ಸನ್ನಿ ಲಿಯೋನ್ ಎಂಬ ಹೆಸರಿಗೆ ಸಮ್ಮೋಹಕವಾದೊಂದು ಸೆಳೆತವಿದೆ. ಅದಕ್ಕೆ ಕಾರಣವಾದ ‘ನೀಲಿ’ ನೆರಳು ಏನೇ ಇರಬಹುದು. ಆಕೆಯೀಗ ಬಹು ಬೇಡಿಕೆಯ ನಟಿಯಾಗಿ ರೂಪುಗೊಂಡಿದ್ದಾಳೆ. ತನ್ನನ್ನು ಹಳೇ ಇಮೇಜಿನಲ್ಲಿ ನೋಡಬೇಡಿ ಅಂತ ಆಕೆ ಪದೇ ಪದೆ ಕೇಳಿಕೊಳ್ಳುತ್ತಿರುವುದು ಬದಲಾವಣೆಯ ಸಂಕೇತದಂತೆಯೇ ಗೋಚರಿಸುತ್ತಿದೆ. ಇವತ್ತು ಈ ಹೆಣ್ಣುಮಗಳ ಹುಟ್ಟಿದ ದಿನ. ಬದುಕನ್ನು ಬೇರೆಯದ್ದೇ ರೀತಿಯಲ್ಲಿ ಸ್ವೀಕರಿಸಿ, ʼಅನುಭವಿಸಿʼದ ಸನ್ನಿಯ ಸಂದರ್ಶನ ಇಲ್ಲಿದೆ…
- ವಯಸ್ಕರು ಮಾತ್ರ ನೋಡುವ ಸಿನಿಮಾಗಳಿಂದ ಬಾಲಿವುಡ್ವರೆಗೆ ಪ್ರಯಾಣ ಬೆಳೆಸಿರುವ ನೀವು ಈ ಹಾದಿಯಲ್ಲಾದ ಅನುಭವಗಳ ಬಗ್ಗೆ ಹೇಳುವಿರಾ? : ಅಲ್ಲಿಗೂ ಇಲ್ಲಿಗೂ ೩೬೦ ಡಿಗ್ರಿ ವ್ಯತ್ಯಾಸವಿದೆ. ನನಗೆ ಯಾವತ್ತಿಗೂ ಇಷ್ಟವಿದ್ದಿದ್ದು ಈಗ ಕ್ಯಾಮೆರಾ ಮುಂದೆ ಕೆಲಸ ಮಾಡುತ್ತಿರುವ ರೀತಿಯಲ್ಲಿ ಒಬ್ಬ ಮುಖ್ಯವಾಹಿನಿ ನಾಯಕಿಯಾಗಿ ಕೆಲಸ ಮಾಡುವುದು. ಸಾಮಾನ್ಯವಾಗಿ ವಯಸ್ಕ ಸಿನಿಮಾಗಳಲ್ಲಿ ನಟಿಸಿದ ಯಾವ ತಾರೆಗೂ ಮುಖ್ಯವಾಹಿನಿ ನಾಯಕಿಯಾಗುವ ಅವಕಾಶ ಸಿಗುವುದು ಅಸಾಧ್ಯ. ಈ ವಿಷಯದಲ್ಲಿ ನಾನು ನಿಜಕ್ಕೂ ಅದೃಷ್ಟವಂತೆ.
