ಚುನಾವಣೆಯ ನಂತರ ರಾಜಕೀಯವಾಗಿ ಬ್ಯುಸಿಯಾಗಿದ್ದ ಸುಮಲತಾ ತಮ್ಮ ರಾಜಕಾರಣದ ಜತೆಗೆ ಅಲ್ಲಲ್ಲಿ ಸಾಕಷ್ಟು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಈ ಮಧ್ಯೆ ತೆಲುಗು ನಟ ಚಿರಂಜೀವಿ ಜತೆ ಸುಮಕ್ಕ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ವೈರಲ್ ಕೂಡ ಆಗಿದೆ.

ಚಿರಂಜೀವಿ ಅವರ ಜನ್ಮದಿನದ ಪಾರ್ಟಿಯಲ್ಲಿ ಭಾಗವಹಿಸಿದ್ದ ಸುಮಕ್ಕ ಡ್ಯಾನ್ಸ್ ಮಾಡಿದ್ದಲ್ಲದೇ ಈ ವಿಡಿಯೋವನ್ನು ಸ್ವತಃ ಸುಮಲತಾ ಅವರೇ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ರಾಜ್ಯದಲ್ಲಿ ಪ್ರವಾಹ ಸ್ಥಿತಿಯಿಂದ ಜನರು ಪರಿತಪಿಸುತ್ತಿರುವಾಗ ಸುಮಲತಾ ಡ್ಯಾನ್ಸ್ ಮಾಡಿರುವುದಕ್ಕೆ ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಸುಮಲತಾ ಹೆಸರಿನ ನಕಲಿ ಫೇಸ್ ಬುಕ್ ಖಾತೆಯಲ್ಲಿ ಈ ವಿಡಿಯೊ ವೈರಲ್ ಆಗಿದೆ. ಕಿಡಿಗೇಡಿಗಳು ಹಳೆಯ ವಿಡಿಯೊ ಹರಿಬಿಟ್ಟಿದ್ದಾರೆ. ಈ ಸಂಬಂಧ ಸುಮಲತಾ ಸೈಬರ್ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆಂದು ಸುಮಕ್ಕನ ಬೆಂಬಲಿಗರು ತಿಳಿಸಿದ್ದಾರೆ.

CG ARUN

ನನಗೆ ಕನ್ನಡ ಸಿನಿಮಾದಲ್ಲಿ ನಟಿಸುವ ಆಸೆ ಇದೆ: ಪ್ರಭಾಸ್

Previous article

ಚಿತ್ರೀಕರಣ ಮುಗಿಸಿಕೊಂಡ ಅಲ್ಲೇ ಡ್ರಾ ಅಲ್ಲೇ ಬಹುಮಾನ!

Next article

You may also like

Comments

Leave a reply

Your email address will not be published. Required fields are marked *