ಯಾರ್ ಪೊಲೀಸ್ ಠಾಣೆಯಲ್ಲಿ ಸುಚಿತ್ರಾ ಮಿಸ್ಸಿಂಗ್ ಪ್ರಕರಣ ದಾಖಲಾಗಿದೆ. ನನ್ನ ಅಕ್ಕ ಕಾಣೆಯಾಗಿದ್ದಾಳೆ ಅಂತಾ ಖುದ್ದಿ ಸುಚಿಯ ಸಿಸ್ಟರ್ ಸುನೀತಾ ಕಂಪ್ಲೇಂಟು ಕೊಟ್ಟಿದ್ದಳು. ಆದರೆ ಈ ಪ್ರಕರಣ ಕೂಡಾ ಅನುಮಾನಾಸ್ಪದವಾಗಿ ಟ್ವಿಸ್ಟು ಪಡೆದಿದೆ. ಕೆಲವೇ ಹೊತ್ತಿನಲ್ಲಿ ಅಡ್ಯಾರಿನಲ್ಲಿರುವ ಸ್ಟಾರ್ ಹೊಟೇಲಿನಲ್ಲಿ ಸುಚಿ ಸಿಕ್ಕಿದ್ದಾಳೆ.

ಒಂದು ಕಡೆ ಆಕೆಯ ಸಹೋದರಿಯೇ ಸುಚಿಗೆ ತಲೆ ಸರಿ ಇಲ್ಲ. ಆಕೆಗೆ ಮಾನಸಿಕ ಮಸ್ಯೆ ಇದೆ ಎಂದೆಲ್ಲಾ ಹೇಳಿದ್ದಾಳೆ. ಮತ್ತೊಂದು ಕಡೆ ಸುಚಿಯನ್ನು ಹೌಸ್ ಅರೆಸ್ಟ್ ಮಾಡಿದ್ದಾರೆ. ಎಲ್ಲಿ ಮತ್ತೆ ಲೀಕ್ ಮಾಡಲು ಶುರು ಮಾಡುತ್ತಾಳೋ ಅಂತಾ ಗೃಹ ಬಂಧನದಲ್ಲಿಟ್ಟಿದ್ದಾರೆ. ಇದರ ಹಿಂದೆ ಸಾಕಷ್ಟು ಕಾಣದ ಕೈಗಳಿವೆ ಎಂಬೆಲ್ಲಾ ಮಾಹಿತಿಗಳು ಲಭ್ಯವಾಗುತ್ತಿವೆ. ಅಸಲೀ ಕತೆ ಏನು ಅನ್ನೋದು ಸ್ವತಃ ಸುಚಿಗೆ ಮತ್ತು ಅವಳನ್ನು ಬಳಸಿಕೊಂಡಿರಬಹುದಾದ ಮಂದಿಗಷ್ಟೇ ಗೊತ್ತು!!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ವಸಿ ತಡ್ಕಂಡಿದ್ದವರು ಆರಂಭಿಸುತ್ತಿದ್ದಾರೆ!!

Previous article

ಉಪ್ಪಿ ಆಳ್ವಿಕೆಯ ಮತ್ತೊಂದು ಯುಗ ಶುರು!

Next article

You may also like

Comments

Leave a reply

Your email address will not be published. Required fields are marked *