ಅಪ್ಪ ಪಾಲಿಟಿಕ್ಸ್ ನಲ್ಲಿದ್ದಾರೆಂದರೆ ಮಕ್ಕಳು ಪಾಲಿಟಿಕ್ಸ್ ಗೆ ಎಂಟ್ರಿ ಪಡೆಯೋದು ಕಾಮನ್ನು. ಅದೇ ತರ ಅಪ್ಪನೊಬ್ಬ ಸ್ಟಾರ್ ನಟನಾಗಿದ್ದರೆ ಮಕ್ಕಳು ಸಹ ಆ ಸ್ಟಾರ್ ಗಿರಿಯ ಸಹಾಯದಿಂದ ಮುಗುಮ್ಮಾಗಿ ಕಲರ್ ಸ್ಟ್ರೀಟ್ ಗೆ ಎಂಟ್ರಿ ಪಡೆಯೋದು ಇಂದು ನಿನ್ನೆಯ ಸಂಗತಿಯಲ್ಲ. ಸದ್ಯ ಬಾಲಿವುಡ್ ನ ಕಿಂಗ್ ಖಾನ್ ಮಗಳು ಸುಹಾನ ಖಾನ್ ಅದೇ ರೂಟ್ ನಲ್ಲಿದ್ದಾರೆ.

ಈ ಹಿಂದೆ ಬಹಳಷ್ಟು ಬಾರಿ ಸುಹಾನ ಸಿನಿಮಾ ಮಾಡಲಿದ್ದಾರೆನ್ನುವ ಗುಸು ಗುಸು ಕೇಳಿಬರುತ್ತಲೇ ಇತ್ತು. ಅದ್ಯಾವುದಕ್ಕೂ ಬಲವಿಲ್ಲದೇ ಚರ್ಚೆಗೆ ಬರೋ ಮುಂಚೇನೇ ಮೂಲೆ ಸೇರುತ್ತಿತ್ತು. ಆದರೆ ಸದ್ಯ ಮಗಳನ್ನು ಬಿ ಟೌನ್ ಗೆ ಲಾಂಚ್ ಮಾಡೋದಕ್ಕೆ ಪೇರೆಂಟ್ಸ್ ತುದಿಗಾಲಿನಲ್ಲಿ ನಿಂತಿದ್ದಾರೆನ್ನುವ ಸುದ್ದಿ ಹರಿದಾಡುತ್ತಿದೆ. ಹೌದು ಶಾರುಖ್ ಖಾನ್ ಮತ್ತು ಗೌರಿ ಮಗಳು ಸುಹಾನಳನ್ನು ಬೆಳ್ಳಿತೆರೆಗೆ ಪರಿಚಯಿಸಲು ಪ್ಲ್ಯಾನ್ ಮಾಡಿಕೊಂಡಿದ್ದು, ಅವರಿಗೆ ಕರಣ್ ಜೋಹರ್ ಸಾಥ್ ನೀಡಿದ್ದಾರಂತೆ. ಮಗಳಿಗಾಗಿ ನಟನೆಯ ಕುರಿತಾಗಿ ಮನೆ ಪಾಠವನ್ನು, ಟ್ರೇನಿಂಗನ್ನು ಕಿಂಗ್ ಖಾನ್ ಶುರು ಮಾಡಿದ್ದಾರೆ ಎನ್ನಲಾಗುತ್ತಿದೆ. ಕರಣ್ ಜೋಹರ್ ಅವರ ಹೊಸ ಚಿತ್ರದಲ್ಲಿ ಸುಹಾನ ನಟಿಸುವುದು ನಿಕ್ಕಿಯಾಗಿದ್ದು, ಸದ್ಯದಲ್ಲೇ ಅದರ ಕುರಿತಾಗಿ ಅಧಿಕೃತ ಮಾಹಿತಿ ಹೊರಬೀಳಲಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಸದ್ಯದಲ್ಲೇ ರಿಲೀಸ್ ಆಗಲಿದೆ ನಿಗರ್ವ!

Previous article

ಧೂಳೆಬ್ಬಿಸಿದ ಎಬ್ಬಿಸಿದ ಸಾಹೋ ಟೀಸರ್!

Next article

You may also like

3 Comments

 1. Heya just wanted to give you a brief heads up and let you know a few
  of the images aren’t loading properly. I’m not sure why but I think its a linking issue.
  I’ve tried it in two different web browsers and
  both show the same outcome.

 2. Good post. I learn something totally new and challenging on sites
  I stumbleupon everyday. It’s always helpful to read through articles from other authors and practice a
  little something from their web sites.

 3. Now I am going away to do my breakfast, after having my breakfast coming over again to read additional news.

Leave a reply

Your email address will not be published. Required fields are marked *