ಟಾಲಿವುಡ್ನ ಖ್ಯಾತ ನಟ ಅಲ್ಲು ಅರ್ಜುನ್ಗೆ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಉತ್ತರದಲ್ಲೂ ದೊಡ್ಡ ಅಭಿಮಾನಿ ಬಳಗವಿದೆ. ಅವರ ಲೇಟೆಸ್ಟ್ ತೆಲುಗು ಸಿನಿಮಾ ’ನಾ ಪೇರು ಸೂರ್ಯ’ ಹಿಂದಿ ಡಬ್ಬಿಂಗ್ ವರ್ಷನ್ ’ಸೂರ್ಯ ದಿ ಸೋಲ್ಜರ್’ ಇದನ್ನು ಮತ್ತೆ ಸಾಬೀತು ಮಾಡಿದೆ. ಹಿಂದಿ ಡಬ್ಬಿಂಗ್ ವರ್ಷನ್ ಫೆಬ್ರವರಿ ೧ರಂದು ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿತ್ತು. ಮೂರೇ ದಿನಗಳಲ್ಲಿ ಚಿತ್ರವನ್ನು ಒಂದು ಕೋಟಿ ಜನರು ವೀಕ್ಷಿಸಿದ್ದಾರೆ. ಅವರ ಈ ಹಿಂದಿನ ’ದುವ್ವಾಡ ಜಗನ್ನಾಥಂ’ ಮತ್ತು ’ಸರೈನೋಡು’ ಹಿಂದಿ ಡಬ್ಬಿಂಗ್ ವರ್ಷನ್ಗಳೂ ಅಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದವು. ’ನಾ ಪೇರು ಸೂರ್ಯ’ ಇವೆಲ್ಲಾ ದಾಖಲೆಗಳನ್ನು ಮುರಿದು ನುಗ್ಗಿದೆ.
ಹಾಗೆ ನೋಡಿದರೆ ’ನಾ ಪೇರು ಸೂರ್ಯ’ ತೆಲುಗು ಸಿನಿಮಾಗೆ ದಕ್ಷಿಣದಲ್ಲಿ ದೊಡ್ಡ ಮಟ್ಟದ ಗೆಲುವೇನೂ ಸಿಕ್ಕಿರಲಿಲ್ಲ. ಭಾರಿ ನಿರೀಕ್ಷೆಯಿದ್ದ ಚಿತ್ರ ಒಂದು ವರ್ಗದ ಪ್ರೇಕ್ಷಕರ ಅಸಮಾಧಾನಕ್ಕೆ ಗುರಿಯಾಗಿತ್ತು. ಇದೀಗ ಹಿಂದಿ ಡಬ್ಬಿಂಗ್ ವರ್ಷನ್ ಜನಪ್ರಿಯತೆ ಉದ್ಯಮದ ಹಲವರಲ್ಲಿ ಸೋಜಿಗ ತಂದಿದೆ. ಸದ್ಯ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ ಅಲ್ಲು ಅರ್ಜುನ್. ಅಕ್ಟೋಬರ್ ಹೊತ್ತಿಗೆ ಈ ಚಿತ್ರ ತೆರೆಗೆ ಬರಲಿದೆ. ಚಿರಂಜೀವಿ ಅಭಿನಯದ ಮಹತ್ವಾಕಾಂಕ್ಷೆಯ ಸಿನಿಮಾ ’ಸೈರಾ ನರಸಿಂಹರೆಡ್ಡಿ’ ಚಿತ್ರದಲ್ಲೂ ಅಲ್ಲು ಪಾಲ್ಗೊಳ್ಳುವಿಕೆಯಿದೆ. #
No Comment! Be the first one.