`ಸೂರ್ಯಕೆ ಸೂರ್ಯಕೆ ಸಮಾನ ಹಳ್ಳಿಗೆ ಗೌಡರೇ ದಿವಾನಾ’ ಅನ್ನೋ ಹಾಡನ್ನು ಕನ್ನಡಿಗರಾದವರೂ ಯಾರು ತಾನೇ ಮರೆತಾರು. ಸಾಹಸ ಸಿಂಹ ಡಾ. ವಿಷ್ಣು ವರ್ಧನ್ ಅವರು ದ್ವಿಪಾತ್ರದಲ್ಲಿ ನಟಿಸಿದ್ದ ಕೌಟುಂಬಿಕ ಸಿನಿಮಾ ಸೂರ್ಯವಂಶದ ಫೇಮಸ್ ಹಾಡಿದು. ಈ ಸಿನಿಮಾವನ್ನು ಮಣ್ಣಿನ ಮಗ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದರು. ಕಲಾಸಾಮ್ರಾಟ್ ಎಸ್. ನಾರಾಯಣ್ ರವರು ನಿರ್ದೇಶನವನ್ನು ಮಾಡಿದ್ದರು. ವೀರಪ್ಪನಾಯಕ ಸಿನಿಮಾದ ನಂತರ ಡಾ. ವಿಷ್ಣುವರ್ಧನ್ ಅವರಿಗೆ ಬಹುದೊಡ್ಡ ಮಟ್ಟದ ತಾರಾಗಿರಿ ತಂದುಕೊಟ್ಟ ಚಿತ್ರವದು.

ಈ ಸಿನಿಮಾ ರಿಲೀಸ್ ಆಗಿ ಜೂನ್ 15ಕ್ಕೆ ಬರೋಬ್ಬರಿ 20 ವರ್ಷಗಳು ತುಂಬಲಿದೆಯಂತೆ. ಹೌದು 1999 ಜೂನ್ 15ರಂದು ಈ ಚಿತ್ರವು ರಿಲೀಸ್ ಆಗಿತ್ತು. ಇದು ತಮಿಳಿನ ರಿಮೇಕ್ ಸಿನಿಮಾ. ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗಿದ್ದರೂ ಸಹ ಕನ್ನಡದ ಸೂರ್ಯವಂಶ ಎಲ್ಲ ಭಾಷೆಗಳ ಗಳಿಕೆಯನ್ನು ಉಡೀಸ್ ಮಾಡಿತ್ತು. ಚಿತ್ರದ ಆಡಿಯೋ ಹಕ್ಕನ್ನು ಜೇಂಕಾರ್ ಮ್ಯೂಸಿಕ್ ನ ಸುರೇಶ್ ಜೈನ್ ಪಡೆದಿದ್ದು, ಅದು ಕೂಡಾ ಭರ್ಜರಿ ಹಿಟ್ ಪಡೆದಿತ್ತು. ಜನುಮದ ಜೋಡಿ ಚಿತ್ರದ ನಂತರ ವಿ. ಮನೋಹರ್ ಅವರಿಗೂ ಇದು ಕಮ್ ಬ್ಯಾಕ್ ಸಿನಿಮಾ. ಎವರ್ ಗ್ರೀನ್ ಪಟ್ಟಿಗೆ ಸೇರುವ ಚಿತ್ರಗಳಲ್ಲಿ ಸೂರ್ಯವಂಶವೂ ಒಂದು.

– ಸಚಿನ್ ಕೃಷ್ಣ

CG ARUN

ನೂರು ಮಿಲಿಯನ್ ವೀಕ್ಷಣೆ ಪಡೆದ ಏನಮ್ಮಿ ಏನಮ್ಮಿ ಸಾಂಗು!

Previous article

ಡರ್ಟಿ ಬ್ಯೂಟಿಯ ಹಾಟ್ ಫೋಟೋ ವೈರಲ್!

Next article

You may also like

Comments

Leave a reply

Your email address will not be published. Required fields are marked *