ಕಳೆದ 17 ವರ್ಷಗಳಿಂದಲೂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಶ್ರೀರಾಂಬಾಬು ಅನಾಥಾಲಯದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಇಟ್ಟುಕೊಂಡು ಒಂದು ಸಿನಿಮಾ ಮಾಡಿದ್ದಾರೆ. ಚಿತ್ರಕ್ಕೆ ಸುವ್ವಾಲಿ ಎಂದು ಟೈಟಲ್ ಇಡಲಾಗಿದ್ದು, ಇತ್ತೀಚಿಗೆ ಚಿತ್ರದ ಟ್ರೇಲರ್ ಕಾರ್ಯಕ್ರಮ ನೆರವೇರಿತು.
ಅನಾಥಾಶ್ರಮದಲ್ಲಿ ನಡೆಯುವಂತಹ ವಿಚಿತ್ರ ಘಟನೆಗಳು ಹಾಗೂ ಅಲ್ಲಿನ ಮಕ್ಕಳು ತಮ್ಮ ರೈಟ್ಸಿಗಾಗಿ ಹೋರಾಟ ನಡೆಸಿ ಪರಿಹಾರ ಕಂಡುಕೊಳ್ಳುವ ಪರಿಯನ್ನು ಸಂದೇಶಾತ್ಮಕವಾಗಿ ಸುವ್ವಾಲಿಯಲ್ಲಿ ತೋರಿಸಲಾಗಿದೆ. ಈ ಚಿತ್ರವನ್ನು ಈಗಷ್ಟೇ ಪಿಯುಸಿ ಓದುತ್ತಿರುವ ಹಾರ್ದಿಕಾ ನಿರ್ದೇಶನ ಮಾಡಿದ್ದು, ಶ್ರೀರಾಂಬಾಬು ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಬಹುತೇಕ ಮಕ್ಕಳೇ ಅಭಿನಯಿಸಿರುವ ಈ ಚಿತ್ರಕ್ಕೆ ಲೋಕಿ ಸಂಗೀತ ನಿರ್ದೇಶನ ಮಾಡಿದ್ದಾರೆ.
Comments