ವಿನಯ್ ಗುರೂಜಿ ಕಿಚ್ಚ ಸುದೀಪ್ ಅವರ ಕುರಿತಾಗಿ ಹಗುರವಾಗಿ ಮಾತಾಡಿರುವ ವಿಡಿಯೋ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸುದೀಪ್ ಅವರ ಅಭಿಮಾನಿಗಳನ್ನು ಕೆರಳಿಸಿದೆ. ಸುದೀಪ್ ಸಾಂಸ್ಕೃತಿಕ ಪರಿಷತ್ತು ವಿನಯ್ ಗುರೂಜಿಗೆ ಬಹಿರಂಗ ಪತ್ರವೊಂದನ್ನು ಬರೆದು ಕ್ಷಮೆ ಯಾಚಿಸುವಂತೆ ಆಗ್ರಹಿಸಿದೆ. ಅದರ ಯಥಾವತ್ತು ವಿವರ ಇಲ್ಲಿದೆ…
ಡಿಯರ್ ವಿನಯ್..
ಸಾರಿ ಗುರು ನಿನ್ನನ್ನು ಗುರೂಜಿ ಅನ್ನೋಕೆ ಮನಸು ಬರ್ತಿಲ್ಲ ಏಕೆಂದರೆ ನೀನು ಗುರುಪರಂಪರೆಗೆ ಕಳಂಕವಾಗಿರವವನು. ನಮಗೆ ಗುರುಗಳು ಅಂದರೆ ಶಿವಕುಮಾರಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ. ವಿಶ್ವೇಶ ತೀರ್ಥ ಸ್ವಾಮೀಜಿ, ದೇಶಿಕೇಂದ್ರ, ಮುರುಘಾಮಠ, ನಿರ್ಮಲಾನಂದ ಸ್ವಾಮೀಜಿ, ಕಾಗಿನೆಲೆ, ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಆದಿಯಾಗಿ ಮೇಲ್ಪಂಕ್ತಿ ಹಾಕಿಕೊಟ್ಟಿರುವ ಅನೇಕರು ನೆನಪಾಗುತ್ತಾರೆ. ಆದರೆ ನೀನು ಕೆಳಪಂಕ್ತಿ ಹಾಕಿಕೊಟ್ಟ ನಿತ್ಯಾನಂದನ ಪರಂಪರೆಯವನು ನಿನ್ನನ್ನು ಗುರೂಜಿ ಎನ್ನಲು ಮನಸು ಬರ್ತಿಲ್ಲ…

ಅಲ್ಲಯ್ಯಾ.. ಸಿನಿಮಾಗಳೆಂದರೆ ನಿನ್ನ ಗೊಡ್ಡು ಜಾತಕ ಅಂದ್ಕೊಂಡ್ಯಾ? ನೀನು ಅಮಾಯಕರನ್ನು ಸುಲಿಗೆ ಮಾಡ್ತೀಯಲ್ವಾ ಆ ತರ ಅಂದ್ಕೊಂಡ್ಯಾ? ಸಹಾಯ ಕೇಳಿಬಂದ ಮಹಿಳೆಯನ್ನು ಅತ್ಯಾಚಾರ ಮಾಡ್ತೀಯಲ್ವಾ ಹಾಗೆ ಅಂದ್ಕೊಂಡ್ಯಾ? ಅಲ್ಲಾ ಕಣಯ್ಯಾ ಸಿನಿಮಾ ಅಂದ್ರೆ ಅದಲ್ಲ! ಸಿನಿಮಾ ಅಂದ್ರೆ ಅದೊಂದು ಮನರಂಜನೆಯ ತಾಣ. ಜನರು ತಮ್ಮೆಲ್ಲಾ ಸಮಸ್ಯೆಗಳು, ನೋವುಗಳು ಮತ್ತು ಕಷ್ಟಗಳನ್ನು ಮರೆಯಲಿಕ್ಕೆ ಆರಿಸಿಕೊಂಡಿರುವ ಮಾಧ್ಯಮ ಅದು. ಆ ಹೀರೋ ಹುಲಿ, ಸಿಂಹದಷ್ಟೇ ಶಕ್ತಿವಂತ ಅನ್ನಿಸಬೇಕು. ಪ್ರೇಕ್ಷಕರು ಮಾಡದ್ದನ್ನು ಮಾಡುವಂತಹ ಬಲಶಾಲಿಯಾಗಿರಬೇಕು. ಬುದ್ದಿವಂತನಾಗಿರಬೇಕು ಅದೇ ಕಾರಣಕ್ಕೆ ಆ ಕಾಲದಿಂದಲೂ ನಮ್ಮ ಸಿನಿಮಾಗಳು ಹುಲಿ ಸಿಂಹಗಳ ಹೆಸರಿನಲ್ಲಿ ಬರುತ್ತಿವೆ.. ಕೆರಳಿದ ಸಿಂಹನಾಗಿ ಅಣ್ಣಾವ್ರು ಮಾಡಿದ್ದಾರೆ. ಸಾಹಸಸಿಂಹನಾಗಿ ಯಜಮಾನ್ರು ಮಾಡಿದ್ದಾರೆ.

