ವಯಸ್ಕರ ಸಿನಿಮಾಗಳ ಮೂಲಕವೇ ಫೇಮಸ್ ಆದ ನೀಲಿ ಚಿತ್ರತಾರೆ ಸನ್ನಿ ಲಿಯೋನ್, ರೆಸ್ಕಾನ್ ಎಂಬ ಹೆಸರಿನಲ್ಲಿಯೇ ಬಾಲಿವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಬಹಳಷ್ಟು ಸಿನಿಮಾಗಳ ಹಾಡುಗಳಲ್ಲಿ ಬ್ಯುಸಿಯಾಗಿರುವ ಸನ್ನಿ, ಟಿವಿ ಕಾರ್ಯಕ್ರಮಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ನೀಲಿ ತಾರೆ ಎನ್ನುವ ಪಟ್ಟದಿಂದ ಪೂರ್ಣಪ್ರಮಾಣದ ನಟಿಯಾಗಬೇಕೆಂಬ ಹಂಬಲದಲ್ಲಿಯೇ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಸನ್ನಿ ಲಿಯೋನ್ ಇತ್ತೀಚಿಗೆ ಟಿವಿ ಕಾರ್ಯಕ್ರಮವೊಂದರಲ್ಲಿ ಕಣ್ಣೀರಿಟ್ಟು ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದ್ದಾರೆ.
ಸನ್ನಿಲಿಯೋನ್ ನ ತಂಡದ ಸದಸ್ಯರಾಗಿದ್ದ ಪ್ರಭಾಕರ್ ಎಂಬಾತನು ಸನ್ನಿ ಲಿಯೋನ್ ಗೆ ಬಹಳಷ್ಟು ಆಪ್ತರಾಗಿದ್ದರು. ಆದರೆ ಇತ್ತೀಚಿಗೆ ಕಿಡ್ನಿ ವೈಫಲ್ಯದಿಂದ ನಿಧನರಾಗಿದ್ದಾರೆ. ಪ್ರಭಾಕರ್ ಕಿಡ್ನಿ ವೈಫಲ್ಯ ಹಾಗೂ ಕಿಡ್ನಿ ಕಸಿ ಕುರಿತಾಗಿಯೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಸಹ ಮಾಡಿದ್ದರು. ಈ ಪೋಸ್ಟ್ ಗೆ ಬಹಳಷ್ಟು ನೆಗೇಟೀವ್ ಕಮೆಂಟ್ ಗಳು ಬಂದಿದ್ದು, ಸಾಕಷ್ಟು ಮಂದಿ ಕೋಟ್ಯಾಂತರ ರೂಪಾಯಿಯ ಕಾರುಗಳನ್ನು ಖರೀದಿಸಲು ಆಗುತ್ತದೆ ಅವರನ್ನು ಉಳಿಸಿಕೊಳ್ಳಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದರು.
ಟಿವಿ ಕಾರ್ಯಕ್ರಮದಲ್ಲಿಯೂ ಪ್ರಭಾಕರ್ ಕುರಿತಾಗಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಆಗ ಪ್ರಭಾಕರ್ ಅವರ ಆರೋಗ್ಯದ ಕುರಿತಾಗಿ ಮಾಹಿತಿ ಬಿಚ್ಚಿಟ್ಟಿದ್ದು, ಪ್ರಭಾಕರ್ ಅವರು ದೀರ್ಘಕಾಲದಿಂದಲೂ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅಲ್ಲದೇ ನಮ್ಮ ಪತಿ ಅವರ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದರು. ಅಲ್ಲದೇ ಮೆಡಿಕಲ್ ಖರ್ಚು ವೆಚ್ಚವನ್ನು ನೋಡಿಕೊಳ್ಳುತ್ತಿದ್ದರು. ಹಾಗೂ ಪ್ರಭಾಕರ್ ಮಗನ ಜವಾಬ್ದಾರಿಯನ್ನು ನಾವೇ ವಹಿಸಿಕೊಂಡಿದ್ದೇವೆ ಎಂದು ಹೇಳುತ್ತಲೇ ಪ್ರಭಾಕರ್ ನೆನೆದು ಕಣ್ಣೀರಿಟ್ಟರು. ಇನ್ನು ಪ್ರಭಾಕರ್ ಕುರಿತಾಗಿ ಮಾತನಾಡಿದ ಸನ್ನಿ ಲಿಯೋನ್, ಪ್ರಭಾಕರ್ ಒಬ್ಬ ಸಹೃದಯಿ. ಅವರು ಎಂದಿಗೂ ಸಹಾಯಕ್ಕಾಗಿ ಕೈ ಚಾಚಿದವರಲ್ಲ. ನಾನು ಅನಗತ್ಯ ಮಾತುಗಳ ಕುರಿತಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ನಾವು ಪ್ರಭಾಕರ್ ನ್ನು ಉಳಿಸಿಕೊಳ್ಳುವುದಕ್ಕೆ ವಿಫಲವಾಗಿರುವುದಕ್ಕೆ ನೋವಿದೆ ಎಂದು ಹೇಳಿದರು.
No Comment! Be the first one.