ಕನ್ನಡದ ಸಾಕಷ್ಟು ನಟಿಯರು ಈಗ ತೆಲುಗಿನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಅದೇ ರೀತಿ ನಟಿ ಕಿರಗೂರಿನ ಗಯ್ಯಾಳಿ ಖ್ಯಾತಿಯ ಸುಕೃತಾ ವಾಗ್ಲೆ ಸಹ ಟಾಲಿವುಡ್ ನಲ್ಲಿ ತಮ್ಮ ಸಿನಿಮಾ ಪಯಣ ಶುರು ಮಾಡಿದ್ದಾರೆ. ಸುಕೃತಾ ವಾಗ್ಲೆ ರವರ ಮೊದಲ ತೆಲುಗು ಸಿನಿಮಾಗೆ ‘ರಾಮ ಚಕ್ಕನಿ ಸೀತಾ’ ಎನ್ನುವ ಟೈಟಲ್ ಇಡಲಾಗಿದೆ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇದೀಗ ಹೊರಬಂದಿದೆ. ಚಿತ್ರದ ಫಸ್ಟ್ ಲುಕ್ ಅನ್ನು ಸುಕೃತಾ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇಂದ್ರ, ಕಾಶಿ ವಿಶ್ವನಾಥ್, ಪ್ರಿಯದರ್ಶಿನಿ, ಅಭಯ್ ಮತ್ತು ಬುಲೇಟ್ ಭಾಸ್ಕರ್ ಸಿನಿಮಾದಲ್ಲಿ ನಟಿಸಿದ್ದಾರೆ. ರಾಮಾಯಣದ ಕೆಲವು ಘಟನೆಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆಯಂತೆ. ಸಿನಿಮಾ ಲವ್ ಸ್ಟೋರಿ ಹೊಂದಿದೆ. ಶ್ರೀಹರ್ಷ ಮಂದ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಂದಹಾಗೆ, ಸುಕೃತಾ ಕನ್ನಡದಲ್ಲಿ ‘ಜಟ್ಟ’, ‘ಕಿರಗೂರಿನ ಗಯ್ಯಾಳಿಯರು’, ‘ಮೇಘ ಅಲಿಯಾಸ್ ಮ್ಯಾಗಿ’ ಹೀಗೆ ವಿಭಿನ್ನ ಸಿನಿಮಾಗಳಲ್ಲಿ ನಟಿಸಿದ್ದಾರೆ.
Leave a Reply
You must be logged in to post a comment.