ನೀಲಿ ಚಿತ್ರಗಳ ಪ್ರಭೆಯಾಚೆಗೆ ಸನ್ನಿ ಲಿಯೋನ್ ನಟಿಯಾಗಿ ರೂಪುಗೊಂಡಿದ್ದಾಳೆ. ಸದ್ಯಕ್ಕೆ ದೊಡ್ಡ ದೊಡ್ಡ ಅವಕಾಶಗಳೇ ಸನ್ನಿಯನ್ನು ಹುಡುಕಿ ಬರಲಾರಂಭಿಸಿವೆ. ಈಕೆ ಸುಳಿದಾಡಿದರೂ ದೇಶಾಧ್ಯಂತ ಸುದ್ದಿಯಾಗೋದರಿಂದ ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಸನ್ನಿಗೆ ಬೇಡಿಕೆ ಇದೆ. ಅದರ ಭರಾಟೆ ಎಂಥಾದ್ದಿದೆಯೆಂದರೆ, ಕೆಲವೊಮ್ಮೆ ಡೇಟು ಹೊಂದಿಸಿಕೊಳ್ಳೋದೇ ಕಷ್ಟವಾಗುವಂಥಾ ವಾತಾವರಣವೂ ಇದೆ. ಈ ಕಾರಣದಿಂದಲೇ ಸನ್ನಿ ಈಗ ಕಾಸು ತೆಗೆದುಕೊಂಡು ಕುಣಿಯದೇ ಯಾಮಾರಿಸಿದ ಆರೋಪವೊಂದಕ್ಕೆ ಗುರಿಯಾಗಿದ್ದಾಳೆ!
ಇಂಥಾದ್ದೊಂದು ಆರೋಪವನ್ನು ಸನ್ನಿ ಮೇಲೆ ಹೊರಿಸಿದಾತ ಮೂರು ವರ್ಷದ ಹಿಂದೆ ತೆರೆ ಕಂಡಿದ್ದ ಪಟೇಲಿ ಕಿ ಪಂಜಾಬಿ ಶಾದಿ ಚಿತ್ರದ ನಿರ್ಮಾಪಕ ಭರತ್. ಈ ಪುಣ್ಯಾತ್ಮ ಇಷ್ಟು ವರ್ಷಗಳಾದ ಮೇಲೆ ಅದ್ಯಾಕೆ ಈ ಆರೋಪ ಮಾಡಿದ್ದಾನೋ ಗೊತ್ತಿಲ್ಲ. ಆದರೆ ಕಾರಣವನ್ನಂತೂ ಕೊಟ್ಟಿದ್ದಾನೆ.
ಪಂಜಾಬಿ ಶಾದಿ ಚಿತ್ರದ ಹಾಡೊಂದರಲ್ಲಿ ಕುಣಿಯಲು ಈ ಚಿತ್ರತಂಡ ಸನ್ನಿಯನ್ನು ಒಪ್ಪಿಸಿತ್ತಂತೆ. ಇದಕ್ಕಾಗಿ ನಲವತ್ತು ಲಕ್ಷಕ್ಕೆ ಮಾತುಕತೆ ನಡೆದು ಅಡ್ವಾನ್ಸ್ ರೂಪದಲ್ಲಿ ಐದು ಲಕ್ಷವನ್ನು ಕೊಡಲಾಗಿತ್ತಂತೆ. ಆದರೆ ಆ ಹೊತ್ತಿಗೆಲ್ಲಾ ಸನ್ನಿ ಲಿಯೋನ್ ಬೇರೆ ಬೇರೆ ಚಿತ್ರಗಳಲ್ಲಿ ಬ್ಯುಸಿಯಾಗಿ ಬಿಟ್ಟಿದ್ದಳು. ಕಡೆಗೂ ಆಕೆಗೆ ಡೇಟು ಹೊಂದಾಣಿಕೆ ಮಾಡಲು ಸಾಧ್ಯವಾಗಿರಲಿಲ್ಲ. ಹೋಗಲಿ, ಕಾಸನ್ನೂ ವಾಪಾಸು ಕೊಡದೆ ಸನ್ನಿ ಸತಾಯಿಸಿದ್ದಾಳೆ ಅಂತ ಭರತ್ ಕೆಂಡ ಕಾರಿದ್ದಾನೆ.
ಈದರೆ ಸನ್ನಿ ಆಪ್ತ ವಲಯ ಬೇರೆಯದ್ದೇ ಕಥೆ ಹೇಳುತ್ತಿದೆ. ಸನ್ನಿ ಲಯೋನ್ ಪಂಜಾಬಿ ಶಾದಿ ಹಾಡಿನಲ್ಲಿ ಕುಣಿಯಲು ಒಪ್ಪಿಕೊಂಡಿದ್ದದ್ದು ನಿಜ. ಡೇಟು ಸಮಸ್ಯೆ ಆಗಿದ್ದೂ ಹೌದು. ಆದರೆ ಅಡ್ವಾನ್ಸ್ ಹಣ ಇಸಿದುಕೊಂಡಿದ್ದ ಮುಲಾಜಿನಿಂದ ಸನ್ನಿ ಹೇಗೋ ಡೇಟು ನೀಡಿದರೂ ಚಿತ್ರತಂಡವೇ ರೆಡಿಯಾಗಿರಲಿಲ್ಲ. ಆಸದ್ದರಿಂದಲೇ ಹಾಡಿನಲ್ಲಿ ಕುಣಿಯಲು ಸಾಧ್ಯವಾಗಲಿಲ್ಲ ಅನ್ನೋದು ಸನ್ನಿ ಆಪ್ತರ ಮಾತು. ಒಟ್ಟಾರೆಯಾಗಿ ಪಂಜಾಬಿ ಶಾದಿ ಅಟ್ಟರ್ ಫ್ಲಾಪ್ ಆಗಿ ಪಾಪರೆದ್ದಿದ್ದಿ ಭರತ್ ಸನ್ನಿ ಮೇಲೆ ಗೂಬೆ ಕೂರಿಸೋ ಮೂಲಕ ಒಂದಷ್ಟು ಪ್ರಚಾರವನ್ನಂತೂ ಗಿಟ್ಟಿಸಿಕೊಂಡಿದ್ದಾನೆ!
No Comment! Be the first one.