ಬಿ ಟೌನಿನ ಪ್ರಸಿದ್ಧ ರೇನ್ ಸಾಂಗ್ ಗಳ ಪೈಕಿ ಮೊಹ್ರಾ ಸಿನಿಮಾದ ಟಿಪ್ ಟಿಪ್ ಬರ್ಸಾ ಪಾನಿ ಪ್ರಮುಖವಾದದ್ದು. ಈ ಹಾಡನ್ನು ನೆನಸಿದಾಕ್ಷಣ ಹಳದಿ ಸೀರೆಯಲ್ಲಿ ಮಳೆಯಲ್ಲಿ ನೆನೆಯುತ್ತ ನಾಯಕನನ್ನು ಒಲಿಸಿಕೊಳ್ಳುವ ನಾಯಕಿ ರವೀನಾ ಟಂಡನ್ ಹಾಗೂ ಅಕ್ಷಯ್ ಕುಮಾರ್ ನೆನಪಾಗುತ್ತಾರೆ. ಈಗ ಅದೇ ಹಾಡನ್ನು ಅಕ್ಷಯ್ ಕುಮಾರ್ ನಟಿಸುತ್ತಿರುವ ಸೂರ್ಯವಂಶಿ ಸಿನಿಮಾದಲ್ಲಿ ರಿಮಿಕ್ಸ್ ಮಾಡಲು ನಿರ್ದೇಶಕ ರೋಹಿತ್ ಶೆಟ್ಟಿ ಮನಸ್ಸು ಮಾಡಿದ್ದಾರಂತೆ.

ಈ ಕುರಿತು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದು, ‘ಟಿಪ್‌ ಟಿಪ್‌ ಬರ್ಸಾ ಪಾನಿ ಹಾಡನ್ನು ಬೇರೆ ಯಾವ ನಟ ರಿಮಿಕ್ಸ್‌ ಮಾಡಿದ್ದರೂ ನನಗೆ ತುಂಬಾ ಬೇಸರವಾಗುತ್ತಿತ್ತು. ಈ ಹಾಡು ನನಗೆ ವೈಯಕ್ತಿಕವಾಗಿ ಹಾಗೂ ನನ್ನ ಸಿನಿಕೆರಿಯರ್‌ನಲ್ಲಿ ಬಹಳ ಹತ್ತಿರವಾದುದು’ ಎಂದು ಬರೆದುಕೊಂಡಿದ್ದಾರೆ.

ಒಂದು ಕಡೆ ಈ ಹಾಡನ್ನು ರಿಮಿಕ್ಸ್‌ ಮಾಡುವ ನಿರ್ಧಾರವನ್ನು ಬಾಲಿವುಡ್‌ ಸ್ವಾಗತಿಸಿದರೆ, ಖ್ಯಾತ ಗೀತರಚನೆಕಾರ ಜಾವೇದ್‌ ಅಖ್ತರ್‌ ಇದನ್ನು ಸಂಪೂರ್ಣವಾಗಿ ವಿರೋಧಿಸಿದ್ದಾರೆ. ‘ಇದು ಕೃತಿಸ್ವಾಮ್ಯ ಉಲ್ಲಂಘನೆ’ ಎಂದು ಹೇಳಿರುವ ಅವರು, ‘ಇಂತಹ ಕೆಲಸಗಳು ನಿಲ್ಲಬೇಕು. ಈ ಹಿಂದೆ ಇಂತಹ ಪ್ರಯತ್ನಗಳು ನಡೆದಾಗ ನಾನು ಕಾನೂನು ಮೂಲಕ ವಿರೋಧಿಸಿದ್ದೆ. ಅವರಿಗೆ ನೋಟಿಸ್‌ಗಳನ್ನು ಕೂಡ ನೀಡಿದ್ದೆ. ಇಂತಹ ಖ್ಯಾತ ಹಾಡುಗಳ ಸಾಹಿತ್ಯವನ್ನು ಬದಲಾಯಿಸುವ ಪರಿಪಾಠ ಈಗ ಹೆಚ್ಚಾಗಿದೆ’ ಎಂದು ಅಸಹನೆ ವ್ಯಕ್ತಪಡಿಸಿದ್ದಾರೆ.

CG ARUN

ಏಕಕಾಲದಲ್ಲಿ ರಿಲೀಸ್ ಆಗಲಿದೆ `www.ಮೀನಾ ಬಜಾರ್’!

Previous article

ತೆಲುಗಿನ ಊಪಿರಿ ರಿಮೇಕ್ ನಲ್ಲಿ ಶಾರುಖ್ ಖಾನ್!

Next article

You may also like

Comments

Leave a reply

Your email address will not be published. Required fields are marked *