ನೀಲಿ ತಾರೆ ಹಾಗೂ ಬಿ ಟೌನಿನ ಬೇಡಿಕೆ ನಟಿ ಸನ್ನಿ ಲಿಯೋನ್ ಅರ್ಜುನ್ ಪಟಿಯಾಲ ಜತೆ ನಟಿಸಿರುವ ಸಿನಿಮಾ ಕಳೆದ ವಾರ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ಸನ್ನಿ ಲಿಯೋನ್ ಬಳಸಿರುವ ಫೋನ್ ನಂಬರ್ ಆಕಸ್ಮಿಕವಾಗಿ ದೆಹಲಿಯ ಪಿತಂಬರಿ ನಿವಾಸಿ ಪುನೀತ್ ಅಗರ್ ವಾಲ್ ಅವರ ಫೋನ್ ನಂಬರ್ ಆಗಿತ್ತು.
ಚಿತ್ರ ವೀಕ್ಷಿಸಿದ ಕೆಲ ಪಡ್ಡೆಹೈಕ್ಲು ಪುನೀತ್ ಅಗರ್ವಾಲ್ ಅವರ ನಂಬರ್ಗೆ ಫೋನ್ ಮಾಡಿ, ನಾವು ಸನ್ನಿಲಿಯೋನ್ ಜೊತೆ ಮಾತನಾಡಬೇಕೆಂದು ಕಾಟ ಕೊಟ್ಟಿದ್ದರು. ಈ ಬಗ್ಗೆ ಸನ್ನಿಲಿಯೋನ್ ಟಿವಿ ಸಂದರ್ಶನಲ್ಲಿ ಮಾತನಾಡುತ್ತಿದ್ದಾಗ ಘಟನೆಯನ್ನು ವಿವರಿಸಿ, “ನಿಮಗೆ ಈ ರೀತಿ ಆಗಬಾರದಿತ್ತು. ನಾನು ಸಾರಿ ಕೇಳುತ್ತೇನೆ. ಆದರೆ ನಿಮಗೆ ಕೆಲ ಇಂಟರೆಸ್ಟಿಂಗ್ ವ್ಯಕ್ತಿಗಳಿಂದ ಫೋನ್ಗಳು ಬಂದಿರಬಹುದು” ಎಂದು ಕಾಲು ಎಳೆದು ತಮಾಷೆಯನ್ನು ಮಾಡಿದ್ದಾರೆ. ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಅಂದರೆ ಇದೇ ಇರಬೇಕು.
No Comment! Be the first one.