ಲೋಕಸಭಾ ಚುನಾವಣೆಯ ಫಲಿತಾಂಶದ ವಿಶ್ಲೇಷಣೆಯ ಬರದಲ್ಲಿ ಟಿವಿ ನಿರೂಪಕರೊಬ್ಬರು ಸನ್ನಿ ಡಿಯೋಲ್ ಬದಲು ಸನ್ನಿ ಲಿಯೋನ್ ಹೆಸರನ್ನು ಹೇಳಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ. ಈ ಕುರಿತಂತೆ ಮಾದಕ ನಟಿ ಸನ್ನಿ ಲಿಯೋನ್ ಟ್ವಿಟ್ಟರ್ ನಲ್ಲಿ ಫನ್ನಿ ಕಮೆಂಟ್ ಹಾಕಿ ಗಮನ ಸೆಳೆದಿದ್ದಾರೆ. ಎಷ್ಟು ಮತಗಳ ಮುನ್ನಡೆಯಲ್ಲಿದ್ದೇನೆ ಎಂದು ಟ್ವೀಟ್ ಮಾಡಿರುವ ಅವರು, ಮತದಾನದ ದಿನದಲ್ಲೂ ತಮ್ಮ ಹೆಸರು ಟ್ರೆಂಡ್ನಲ್ಲಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
— Sunny Leone (@SunnyLeone) May 24, 2019
ಟಿವಿ ನಿರೂಪಕರೊಬ್ಬರು ನಿರೂಪಣೆಯ ವೇಳೆ ಭಾರತೀಯ ಜನತಾ ಪಾರ್ಟಿಯ ಗುರುದಾಸ್ಪುರ ಕ್ಷೇತ್ರದ ಅಭ್ಯರ್ಥಿ ಮತ್ತು ನಟ ಸನ್ನಿ ಡಿಯೋಲ್ ಎಂದು ಹೇಳುವ ಬದಲು ತಪ್ಪಾಗಿ ಸನ್ನಿ ಲಿಯೋನ್ ಹೇಳಿದ್ದರು. ಈ ವಿಡಿಯೊ ಕ್ಷ ಣಮಾತ್ರದಲ್ಲೇ ವೈರಲ್ ಆಗಿತ್ತು. ಇದು ಜೋಕ್ ಆಫ್ ದಿ ಡೇ ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
No Comment! Be the first one.