ಈ ಭಾನುವಾರ ಸಂಜೆ ‍5.30 ಆಗುತ್ತಲೆ ಶುರುವಾಗುತ್ತೆ ಭರ್ಜರಿ ಮನರಂಜನೆ. ‌ನಗುವನ್ನ ಮರೆತೋರನ್ನ ನಗುವಿನ ಲೋಕಕ್ಕೆ ಕೊಂಡೊಯ್ಯೋ ಕೆಲಸ‌ ಮಾಡೋಕೆ ರೆಡಿಯಾಗಿದೆ. ನಿಮ್ಮ ಸ್ಟಾರ್ ಸುವರ್ಣ!

ಹಾಸ್ಯಕ್ಕೆ ಹೊಸ ದಿಕ್ಕುಕೊಟ್ಟ ಹಾಸ್ಯ ಕುಟುಂಬಗಳ ಸಮಾಗಮ. ಸ್ಟಾರ್ ಗಳ ದೈನಂದಿನ ಚಟುವಟಿಕೆ ಮರೆತು ಮನಸಾರೆ ನಕ್ಕು ಹೋದ ಸ್ಟಾರ್ ಸುವರ್ಣದ ಕಾಮಿಡಿ ಉತ್ಸವದ ತೇರು ಇದೀಗ ಕರ್ನಾಟಕದ ಮನೆಮನೆಗಳಲ್ಲಿರುವ ನೋವನ್ನು ಮರೆಸಿ ನಗುವಿನ ಟಾನಿಕ್ ಕೊಡೋಕೆ ಸುವರ್ಣ ಕಾಮಿಡಿ ಸ್ಟಾರ್ ಗಳ ಜೊತೆ ಇದೇ ವಾರ ನಿಮ್ಮ‌ ಮನೆಗೆ ನಗುವನ್ನು ಹೊತ್ತು ತರಲು ತಯಾರಾಗಿದ್ದಾರೆ. ನಗ್ತಾ ಇರಿ. ನೋವನ್ನು ಆದಷ್ಟು ದೂರವಿಡಿ.

 ಗಾನಬಜಾನ ಸೀಸನ್ 2

ರಿಯಾಲಿಟಿ ಶೋಗಳನ್ನು ಕನ್ನಡಿಗರಿಗೆ ಪರಿಚಯಿಸುವ ಮುಖಾಂತರ ಕನ್ನಡಿಗರಿಗೆ ಹೊಸ ಬಗ್ಗೆಯ ಮನರಂಜನೆನ್ನು ಪರಿಚಯಿಸಿದ ನಿಮ್ಮ ಸ್ಟಾರ್ ಸುವರ್ಣ ಈಗ ಮತ್ತೆ ಹೊಸತಂದು ರಿಯಾಲಿಟಿ ಶೋನ ನಿಮ್ಮ ಮುಂದೆ ತರುವ ತಯಾರಿಯಾಲ್ಲಿದೆ. ವೀಕೆಂಡ್ ಆಯ್ತೆಂದ್ರೆ ಜನ ಮಾಲು ,ಸಿನಿಮಾ ಅಂತ ಸುತ್ತೋ ಗೋಜನ್ನ ಕಮ್ಮಿ ಮಾಡಿ ಇಡೀ ಕರ್ನಾಟಕವನ್ನ ಮನೆಯಲ್ಲಿ ಕೂರಿಸಿ, ಆಡಿಸೋ ಕೆಲಸಕ್ಕೆ ಕೈ ಹಾಕಿರೋ ಸ್ಟಾರ್ ಸುವರ್ಣ, ಸೀಸನ್ 1 ರ ಯಶಸ್ಸಿನ ನಂತರ ಇದೀಗ ಮತ್ತೆ ಕನ್ನಡಿಗರನ್ನ ರಂಜಿಸುವ ಉದ್ದೇಶದಿಂದ ಬರುತ್ತಿದೆ.

ಗಾನಬಜಾನ ಸೀಸನ್ 2. ನಿಮ್ಮ ಮೆಚ್ಚಿನ ಸೆಲೆಬ್ರಿಟಿಗಳನ್ನ ನಿಮ್ಮ ಮನೆಯ ಟಿವಿ ಮುಖಾಂತರ ನಿಮ್ಮ ಹತ್ತಿರಕ್ಕೆ ತರುವ ಪ್ರಯತ್ನ ಇದೇ ಜನವರಿ 9 ರಾತ್ರಿ 9 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣ ಮಾಡಲಿದೆ. ಆ್ಯಂಕರ್ ನಿರಂಜನ್ ನಿರೂಪಣೆಯ ಕಾರ್ಯಕ್ರಮದಲ್ಲಿ ನಗುವಿನ ಕೊರತೆ ಇರುವುದಿಲ್ಲ. ಅಂತೆಯೆ ಮೊದಲ ಸಂಚಿಕೆಯಲ್ಲಿ ಕರುನಾಡಿನ ಅಧ್ಯಕ್ಷ ಶರಣ್ ಪಾಲ್ಗೊಳ್ಳಲಿದ್ದು, ಇಡೀ ಕಾರ್ಯಕ್ರಮ ಪೈಸಾ ವಸೂಲ್ ಮನರಂಜನೆಯೊಂದಿಗೆ ಕರುನಾಡನ್ನು ರಂಜಿಸುವುದರೊಂದಿಗೆ ಇಡೀ ಮನೆಮಂದಿಯನೆಲ್ಲಾ ಒಂದೆಡೆ ಸೇರಿಸಿ ಸೆಲೆಬ್ರಿಟಿಗಳೊಂದಿಗೆ ನಿಮ್ಮನ್ನು ಆಡಿಸೋ, ಹಾಡಿಸೋ ಕೆಲಸ ಇನ್ನೇನು ಶುರುವಾಗಲಿದೆ. ಹಾಗಾದ್ರೆ ಗಾನಬಜಾನದಲ್ಲಿ ಆಡಕ್ಕೆ ಕರ್ನಾಟಕ ರೆಡಿನಾ?

ವಿಕ್ರಾಂತ್ ರೋಣ ನೂರು ಕೋಟಿಗೆ ಓಟಿಟಿಗೆ ಬಿಕರಿಯಾಗೋದು ನಿಜಾನಾ?

Previous article

ರಿಲೀಸ್ ಆಯ್ತು ‘ರೂಮ್ ಬಾಯ್’ ಸಿನಿಮಾ ಟೀಸರ್..

Next article

You may also like

Comments

Leave a reply

Your email address will not be published.