ಮೌನೇಶ್ ಬಡಿಗೇರ್ ಅವರ ನಿರ್ದೇಶನ ಹಾಗೂ ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿ ಹರಿಪ್ರಿಯ ಹಾಗೂ ಯಶವಂತ್ ಶೆಟ್ಟಿ ಅವರ ಅಭಿನಯದ ಬಹುನಿರೀಕ್ಷಿತ ಸಿನಿಮಾ ಸೂಜಿದಾರ ಮೇ 10ರಂದು ತೆರೆಗೆ ಬರಲು ರೆಡಿಯಾಗಿದೆ. ಮೈಮನ ಫೋಣಿಸುವ ಟ್ಯಾಗ್ ಲೈನೇ ಹೇಳುವಂತೆ ಈ ಸಿನಿಮಾ ಸೂಕ್ಷ್ಮ ಸಂವೇದನೆಯ ಭಾವನೆಗಳನ್ನು ಕಟ್ಟಿಕೊಡುವ ಸಿನಿಮಾ ಎನ್ನುವುದು ಟ್ರೇಲರ್ ನೋಡಿದವರು ಗೆಸ್ ಮಾಡಬಹುದು.
ಎಚ್.ಬಿ. ಇಂದ್ರಕುಮಾರ್ ಅವರ ಸಣ್ಣ ಕಥೆ ಆಧರಿಸಿ, ಅದಕ್ಕೆ ಹಲವು ಅಂಶಗಳನ್ನು ಸೇರಿಸಿ, ಪೋಣಿಸಿ ಹೆಣೆದ ಸಿನಿಮಾ ಸೂಜಿದಾರ. ಇದು ಮೌನೇಶ್ ಬಡಿಗೇರರ ಮೊದಲ ಸಿನಿಮಾವಾಗಿದ್ದು, ಹರಿಪ್ರಿಯ ಹಿಂದೆಂದೂ ಕಾಣಿಸದ ರೀತಿ ಈ ಸಿನಿಮಾದಲ್ಲಿ ಕಾಣಿಸಲಿದ್ದಾರೆ.
ಇನ್ನು ಸಚ್ಚೀಂದ್ರನಾಥ್ ನಾಯಕ ಮತ್ತು ಅಭಿಷೇಕ್ ಕೋಟೆಗಾರ್ ಸೂಜಿದಾರವನ್ನು ನಿರ್ಮಾಣ ಮಾಡಿದ್ದಾರೆ. ಸುಚೇಂದ್ರ ಪ್ರಸಾದ್, ಅಚ್ಯುತ್ ಕುಮಾರ್, ಚೈತ್ರಾ ಕೊಟ್ಟೂರು, ಬಿರಾದರ್, ಶ್ರೇಯಾ ಅಂಚನ್ ಅವರು ಸೂಜಿದಾರದ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಮೋಹನ್ ಅವರ ಸಂಕಲನ, ಅಶೋಕ್ ರಾಮನ್ ಅವರ ಛಾಯಾಗ್ರಹಣ ಮತ್ತು ಎಸ್. ಪ್ರದೀಪ್ ಕುಮಾರ್ ಅವರ ಹಿನ್ನೆಲೆ ಸಂಗೀತವಿದೆ.
No Comment! Be the first one.