ಕಳೆದ ಸೀಜನ್ನಿನ ಬಿಗ್ಬಾಸ್ ಶೋನಲ್ಲಿ ಸಮೀರ್ ಆಚಾರ್ಯನ ಕಪಾಳಕ್ಕೆ ಬಾರಿಸಿ ಹೋದ ಸಂಯುಕ್ತಾ ಹೆಗಡೆ ಈಗೆಲ್ಲಿದ್ದಾಳೆ? ಹೀಗೊಂದು ಪ್ರಶ್ನೆ ಯಾರನ್ನು ಕಾಡಿದೆಯೋ ಬಿಟ್ಟಿದೆಯೋ ಗೊತ್ತಿಲ್ಲ. ಆದರೆ ಈ ಸಂಯುಕ್ತಾ ಅಖಂಡ ಒಂದು ವರ್ಷಗಳ ಕಾಲ ಕಣ್ಮರೆಯಾಗಿದ್ದದ್ದಂತೂ ನಿಜ. ಆ ನಂತರದಲ್ಲಿ ತುಂಡು ಬಟ್ಟೆ ತೊಟ್ಟು ಪೋಸು ಕೊಟ್ಟರೂ, ರೈಲ್ವೇ ಹಳಿ ಮೇಲೆ ಕಾಲೆತ್ತಿಕೊಂಡು ಬಿದ್ದರೂ ಸಂಯುಕ್ತಾಗೆ ಛೀಮಾರಿ ಸಿಕ್ಕಿತೇ ಹೊರತು ಬೇರೇನೂ ಗಿಟ್ಟಿರಲಿಲ್ಲ!
ಹೀಗೆ ಮರೆಯಾದಂತಿದ್ದ ಸಂಯುಕ್ತಾ ಇದೀಗ ಸನ್ನಿ ಲಿಯೋನ್ ನಡೆಸಿ ಕೊಡುವ ಸ್ಪಿಡ್ಜ್ ವಿಲ್ಲಾ ಎಂಬ ರಿಯಾಲಿಟಿ ಶೋ ಸ್ಪರ್ಧಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ. ಸನ್ನಿ ಲಿಯೋನ್ಗೂ ಕೂಡಾ ಮತ್ತಷ್ಟು ಪಾಪ್ಯುಲಾರಿಟಿ ತಂದು ಕೊಟ್ಟಿರೋ ಈ ಶೋ ಡೇಟಿಂಗ್ಗೆ ಸಂಬಂಧಿಸಿದ್ದು. ಒಂದಷ್ಟು ವಿವಾದಗಳ ಜೊತೆಯಲ್ಲಿಯೇ ಜರುಗೋ ಈ ರಿಯಾಲಿಟಿ ಶೋ ಸಂಯುಕ್ತಾಳ ಮನಸ್ಥಿತಿಗೆ ಹೇಳಿ ಮಾಡಿಸಿದಂತಿದೆ!
ಕಳೆದೊಂದು ವರ್ಷದಿಂದ ಖಾಲಿ ಕೂತಿದ್ದ ಸಂಯುಕ್ತಾ ಇತ್ತೀಚೆಗೆ ನಡೆದಿದ್ದ ಅವಾರ್ಡ್ ಪ್ರೋಗ್ರಾಂ ಒಂದರಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಳು. ಅದಕ್ಕೂ ಮುನ್ನ ತಾನು ತಮಿಳಿನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರೋದಾಗಿ ಸುದ್ದಿ ಹರಡಿಸಿದ್ದಳು. ಅದೂ ಕೂಡಾ ಅರ್ಧ ಸತ್ಯ. ಒಂದು ವೇಳೆ ತಮಿಳಿನಲ್ಲಿ ಈಕೆ ಅಂಥಾ ಅವಕಾಶ ಹೊಂದಿದ್ದರೆ ಯಾಕೆ ಈ ರಿಯಾಲಿಟಿ ಶೋಗೆ ಬರುತ್ತಿದ್ದಳು ಎಂಬರ್ಥದಲ್ಲಿ ಜನ ಆಡಿಕೊಳ್ಳುತ್ತಿದ್ದಾರೆ.
ಅಂತೂ ಇದೀಗ ಸಂಯುಕ್ತಾ ಪ್ರಖ್ಯಾತ ರಿಯಾಲಿಟಿ ಶೋ ಒಂದರ ಸ್ಪರ್ಧಿಯಾಗಿದ್ದಾಳೆ. ಬಿಗ್ ಬಾಸ್ ಶೋನಲ್ಲಿ ಈಕೆ ಸಹ ಸ್ಪರ್ಧಿಯಾಗಿದ್ದ ಸಮೀರ್ ಆಚಾರ್ಯನ ಕಪಾಳಕ್ಕೆ ಹೊಡೆಯೋ ಮೂಲಕ ವಿವಾದವೆಬ್ಬಿಸಿದ್ದಳು. ಅದಕ್ಕೂ ಮುನ್ನ ಜನಪ್ರಿಯ ರಿಯಾಲಿಟಿ ಶೋ ರೋಡೀಸ್ನಲ್ಲಿ ಸ್ಪರ್ಧಿಯಾಗಿದ್ದ ಸಂಯುಕ್ತಾ ಅಲ್ಲಿಯೂ ನಾನಾ ತಗಾದೆ ತೆಗೆದು ಜಗಳ ಮಾಡಿಕೊಂಡೇ ಬಂದಿದ್ದಳು. ಇದೀಗ ಕಿರಿಕ್ ರಾಣಿ ಸನ್ನಿ ಲಿಯೋನ್ ಮನೆ ಸೇರಿಕೊಂಡಿದ್ದಾಳೆ. ಇನ್ನು ಅದೇನೇನು ಅನಾಹುತಗಳ ಸುದ್ದಿ ಬರಲಿದೆಯೋ…
#
No Comment! Be the first one.