- ಬಾಲಿವುಡ್ನಲ್ಲಿ ನಿಮ್ಮನ್ನು ಒಪ್ಪಿಕೊಳ್ಳುವುದು ಹೇಗೆ ಸಾಧ್ಯವಾಯಿತು? : ನನ್ನನ್ನು ಒಪ್ಪಿಕೊಳ್ಳಲು ಇದ್ದ ದೊಡ್ಡ ಕಾರಣ ಬಿಗ್ಬಾಸ್ನಲ್ಲಿ ನಾನು ಭಾಗವಹಿಸಿದ್ದು. ಅದರಲ್ಲಿ ನನ್ನನ್ನು ಪ್ರೇಕ್ಷಕರು ರಿಯಲ್ಟೈಮ್ನಲ್ಲಿ ವೀಕ್ಷಿಸಿದ್ದರು. ನಿಜವಾದ ಸನ್ನಿ ಲಿಯೋನೆ ಪ್ರತಿನಿತ್ಯ ಟಿವಿಯಲ್ಲಿ ರಾತ್ರಿ ೧೦ ಗಂಟೆಗೆ ಆಗಮಿಸುವುದು, ಉಳಿದೆಲ್ಲ ಸಾಮಾನ್ಯ ಹುಡುಗಿಯರಂತೆ ಎಲ್ಲಾ ಕೆಲಸಗಳನ್ನು ಮಾಡುವುದನ್ನು ನೋಡಿದ್ದು ನನ್ನನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಸಿತು. ಒಂದೊಮ್ಮೆ ನಾನೇನಾದರೂ ನೇರವಾಗಿ ಬಾಲಿವುಡ್ನಲ್ಲಿ ನಟಿಯಾಗಲು ಮುಂಬೈಗೆ ಬಂದಿದ್ದರೆ ನನ್ನನ್ನು ಒಪ್ಪಿಕೊಳ್ಳುವುದು ಸಾಧ್ಯವೇ ಇರಲಿಲ್ಲ.
- ಈಗಲೂ ನೀವು ನೀಲಿ ಸಿನಿಮಾಗಳಲ್ಲಿ ನಟಿಸುತ್ತಿದ್ದೀರಾ? : ನಾನು ಈಗಲೂ ಅಂಥಾ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ ಎಂಬುದು ಬಹಳಷ್ಟು ಜನರಲ್ಲಿರುವ ತಪ್ಪು ಕಲ್ಪನೆ. ನಾನು ಬಿಗ್ಬಾಸ್ಗೆ ಬರುವ ಸಮಯದಲ್ಲೇ ವಯಸ್ಕ ಸಿನಿಮಾಗಳಲ್ಲಿ ನಟಿಸುವುದನ್ನು ತೊರೆದಿದ್ದೆ. ನಾನು ಹಿಂದೆ ನಟಿಸಿರುವ ವಿಡಿಯೋಗಳನ್ನು ಅಂತರ್ಜಾಲದಿಂದ ಅಳಿಸುವುದು ಸಾಧ್ಯವಿಲ್ಲ ಎನ್ನುವುದು ನಿಜ.
- ನೀವು ನೀಲಿ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ಕ್ಯಾಮೆರಾ ಎದುರು ನಿಂತಾಗ ಏನನಿಸಿತ್ತು? : ನೋಡಿ. ಅಂತಿಮವಾಗಿ ಅದು ಒಂದು ಬಿಸ್ನೆಸ್. ಜಗತ್ತಿನ ಯಾವುದೇ ಮೂಲೆಯಲ್ಲೂ ನಷ್ಟವನ್ನೇ ಅನುಭವಿಸದ ಒಂದು ದೊಡ್ಡ ಬಹುಕೋಟಿ ಉದ್ದಿಮೆ ಅದು. ನನ್ನ ಮನಸ್ಸಿನಲ್ಲಿರುತ್ತಿದ್ದುದು ಒಂದೇ – ನಾನು ಸಹಿ ಹಾಕಿರುವ ನಿರ್ಮಾಪಕರಿಗೆ ನಾನು ಮಾತು ಕೊಟ್ಟ ರೀತಿ ಕಾಣಿಸಿಕೊಳ್ಳಬೇಕು. ಆ ಮೂಲಕ ಸಾಧ್ಯವಾದಷ್ಟು ಹೆಚ್ಚಿನ ಹಣಗಳಿಸಬೇಕು. ಮೊಟ್ಟಮೊದಲು ನಾನು ಅದರಲ್ಲಿ ನಟಿಸಿದಾಗ ನನ್ನ ಬಾಯ್ಫ್ರೆಂಡ್ ಜೊತೆ ನಟಿಸಿದೆ. ಅಂತಹ ಸಿನಿಮಾಗಳಲ್ಲಿ ನಾನು ಕೆಲವೇ ಜನರೊಂದಿಗೆ ನಟಿಸಿದ್ದೇನೆ. ಅದರಲ್ಲಿ ಒಬ್ಬ ನನ್ನ ಹಾಲಿ ಗಂಡ. ಈತನೇ ನನ್ನ ಬಾಯ್ಫ್ರೆಂಡ್ ಆಗಿದ್ದವ.
