ಕನ್ನಡ ಸಿನಿ ಪ್ರೇಕ್ಷಕರಿಗೆ ಸಸ್ಪೆನ್ಸ್ ಥ್ರಿಲರ್ ಚಿತ್ರಗಳ ಹುಚ್ಚು ಹಿಡಿಸಿದ ಮಾಸ್ಟರ್ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ, ಉದ್ಘರ್ಷದ ಮೂಲಕ ಈಗ ಮತ್ತೆ ದೊಡ್ಡ ನಿರೀಕ್ಷೆ ಹುಟ್ಟುಹಾಕಿದ್ದಾರೆ. ಆದ್ರೆ, ಪ್ರತಿ ಸಾರಿ ಸುನೀಲ್ ಕುಮಾರ್ ದೇಸಾಯಿ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಹರಡುತ್ತಿದ್ದಂತೆ, ನೀವು ಯಾವಾಗ ಕರುನಾಡ ಕಿಚ್ಚ, ಬಾದ್ಷಾ ಸುದೀಪ್ ಜೊತೆ ಯಾವಾಗ ಚಿತ್ರ ಮಾಡ್ತೀರಿ? ಅಂತಾ ಪ್ರಶ್ನಿಸುವ ಅಭಿಮಾನಿಗಳ ಸಂಖ್ಯೆಗೆ ಮಿತಿಯಿಲ್ಲ.
ಆದ್ರೆ ಈ ಬಾರಿ ಮತ್ತೊಂದು ಸರ್ಪ್ರೈಸ್ ನೀಡಿರೋ ದೇಸಾಯಿ, ಕಿಚ್ಚ ಸುದೀಪ್ರಿಂದ ಉದ್ಘರ್ಷ ಚಿತ್ರದ ಟ್ರೇಲರ್ಗೆ ಸೈಲಂಟ್ ಆಗಿಯೇ ಡಬ್ಬಿಂಗ್ ಮಾಡಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಮೂಡಿ ಬಂದಿರೋ ಈ ಚಿತ್ರದ ಟ್ರೇಲರ್ ಕಂಡು ಫುಲ್ ಇಂಪ್ರೆಸ್ ಆಗಿರೋ ಕಿಚ್ಚ ಸುದೀಪ್, ಅತ್ಯಂತ ಖುಷಿಯಿಂದಲೇ ಕಂಠದಾನ ಮಾಡಿದ್ದಾರೆ.
ನಿನ್ನೆ ಸೋಮವಾರ ಹೈದರಾಬಾದ್ಗೆ ತೆರಳಿದ್ದ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, ನಿರ್ಮಾಪಕರಾದ ಆರ್. ದೇವರಾಜ್ ಸುದೀಪ್ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಜೊತೆಗೆ ಹೈದರಾಬಾದ್ನಲ್ಲಿಯೇ ಸುದೀಪ್ರಿಂದ ಟ್ರೇಲರ್ಗೆ ಡಬ್ಬಿಂಗ್ ಮಾಡಿಸಿದ್ದಾರೆ. ವಿಶೇಷ ಅಂದರೆ ನಾಲ್ಕೂ ಭಾಷೆಯಲ್ಲೂ ಸುದೀಪ್ರದ್ದೇ ಧ್ವನಿ ಕೇಳಲಿದ್ದು, ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಲು ಕಾರಣವಾಗಿದೆ. ಇನ್ನೊಂದೆಡೆ ಮುಂದಿನ ಚಿತ್ರದಲ್ಲಿ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸುದೀಪ್ರನ್ನು ನಿರ್ದೇಶನ ಮಾಡಲಿದ್ದಾರಾ? ಅನ್ನೋ ಕುತೂಹಲವನ್ನೂ ಈ ಭೇಟಿ ಹೆಚ್ಚಿಸಿದೆ.
ಇನ್ನು ಬಹುಭಾಷೆಯಲ್ಲಿ ಮೂಡಿ ಬಂದಿರೋ ಉದ್ಘರ್ಷದಲ್ಲಿ ಮಿಸ್ಟರ್ ವರ್ಲ್ಡ್ ಠಾಕೂರ್ ಅನೂಪ್ ಸಿಂಗ್ ನಾಯಕನಾಗಿ ಅಭಿನಯಿಸಿದ್ದಾರೆ ತಾನ್ಯಾ ಹೋಪ್, ಧನ್ಸಿಕಾ ನಾಯಕಿಯರಾಗಿ ಅಭಿನಯಿಸಿದ್ದಾರೆ. ಇನ್ನು ಮೋಸ್ಟ್ ವಾಂಟೆಡ್ ವಿಲನ್ ಕಬೀರ್ ಸಿಂಗ್ ದುಹಾನ್, ಶ್ರವಣ್ ರಾಘವೇಂದ್ರ, ಬಾಹುಬಲಿ ಪ್ರಭಾಕರ್ ಇನ್ನೂ ಮುಂತಾದವರು ವಿಲನ್ ಆಗಿ ಅಭಿನಯಿಸಿದ್ದಾರೆ. ಜೊತೆಗೆ ವಂಶಿ ಕೃಷ್ಣ, ಕನ್ನಡಿಗ ಕಿಶೋರ್, ನಟಿ ಹರ್ಷಿಕಾ ಪೂಣಚ್ಚ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
ಇನ್ನು ಚಿತ್ರಕ್ಕೆ ದಿವಂಗತ ವಿಷ್ಣುವರ್ಧನ್ ಹಾಗೂ ಖ್ಯಾತ ಛಾಯಾಗ್ರಹಕ ಪಿ.ರಾಜನ್ ಛಾಯಾಗ್ರಹಣವಿದ್ದು, ಬಾಲಿವುಡ್ನ್ ಸಂಜೋಯ್ ಚೌಧುರಿ ಸಂಗೀತ ಸಂಯೋಜಿಸಿದ್ದಾರೆ.
#
No Comment! Be the first one.