ಮನೆಯಲ್ಲಿ ರಾತ್ರಿ ಲೇಟಾಗಿ ನಿದ್ರೆ ಮಾಡುವ ಕೆಲ ಬ್ಯಾಚುಲರ್ ಮಂದಿಗೆ ಕೇಳಿದ್ರೆ ನೋಡ್ರಪ್ಪಾ ಸನ್ನಿ ಲಿಯೋನ್ ಜಾತಕವನ್ನೇ ಬಿಚ್ಚಿ ಇಡುತ್ತಾರೆ. ಅಷ್ಟರ ಮಟ್ಟಿಗೆ ಸನ್ನಿಲಿಯೋನ್ ಪಡ್ಡೆ ಹುಡುಗರ ನಿದ್ದೆ ಕದ್ದ ಹಾಟ್ ಬ್ಯೂಟಿ. ಆಕೆ ಫೋರ್ನ್ ಜಗತ್ತಿಗೆ ಪ್ರವೇಶಿಸಿದ್ದೇ ಆರ್ಥಿಕ ಸಂಕಷ್ಟದಿಂದ ಎಂಬುದು ವಾಸ್ತವ. ಸಾಮಾನ್ಯವಾಗಿ ಕಷ್ಟದ ಪರಿಸ್ಥಿತಿಯಲ್ಲಿದ್ದವರು ಏನನ್ನಾದರೂ ಮಾಡಿ ಕಷ್ಟದಿಂದ ಹೊರಬರಬೇಕೆನ್ನುವ ಹಪ ಹಪಿಯಲ್ಲಿರುತ್ತಾರೆ. ಕಾನೂನು ಬಾಹಿರ ಚಟುವಟಿಕೆಗಳಿಗಾಗಿ ಖದೀಮರು ಇವರನ್ನೇ ದಾಳವಾಗಿ ಬಳಸಿಕೊಂಡು ಬಕ್ರಾ ಮಾಡುವ, ಮಾಡಿರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಪೋರ್ನ್ ಜಗತ್ತಿಗೆ ಪ್ರವೇಶ ಪಡೆದ ಸನ್ನಿ ಲಿಯೋನ್ ರಾತ್ರೋ ರಾತ್ರಿ ತನ್ನ ಮಾದಕ ಮೈ ಮಾಟದಿಂದ ಫೇಮಸ್ ಆಗಿದ್ದು, ಕೈ ತುಂಬ ನಿರೀಕ್ಷೆಗೂ ಮೀರಿದ ಹಣ ಗಳಿಸಿದ್ದು ಸದ್ಯಕ್ಕೆ ಬೇಡದ ಸಂಗತಿ. ಅದಾದ ಮೇಲೆ ಆಕೆ ಪೋರ್ನ್ ಜಗತ್ತಿನಿಂದ ಹೊರಬರಲು ತನಗಿದ್ದ ಟ್ರೇಡ್ ಮಾರ್ಕನ್ನು ಕಿತ್ತೆಸೆಯಲು ಬಾಲಿವುಡ್ ನ ಬೇಬಿ ಡಾಲ್ ಆಗಿ ಸದ್ಯ ಬಹುಬೇಡಿಕೆಯ ನಟಿಯಾಗಿರುವುದು ಸಾಕಷ್ಟು ಮಂದಿಗೆ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟ ಹಾಗೆ ಆಗಿರುವುದು ಇದೆ.
ಇನ್ನು ನಟಿಯಾಗಿ ಗುರುತಿಸಿಕೊಳ್ಳಲು ಪ್ರಾರಂಭವಾದ ಮೇಲಂತೂ ಸನ್ನಿಲಿಯೋನ್ ತೆರೆದ ಪುಸ್ತಕದಂತೆ ತನಗಾದ ಎಲ್ಲ ಅನುಭವಗಳನ್ನು ಅಭಿಮಾನಿಗಳ ಮುಂದೆ ಬಿಚ್ಚಿಡುತ್ತಲೇ ತನ್ನ ತಪ್ಪುಗಳನ್ನು ಒಂದೊಂದೇ ಹೇಳಲು ಪ್ರಾರಂಭಿಸಿದ್ದೂ ಉಂಟು. ಇನ್ನು ಆಕೆ ಫೋರ್ನ್ ಜಗತ್ತಿನಲ್ಲಿ ರಾಣಿಯಾಗಿ ಆಳುತ್ತಿದ್ದ ಕಾಲದಲ್ಲಿ ಸನ್ನಿ ಸಹೋದರ ಸಂದೀಪ್ ವೋಹ್ರಾ ಕೂಡ ಆಕೆಗೆ ಸಾಥ್ ನೀಡಿದ್ದ ಎಂಬುದನ್ನು ಸನ್ನಿ ಲಿಯೋನ್ ಬಾಯಿ ಬಿಟ್ಟಿದ್ದಾಳೆ. ಹೌದು ಸಂದೀಪ್ ಸನ್ನಿ ಅವರ ಆಟೋಗ್ರಾಫ್ ಮೂಲಕ ಬಹಳಷ್ಟು ಹಣ ಸಂಪಾದನೆಯನ್ನು ಮಾಡಿಕೊಂಡಿದ್ದರಂತೆ. ಆಗ ಸಂದೀಪ್ ಇದ್ದದ್ದು ಹಾಸ್ಟೆಲ್ ವೊಂದರಲ್ಲಿ. ಆ ಸಮಯದಲ್ಲಿ ತಾನಿದ್ದ ರೂಮಿನಲ್ಲಿ ಸನ್ನಿ ಸಹಿ ಹಾಕಿದ್ದ ಪೋಟೋವನ್ನು ಇಟ್ಟುಕೊಳ್ಳುತ್ತಿದ್ದರಂತೆ. ರೂಮಿಗೆ ಬರುವವರು ಆ ಪೋಟೋಕ್ಕೆ ಆಕರ್ಷಿತರಾಗಿ ಇಂತಿಷ್ಟು ಹಣ ನೀಡಿ ಪೋಟೋವನ್ನು ಪಡೆದುಕೊಳ್ಳುತ್ತಿದ್ದರಂತೆ. ಫೊಟೋ ಖಾಲಿಯಾದ ಬಳಿಕ ಪುನಃ ಪೋಟೋಗಳನ್ನು ತಂದಿಡುತ್ತಿದ್ದನಂತೆ.
ಬದುಕು ಎಷ್ಟರಮಟ್ಟಿಗೆ ಪಾಠಗಳನ್ನು ಕಲಿಸಬಲ್ಲದು ಎಂಬುದಕ್ಕೆ ಸನ್ನಿಲಿಯೋನ್ ಬದುಕೇ ಉದಾಹರಣೆ. ಆಕೆ ಫೋರ್ನ್ ಜಗತ್ತಿಗೆ ಅಡಿ ಇಟ್ಟಳು. ಹಣ ಮಾಡಿದಳು. ತನ್ನ ಮೈ ಮಾರಿ ಕೊಂಡಳು ಇತ್ಯಾದಿ ಇತ್ಯಾದಿ ವಿಚಾರಗಳ ಕುರಿತಾಗಿ ಹಗುರವಾಗಿ ಮಾತನಾಡಿದರೂ, ಆಕೆಯ ಪರಿಸ್ಥಿತಿಯನ್ನು ಲಾಭ ಮಾಡಿಕೊಂಡ ಕಾಮುಕ ಸಮಾಜದಲ್ಲಿಯೇ ನಾವಿರುವುದಲ್ಲವೇ..
No Comment! Be the first one.