- ನೀವು ಆ ಉದ್ಯಮಕ್ಕೆ ಸೇರಿದಾಗ ನಿಮ್ಮ ಕುಟುಂಬದ ಪ್ರತಿಕ್ರಿಯೆ ಹೇಗಿತ್ತು? : ಸಹಜವಾಗಿಯೇ ಎಲ್ಲಾ ಕುಟುಂಬಗಳಂತೆ ನನ್ನ ಕುಟುಂಬವೂ ಚಿಂತೆಗೀಡಾಗಿತ್ತು. ನನ್ನ ತಂದೆಗೆ ನಾನು ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ಅವರನ್ನು ಒಂದು ಮಾತೂ ಕೇಳಲಿಲ್ಲ ಎಂಬ ಕಾರಣಕ್ಕೆ ಬೇಸರವಾಗಿತ್ತು. ಆದರೆ ಅವರು ಕೊನೆಗೆ ಒಂದೇ ಮಾತು ಹೇಳಿದ್ದರು. ಏನೇ ಮಾಡಿದರು ಅದರಲ್ಲಿ ಯಶಸ್ವಿಯಾಗು ಎಂದು. ಆ ಮಾತನ್ನು ನಾನು ಎಂದಿಗೂ ನೆನಪಿನಲ್ಲಿಟ್ಟುಕೊಂಡಿರುತ್ತೇನೆ ನಿಮ್ಮಲ್ಲಿರುವ ಉತ್ತಮ ಮತ್ತು ಇಷ್ಟವಾಗದ ಅಂಶ? : ಬುದ್ಧಿವಂತಿಕೆ ನನ್ನ ಉತ್ತಮ ಅಂಶ. ಸಿಕ್ಕಾಪಟ್ಟೆ ಸೆಂಟ್ ಉಪಯೋಗಿಸುವ ಗಂಡಸರನ್ನು ಕಂಡರೆ ನನಗೆ ಇಷ್ಟವಾಗುವುದಿಲ್ಲ.
- ನಿಮ್ಮ ದೇಹದ ಆತ್ಯಾಕರ್ಷಕ ಅಂಗ? : ನನ್ನ ಮುಖ. ಆದರೆ ಜನ ಹೆಚ್ಚಾಗಿ ನನ್ನ ಸ್ತನಗಳು ಮತ್ತು ತೊಡೆ ಭಾಗವನ್ನು ಇಷ್ಟಪಡುತ್ತಾರೆ! ಒಂದು ವಯಸ್ಕರ ಸಿನಿಮಾ ಮಾಡಬೇಕೆಂದುಕೊಂಡರೆ ಬಾಲಿವುಡ್ನಲ್ಲಿ ನಾಯಕ ಪಾತ್ರಕ್ಕೆ ಯಾರನ್ನು ಆರಿಸುತ್ತೀರಿ? : ಇದಕ್ಕೆ ಉತ್ತರಿಸಿದರೆ ನಾನು ಸಮಸ್ಯೆಯಲ್ಲಿ ಸಿಕ್ಕಿಬೀಳುತ್ತೇನೆ. ಹಾಗಾಗಿ ನೋ ಕಮೆಂಟ್ಸ್. ನಿಮ್ಮ ಇಷ್ಟದ ಬಾಲಿವುಡ್ ಸಿನಿಮಾ ಯಾವುದು? : ಆಶಿಕಿ-೨. ಅದನ್ನು ನೋಡುತ್ತಾ ನಾನು ತುಂಬಾ ಅತ್ತುಬಿಟ್ಟೆ.
