ಯಜಮಾನ ಚಿತ್ರದ ಟ್ರೈಲರ್, ಹಾಡುಗಳ ಬಗ್ಗೆ ಈ ಕ್ಷಣಕ್ಕೂ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದೆ. ದರ್ಶನ್ ಅವರ ರಗಡ್ ಡೈಲಾಗ್ಗಳೀಗ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿವೆ. ಇದೆಲ್ಲವನ್ನೂ ಮೆಚ್ಚಿಕೊಂಡು ಬೆನ್ತಟ್ಟುತ್ತಲೇ ತುಸು ಮುಂಚಿತವಾಗಿ ಸುಮಲತಾ ಅಂಬರೀಶ್ ದರ್ಶನ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.
ಅಭಿಷೇಕ್ ಪಾಲಿಗೆ ನೀನು ದೊಡ್ಡಣ್ಣನಿದ್ದಂತೆ. ಅವನಿಗೆ ಸ್ಫೂರ್ತಿಯೂ ನೀನೇ. ನೀನು ನಡೆದದ್ದೇ ದಾರಿ. ಅದಕ್ಕಾಗಿ ಕಾಯುತ್ತಾ, ಹುಟ್ಟುಹಬ್ಬಕ್ಕೆ ತುಸು ಮುಂಚೆಯೇ ಶುಭ ಕೋರುತ್ತಿದ್ದೇನೆ ಅಂತ ಸುಮಲತಾ ಟ್ರವಿಟರ್ ಮೂಲಕ ಬರೆದುಕೊಂಡಿದ್ದಾರೆ.
ಅಂಬರೀಶ್ ನಿರ್ಗಮನದ ನಂತರದಲ್ಲಿ ಅಮರ್ ಚಿತ್ರ ಇದೀಗ ಟೇಕಾಫ್ ಆಗಿದೆ. ದೊಡ್ಡಣ್ಣಲನಂತೆಯೇ ಮುಂದೆ ನಿಂತು ದರ್ಶನ್ ಅಮರ್ ಚಿತ್ರದ ದೇಖಾರೇಖಿನೋಡಿಕೊಳ್ಳುತ್ತಿದ್ದಾರೆ. ಅಭಿಷೇಕ್ ನಾಯಕನಾಗಿ ಎಂಟ್ರಿ ಕೊಡುತ್ತಿರುವ ಈ ಚಿತ್ರದ ಪ್ರತೀ ವಿಚಾರಗಳಿಗೂ ಪ್ರೋತ್ಸಾಹ ನೀಡುತ್ತಾ ಹೆಜ್ಜೆ ಹೆಜ್ಜೆಗೂ ದರ್ಶನ್ ತಮ್ಮನಂಥಾ ಅಭಿಗೆ ಹುರುಪು ತುಂಬುತ್ತಿದ್ದಾರೆ. ಅಭಿಷೇಕ್ ತನ್ನ ತಂದೆ ದರ್ಶನ್ ನಿಧನರಾದ ನಂತರದಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಆದ ಕಾರಣವೇ ಅಮರ್ ಚಿತ್ರ ಕೊಂಚ ತಡವೂ ಆಗಿತ್ತು. ಆದರೀಗ ದರ್ಶನ್ ಸಾಥ್ ನೊಂದಿಗೆ ಅಭಿ ಮತ್ತದೇ ಹುರುಪಿನೊಂದಿಗೆ ಅಖಾಡಕ್ಕಿಳಿದಿದ್ದಾರೆ.
#
No Comment! Be the first one.