ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ ಶುಗರ್ ಫ್ಯಾಕ್ಟರಿ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಪೂರ್ಣವಾಗಿದೆ. ಬೆಂಗಳೂರು ಸುತ್ತಮುತ್ತ 12ದಿನಗಳ ಕಾಲ ನಡೆದಿದ್ದು, ಡಾರ್ಲಿಂಗ್ ಕೃಷ್ಣ, ಸೋನಾಲ್ ಮಾಂಟೆರೊ, ಅದ್ವಿತಿ ಶೆಟ್ಟಿ,
ಶಿಲ್ಪಾ ಶೆಟ್ಟಿ, ರಂಗಾಯಣ ರಘು, ಕಾಮಿಡಿ ಕಿಲಾಡಿಗಳು ಖ್ಯಾತಿ ಗೋವಿಂದೇ ಗೌಡ, ಸೂರಜ್ ಈ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಮಾರ್ಚ್ ಎರಡನೇ ವಾರ ದ್ವಿತೀಯ ಹಂತದ ಚಿತ್ರೀಕರಣ ಗೋವಾದಲ್ಲಿ ಆರಂಭವಾಗಲಿದೆ. ಮಾತಿನ ಭಾಗ ಹಾಗೂ ಹಾಡಿನ ಚಿತ್ರೀಕರಣ ನಡೆಯಲಿದೆ. ದೀಪಕ್ ಅರಸ್(ಅಮೂಲ್ಯ ಸೋದರ) ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಸೊನಾಲ್ ಮಾಂಟೆರೊ , ಅದ್ವಿತಿ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ರಂಗಾಯಣ ರಘು, ಗೋವಿಂದೇ ಗೌಡ, ಸೂರಜ್, ಮಹಾಂತೇಶ್(ಹೊಸ ಪರಿಚಯ), ಪವನ್ ಎಸ್ ನಾರಾಯಣ್, ಬ್ರೋ ಗೌಡ, ರಾಯಲ್ ರವಿ, ಅವೀಕ್ಷ, ನೀತು ರಾಯ್, D.J.ವಿಂಪಲ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ಧಾರೆ. ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್. ಆರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಚಿತ್ರದಲ್ಲಿ ಏಳು ಹಾಡುಗಳನ್ನು ಚೇತನ್ ಕುಮಾರ್ , ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಅರಸು ಅಂತಾರೆ, ಚಂದನ್ ಶೆಟ್ಟಿ, ರಾಘವೇಂದ್ರ ಕಾಮತ್ ಬರೆಯುತ್ತಿದ್ದಾರೆ ಕಬೀರ್ ರಫಿ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಅರ್ಜುನ್ ಸಾಹಸ ನಿರ್ದೇಶನ ಹಾಗೂ ಧನಂಜಯ್ ಅವರ ನೃತ್ಯ ನಿರ್ದೇಶನವಿರುವ ‘ಶುಗರ್ ಫ್ಯಾಕ್ಟರಿ’ ಗೆ ಚೇತನ್ ಕುಮಾರ್ ಹಾಗೂ ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆಯುತ್ತಿದ್ದಾರೆ.
No Comment! Be the first one.