- ಒಬ್ಬ ಹೆಂಡತಿ ಮತ್ತು ಸೋದರಿಯಾಗಿ ಸನ್ನಿ ಲಿಯೋನ್ ಹೇಗೆ?: ಮನೆಯಲ್ಲಿ ನಾನು ಒಬ್ಬಳು ಮಾಮೂಲಿ ಹೆಂಡತಿ. ನಾನು ಮತ್ತು ನನ್ನ ಗಂಡ ತುಂಬ ಆರೋಗ್ಯಕರವಾಗ ಸಂಬಂಧ ಹೊಂದಿದ್ದೇವೆ. ಒಟ್ಟಿಗೇ ಅಡುಗೆ ಮಾಡುತ್ತೇವೆ. ಒಟ್ಟಿಗೇ ಸಿನಿಮಾ ನೋಡುತ್ತೇವೆ. ಒಬ್ಬ ಸೋದರಿಯಾಗಿ ನಾನು ದೊಡ್ಡವಳಾದ್ದರಿಂದ ಬಹಳ ಕಾಳಜಿವಹಿಸುತ್ತೇನೆ. ನಮ್ಮೊಂದಿಗೆ ಅಪ್ಪ ಅಮ್ಮ ಇಲ್ಲವಾದ್ದರಿಂದ ನನ್ನ ಸೋದರನಿಗೆ ಬದುಕಿನಲ್ಲಿ ಆತನ ಯಶಸ್ಸಿಗೆ ಬೇಕಾದ ಎಲ್ಲವನ್ನೂ ನೀಡಲು ಯತ್ನಿಸುತ್ತಿದ್ದೇನೆ. ಇಷ್ಟವಾದ ತಿನಿಸು ಯಾವುದು?: ಟ್ರಫಲ್ ಮ್ಯಾಕ್ ಎನ್ ಚೀಸ್. ಬಹಳ ಚೀಸ್ ಹಾಕಿ ನಾನೇ ತಯಾರಿಸಿ ಅರ್ಧದಷ್ಟು ನಾನೇ ತಿಂದುಬಿಡುತ್ತೇನೆ.
- ಕೊರೋನಾ ಲಾಕ್ಡೌನ್ ಸಮಯವನ್ನು ಹೇಗೆ ಕಳೆಯುತ್ತಿದ್ದೀರಿ? ಬೋರ್ ಅನಿಸಿಲ್ವಾ?: ನನ್ನ ಮಕ್ಕಳೊಂದಿಗೆ ಹೆಚ್ಚಿನ ಹೊತ್ತು ಕಾಲ ಕಳೆದಿದ್ದೇನೆ. ಅವರಿರುವಾಗ ಸಮಯ ಸಾಗುವುದೇ ಗೊತ್ತಾಗೋದಿಲ್ಲ… ಕನ್ನಡದಲ್ಲಿ ನೀವು ಮೊದಲ ಸಲ ಅಭಿನಯಿದ ಡಿಕೆ ಚಿತ್ರದ ಅನುಭವದ ಹೇಗಿತ್ತು?: ನಾನು ತುಂಬಾ ಖುಷಿಯಿಂದ ಈ ತಂಡದ ಜೊತೆ ಭಾಗವಹಿಸುತ್ತಿದ್ದೇನೆ. ಒಂದು ವಿಭಿನ್ನ ಅನುಭವ ನನಗಾಗಿದೆ. ಪ್ರೇಮ್ ಹಾಗೂ ನಿರ್ದೇಶಕ ವಿಜಯ್, ನೃತ್ಯ ನಿರ್ದೇಶಕ ನಾಗೇಶ್ ಸಾಕಷ್ಟು ತರಬೇತಿ ನೀಡಿದ್ದಾರೆ. ಇಂದ್ರಜಿತ್ ಲಂಕೇಶ್ ಅವರ ನಿರ್ದೇಶನದ ಸಿನಿಮಾದಲ್ಲೂ ನಾನು ನಟಿಸಿದ್ದೀನಿ. ಉತ್ತಮ ಅವಕಾಶ ಬಂದರೆ ಕನ್ನಡದ ಇತರ ಚಿತ್ರಗಳಲ್ಲೂ ಅಭಿನಯಿಸುತ್ತೇನೆ.