ಇತ್ತೀಚಿಗೆ ಹರಿಪ್ರಿಯಾ ನಟನೆಯ ಸೂಜಿದಾರ ಸಿನಿಮಾ ರಿಲೀಸ್ ಆಗಿದ್ದು, ಡಾಟರ್ ಆಫ್ ಪಾರ್ವತಮ್ಮ ಪ್ರೆಸ್ ಮೀಟ್ ನಲ್ಲಿ ಹರಿಪ್ರಿಯಾ ಸೂಜಿದಾರ ಚಿತ್ರತಂಡದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಸೂಜಿದಾರ ಸಿನಿಮಾದಲ್ಲಿ ತನ್ನ ಪಾತ್ರವನ್ನು ಸರಿಯಾಗಿ ತೋರಿಸಿಲ್ಲ.  ಅಲ್ಲದೇ ತನ್ನ ಸಿನಿಮಾ ಎಂಬ ನಿರೀಕ್ಷೆಯಲ್ಲಿ ಬರುವ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ತಮ್ಮ ಜೊತೆ ಚರ್ಚಿಸದೇ ನಿರ್ದೇಶಕರು ಕಥೆಯನ್ನು ತಿರುಚಿದ್ದಾರೆ ಇತ್ಯಾದಿ ಆರೋಪಗಳಿಗೆ ಸಂಬಂಧಿಸಿದಂತೆ ಇದೀಗ ಸೂಜಿದಾರ ಚಿತ್ರತಂಡ ಹರಿಪ್ರಿಯಾ ವಿರುದ್ಧ ತಿರುಗಿಬಿದ್ದಿದ್ದು ವಾಣಿಜ್ಯ ಮಂಡಳಿಗೆ ದೂರು ನೀಡಿದೆ.

ಹರಿಪ್ರಿಯಾ ಅವರು ಅನಗತ್ಯವಾಗಿ ನಮ್ಮ ಹಾಗೂ ಚಿತ್ರತಂಡದ ಮೇಲೆ ಆರೋಪ ಮಾಡುತ್ತಿದ್ದಾರೆ. ಸಿನಿಮಾ ಇನ್ನು ಥಿಯೇಟರ್ ನಲ್ಲಿರುವಾಗಲೇ ಚಿತ್ರದ ಕುರಿತು ಅಪಪ್ರಚಾರ ಮಾಡುವುದು ಸರಿಯಲ್ಲ. ಇದರಿಂದ ಕಲೆಕ್ಷನ್ ಕೂಡ ಹಳ್ಳ ಹಿಡಿದಿದೆ ಎಂದು ಆರೋಪಿಸಿದ್ದಾರೆ. ಕಥೆಯನ್ನು ಹೇಳದೇ ಕೇಳದೇ ತಿರುಚಿದ್ದಾರೆ ಎನ್ನುವುದು ಅಪ್ಪಟ ಸುಳ್ಳು. ಆ ರೀತಿ ಯಾವುದೇ ರೀತಿಯ ದೃಶ್ಯಗಳನ್ನು ತಿರುಚಿಲ್ಲ. ಈ ಬಗ್ಗೆ ವಿಚಾರಿಸಲು ಹರಿಪ್ರಿಯಾಗೆ ಕರೆ ಮಾಡಿದರೂ ಆಕೆ ಫೋನ್ ರಿಸೀವ್ ಮಾಡುತ್ತಿಲ್ಲ.

ಇಂತಹ ಅನಗತ್ಯ ಹೇಳಿಕೆ ನೀಡಿರುವ ಹರಿಪ್ರಿಯಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಫಿಲ್ಮ ಚೇಂಬರ್ಗೆ ದೂರು ಸಲ್ಲಿಸಿದೆ.ಇತ್ತೀಚಿಗಷ್ಟೇ ಡಾಟರ್ ಆಫ್ ಪಾರ್ವತಮ್ಮ ಚಿತ್ರದ ಆಡಿಯೋ ಲಾಂಚ್ವೇಳೆ ಹರಿಪ್ರಿಯಾ ಚಿತ್ರತಂಡದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದು, ರಂಗಭೂಮಿಯವರಿಗಾಗಿ ಸಿನಿಮಾ ಮಾಡಿದ್ದೆ ಎಂದೂ ಹೇಳಿ ಸೂಜಿದಾರ ತಂಡ ಅಸಮಧಾನಕ್ಕೆ ಕಾರಣವಾಗಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಜೂನ್ ಅಂತ್ಯಕ್ಕೆ ಇಂಡಿಯನ್ 2 ಚಿತ್ರೀಕರಣ ಆರಂಭ!

Previous article

ಸದ್ಯದಲ್ಲೇ ಮತ್ತೊಂದು ಶಾಲೆಯ ಕಥೆ!

Next article

You may also like

Comments

Leave a reply

Your email address will not be published. Required fields are marked *