ಅಷ್ಟ್ಯಾಕೆ ಹಿಂದಿಯಲ್ಲಿ ಟೈಗರ್ ಜಿಂದಾ ಹೈ, ಟೈಗರ್ ತರಹದ ಸಿನಿಮಾಗಳು, ತೆಲುಗಿನಲ್ಲಿ ಬೊಬ್ಬಿಲಿ ಪುಲಿ, ಕೊದಮ ಸಿಂಹಂ, ತಮಿಳಿನಲ್ಲಿ ಸಿಂಗಂ, ಮಲೆಯಾಳಂನಲ್ಲಿ ಮನ್ಯಂಪುಲಿ ಕನ್ನಡದಲ್ಲಿ ಹೆಬ್ಬುಲಿ, ರಾಜಾಹುಲಿ, ತರಹದ ಸಿನಿಮಾಗಳು ಈಗಲೂ ಬರುತ್ತಲೇ ಇವೆ. ಬರೀ ಹೀರೋಗಳನ್ನು ಮಾತ್ರವಲ್ಲ, ದೇವರುಗಳನ್ನೂ ನಾವು ಹುಲಿ, ಸಿಂಹಗಳಿಗೆ ಹೋಲಿಸಿದ್ದೇವೆ. ಬಹುಶಃ ನೀನು ಅಮಾಯಕರ ಸುಲಿಗೆಯಲ್ಲಿ, ಕಾಮಪಟ್ಟುಗಳಲ್ಲಿ ಬ್ಯುಸಿ ಇರುವ ಕಾರಣಕ್ಕೆ ನಮ್ಮ ಪುರಾಣಗಳನ್ನು ಓದಿಕೊಂಡಿಲ್ಲ ಅನ್ಸುತ್ತೆ. ಒಂದ್ಸಲ ಓದಿ ನೋಡು ಗುರು. ನಿನಗೆ ಸಮಯ ಇಲ್ಲವೆಂದರೆ ಒಂದ್ಕೆಲಸ ಮಾಡು..

ನ್ಯೂಸ್ ಚಾನಲ್ ಆನ್ ಮಾಡ್ಕೊಂಡು ಅರ್ಧಗಂಟೆ ನೋಡು. ಮೋದಿ, ಅಮಿತ್ ಶಾ, ಡಿಕೆಶಿಯಂತಹವರನ್ನು ಅದೆಷ್ಟು ಸಲ ಮಾಧ್ಯಮದವರು ಹುಲಿ, ಸಿಂಹ ಅಂತಾರೆ ಅಂತ! ಅಂದ್ರೆ ಅದರ ಅರ್ಥ ಅವರು ಹುಲಿ, ಸಿಂಹಗಳ ಜೊತೆ ಯುದ್ದ ಮಾಡ್ತಾರೆ ಅಂತಲ್ಲ.. ಹುಲಿ ಸಿಂಹಗಳಷ್ಟೇ ಶಕ್ತಿವಂತರೂ ಅಂತ. ಇಂತಹ ಹೋಲಿಕೆಗಳಿಂದ ಯಾರಿಗೂ ನಷ್ಟವಿಲ್ಲ! ಇದು ರಂಜನೆಗಷ್ಟೆ.. ಆದರೆ ನೀನು ನಿನ್ನ ಬಗ್ಗೆ ಹೋಲಿಕೆ ಮಾಡಿಕೊಳ್ಳೋ ವಿಷಯಗಳು ಇವೆಯಲ್ಲವಾ ಅವು ಮಾತ್ರ ಭಯಂಕರ ಗುರು..

