ಹೆಸರಾಂತ ನಟಿ ಸುರೇಖಾ ವಾಣಿಯವರ ಪತಿ ಹಾಗೂ ಟೆಲಿವಿಷನ್ ನಿರ್ದೇಶಕ ಸುರೇಶ್ ತೇಜಾ ಅವರು ಸೋಮವಾರ ನಿಧನರಾಗಿದ್ದಾರೆ. ದೀರ್ಘ ಜ್ವರದಿಂದ ಬಳಲುತ್ತಿದ್ದ ಸುರೇಶ್ ತೇಜಾ ಸೋಮವಾರ ಮುಂಜಾನೆ ನಿಧನರಾದರು. ಅವರು ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಹೆಂಡತಿ ಮತ್ತು ಮಗಳು ಸುಪ್ರಿತಾ ಅವರನ್ನು ಅಗಲಿದ್ದಾರೆ.
ಸುರೇಖಾ ವಾಣಿಯವರು ತೆಲುಗು ಸಿನಿಮಾದಲ್ಲಿ ಹೆಸರಾಂತ ಕಾಮಿಕಲ್ ಪಾತ್ರಗಳಲ್ಲಿ ನಟಿಸುತ್ತಿದ್ದರು. ಎಥಿರ್ ನೀಚಲ್, ಜಿಲ್ಲಾ, ಮೆರ್ಸಲ್, ವಿಶ್ವಾಸಂ, ವಂತಾ, ರಾಜಾವಥನ್ ವರುವೆನ್ ಪಾತ್ರಗಳಲ್ಲಿ ನಟಿಸಿದ್ದಾರೆ.
No Comment! Be the first one.