ಬೆಂಗಳೂರಿನಂಥ ಮಹಾನಗರದಲ್ಲಿ ವಾಸ ಮಾಡುತ್ತಾ ಆಧುನಿಕ ಜೀವನ ಶೈಲಿ  ಅನುಸರಿಸುತ್ತಿರುವ ಯುವ ದಂಪತಿ ಈಶ್ವರ್ ಮತ್ತು ಶಾರ್ವರಿ. ಇಬ್ಬರ ಸ್ವಭಾವ ತದ್ವಿರುದ್ಧ. ಆದರೆ ಪರಸ್ಪರರಲ್ಲಿ ಪ್ರೀತಿ, ಗೌರವವಿದೆ. ಇಬ್ಬರದ್ದೂ ಒಂದೇ ಗುರಿ, ಆದರೆ ದಾರಿ ಭಿನ್ನ. ಈ ಜೋಡಿಯ ಬದುಕಿನ ನೈಜ ಹಾಸ್ಯ ಘಟನಾವಳಿಗಳನ್ನು ಕಚ್ಚಾಟ, ಕಿರುಚಾಟಗಳಿಲ್ಲದೆ ಕಟ್ಟಿಕೊಡುವ ‘ಸೂಪರ್‌ ಕಪಲ್‌’ ವೆಬ್‌ ಸರಣಿಯ ಮೊದಲ ಸೀಸನ್‌ ನೋಡುಗರನ್ನು ತಲುಪಿ ಜನಪ್ರಿಯತೆ ಗಳಿಸಿತ್ತು. ಆ ಜನಪ್ರಿಯತೆಯ ಹಿನ್ನೆಲೆಯಲ್ಲಿ ಇದೀಗ ‘ಸೂಪರ್‌ ಕಪಲ್‌’ ಎರಡನೆಯ ಕಂತು ರೂಪುಗೊಂಡು ಪ್ರಸಾರಕ್ಕೆ ಸಿದ್ಧವಾಗಿದೆ.

ಪ್ರಸ್ತುತ ‘ನಮ್ಮನೆ ಯುವರಾಣಿ’ ಕಿರುತೆರೆಯ ಜನಪ್ರಿಯ ಸರಣಿಯ ‘ಸಾಕೇತ್’ ಪಾತ್ರಧಾರಿ ರಘು ಅವರು ಇಲ್ಲಿ ‘ಈಶ್ವರ್’ ಪಾತ್ರದಲ್ಲಿ ನಟಿಸಿದ್ದಾರೆ. ಕೊಡಗಿನ ಬೆಡಗಿ ತೇಜಸ್ವಿನಿ ಅವರು ‘ಶಾರ್ವರಿ’ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸರಣಿಯ ಮತ್ತಿಬ್ಬರು ಯುವ ಪ್ರತಿಭೆಗಳು – ‘ಚೂರಿಕಟ್ಟೆ’ ಸಿನಿಮಾ ಖ್ಯಾತಿಯ ಪ್ರೇರಣಾ ಕಂಬಂ ಮತ್ತು ಉದಯ ಮ್ಯೂಸಿಕ್‌ನ ವಿಜೆ ಇಮ್ರಾನ್ ಪಾಷಾ. ‘ಸೂಪರ್ ಕಪಲ್‌’ನ ದಿನನಿತ್ಯದ ಬದುಕಿನಲ್ಲಿ ಇನ್ನಷ್ಟು ಸ್ವಾರಸ್ಯಕರ ಹಾಸ್ಯ ಪ್ರಸಂಗಗಳನ್ನು ಹುಟ್ಟು ಹಾಕುವ ಪಾತ್ರಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ದಂಪತಿಯ ನಿತ್ಯ ಬದುಕಿನ ಸನ್ನಿವೇಶಗಳಲ್ಲಿ ಉದ್ಭವ ಆಗುವ ಹಲವಾರು ಸ್ವಾರಸ್ಯಕರ ಹಾಸ್ಯ ಪ್ರಸಂಗಗಳನ್ನು ಬಿಂಬಿಸುವ, ಯುವ ಜನರ ಜೊತೆಗೆ, ಕುಟುಂಬದ ಎಲ್ಲರೂ ನೋಡಿ ಖುಷಿ ಪಡಬಹುದಾದ ವೆಬ್‌ ಸರಣಿಯಿದು. ರಘುನಂದನ್ ಖಾನಡ್ಕ ಮತ್ತು ಪುನೀತ್ ಕಬ್ಬೂರು ಸರಣಿಯ ನಿರ್ದೇಶಕರು. ಏಪ್ರಿಲ್‌ 30ರಂದು ಟೀಸರ್ ಬಿಡುಗಡೆಯಾಗಿದ್ದು, ಎಲ್ಲರ ಮೆಚ್ಚುಗೆ ಗಳಿಸಿದೆ. ಶೀಘ್ರದಲ್ಲೇ ಈ ಸರಣಿಯ ಮೊದಲ ಸಂಚಿಕೆ ‘ಮಾಧ್ಯಮ ಅನೇಕ’ ಯೂಟ್ಯೂಬ್‌ ಚಾನೆಲ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

2018ರಲ್ಲಿ ಕಾರ್ಯಚಟುವಟಿಕೆ ಆರಂಭಿಸಿದ ‘ಮಾಧ್ಯಮ ಅನೇಕ’ ಮೌಲ್ಯಯುತವಾದ, ಹೊಸತನ ಹಾಗೂ ಉತ್ತಮ ಗುಣಮಟ್ಟದಿಂದ ಕೂಡಿದ ಮಾಹಿತಿ ಮತ್ತು ಮನರಂಜನಾ ಕಾರ್ಯಕ್ರಮಗಳು, ಸಾಕ್ಷ್ಯಚಿತ್ರಗಳು, ಸಂದರ್ಶನಗಳು, ವೆಬ್ ಆಧಾರಿತ ಮನರಂಜನಾ ಕಾರ್ಯಕ್ರಮಗಳನ್ನು ನಿರ್ಮಿಸುತ್ತಾ ಬಂದಿದೆ.

(ಹೆಚ್ಚಿನ ಮಾಹಿತಿಗೆ ಸಂಪರ್ಕ – ಅರವಿಂದ್ ಮೋತಿ – 9900112562)

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಮೇಕಿಂಗ್‌ ಆಫ್‌ ಬಂಗಾರದ ಮನುಷ್ಯ….

Previous article

ತೆಲುಗಿಗೆ ಕರ್ಣನ್!

Next article

You may also like

Comments

Leave a reply

Your email address will not be published.