ನಾನು ಪವಾಡ ಪುರುಷ ಅಂತೀಯಾ..
ನಾನು ನಾರಾಯಣ ಗುರುವಿನ ಕಲಿಯುಗ ಅವತಾರ ಅಂತೀಯ..
ಅಯ್ಯೋ ಗುರು..
ದೇವ್ರಿಗೇ ನಿನ್ನನ್ನು ಹೋಲಿಸಿಕೊಳ್ತೀಯಲ್ವಾ ಎಷ್ಟು ನೀಚನಿರಬೇಕು ನೀನು? ಅವರಾದರೂ ಜನರ ರಂಜನೆಗೆ ಹುಲಿ ಸಿಂಹ ಅಂತಾರೆ. ಆದ್ರೆ ನೀನು ಜನರನ್ನು ವಂಚಿಸೋಕೆ ದೇವ್ರು, ಪವಾಡಪುರುಷ ಅಂತೀಯ.. ಯಾರು ಹೆಚ್ಚು ಅಪಾಯಕಾರಿ ಹೇಳು? ಆ ಸಿನಿಮಾ ನಟರಾದರೂ ತಮ್ಮ ಅಭಿಮಾನಿಗಳನ್ನು ರಂಜಿಸಲು ತುಂಬಾ ಕಷ್ಟಪಡ್ತಾರೆ. ದೇಹ ದಂಡಿಸ್ತಾರೆ. ಹಗಲೂ ರಾತ್ರಿ ದುಡೀತಾರೆ. ಬೀಳ್ತಾರೆ, ಏಳ್ತಾರೆ! ಗಾಯ ಮಾಡ್ಕೋತಾರೆ, ಆಸ್ಪತ್ರೆ ಸೇರ್ತಾರೆ. ಮತ್ತೆ ಬಂದು ಸಿನಿಮಾ ಮಾಡಿ ಪ್ರೇಕ್ಷಕರನ್ನು ರಂಜಿಸುವಂತಹ ಪುಣ್ಯದ ಕೆಲಸ ಮಾಡ್ತಾರೆ. ಆದ್ರೆ ನೀನು ದೇವರ ಹೆಸರು ಹೇಳ್ಕೊಂಡು ಹಣ ಮಾಡೋಕೆ ಇಳಿದಿದ್ದೀಯ? ಕಷ್ಟ ಅಂತ ಬಂದವರನ್ನು ಕಾಮದಿಂದ ನೋಡ್ತಿದ್ದೀಯ? ಜಾತಕದ ಹೆಸರಲ್ಲಿ ಮತ್ತೊಬ್ಬರ ಶ್ರಮದ ಹಣವನ್ನು ನಿನ್ನದಾಗಿಸಿಕೊಳ್ತಿದ್ದೀಯ? ಎಂಥಹಾ ನೀಚನಿರಬೇಕು ನೀನು.? ಈಗ ಹೇಳು ಹುಲಿ, ಸಿಂಹಗಳಿಗೆ ಹೋಲಿಸಿಕೊಂಡು ಜನರನ್ನು ರಂಜಿಸುವ ಸಿನಿಮಾ ನಟರು ಅಪಾಯಕಾರಿಯೋ, ದೇವ್ರಿಗೆ ಹೋಲಿಸಿಕೊಂಡು ಅವರಿಂದ ಹಣ ಮಾಡುವ ನೀನು ಅಪಾಯಕಾರಿಯೋ ಅಂತ.
ಈಗಲಾದರೂ ನಿನ್ನ ಕಾಮಾಲೆ ಕಣ್ಣಿನ ಪೊರೆ ಕಳಚಲಿ. ಕಿಚ್ಚ ಸುದೀಪ್ ಅವರಿಗೆ ಕ್ಷಮೆ ಕೇಳುವ ದೊಡ್ಡತನ ನಿನ್ನದಾಗಲಿ. ಇಲ್ಲವಾದರೆ ನಿನ್ನ ಆಶ್ರಮ, ಊರು, ಮನೆ ಎಲ್ಲಾದರೂ ಸರಿ ನಾವು ಬಂದು ಧರಣಿ ಮಾಡಿ ನ್ಯಾಯ ಕೇಳಿಯೇ ಕೇಳುತ್ತೇವೆ..

ಕಟ್ಟ ಕಡೆಗೊಂದು ಮಾತು ಗುರು..
ಸುದೀಪಣ್ಣನವರು ನಿಜವಾದ ಹುಲಿ ಬಂದರೆ ಹೆದರಬಹುದು.. ಆದರೆ ಸುದೀಪಣ್ಣನ ಕಣ್ಸನ್ನೆಯ ಕರೆಗೆ ಓಡೋಡಿ ಬರುವ ಅಭಿಮಾನ ಸೈನ್ಯವ ಕಂಡು ಹುಲಿ, ಸಿಂಹಗಳು ಮಾತ್ರವಲ್ಲ ನಿನ್ನ ತರಹದ ಡೋಂಗಿಗಳೂ ಸಹ ಚೆಡ್ಡಿ ಕೈನಲ್ಲಿ ಹಿಡಿದುಕೊಂಡು ಓಡಬೇಕಾಗುತ್ತೆ ನೆನಪಿರಲಿ..
ಸುದೀಪ್ ಸಾಂಸ್ಕೃತಿಕ ಪರಿಷತ್ತು
ಕಿಚ್ಚ ಸುದೀಪ್ ಬಳಿ ಕ್ಷಮೆ ಕೇಳದಿದ್ದರೆ
ಧರಣಿ ಮಾಡುತ್ತೇವೆ!
No Comment! Be the first one.