ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹರೆಡ್ಡಿ ಜೀವನಾಧಾರಿತ ಸಿನಿಮಾ ಸೈರಾ ನರಸಿಂಹ ರೆಡ್ಡಿ. ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಈ ಚಿತ್ರದಲ್ಲಿ ಬಹುದೊಡ್ಡ ತಾರಾಂಗಣವಿದ್ದು, ಅಮಿತಾಬ್ ಬಚ್ಚನ್, ಕಿಚ್ಚ ಸುದೀಪ್, ಜಗಪತಿ ಬಾಬು, ವಿಜಯ್ ಸೇತುಪತಿ, ತಮನ್ನಾ, ಅನುಷ್ಕಾ ಮತ್ತಿತರರು ನಟಿಸಿದ್ದಾರೆ. ಅತಿ ದೊಡ್ಡ ಸ್ಟಾರ್ ಕಾಸ್ಟ್ ಇರುವ ಈ ಚಿತ್ರದಲ್ಲಿ ಯಾವ ನಟ ಯಾವ ಪಾತ್ರವನ್ನು ಮಾಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಅದರಂತೆ ಅಮಿತಾಬ್ ಬಚ್ಚನ್, ಸುದೀಪ, ವಿಜಯ್ ಸೇತುಪತಿ ಪಾತ್ರಗಳನ್ನು ರಿವೀಲ್ ಕೂಡ ಮಾಡಲಾಗಿತ್ತು.

Hop in for a free ride with

ಸದ್ಯ ಅನುಷ್ಕಾ ಪಾತ್ರವೂ ರಿವೀಲ್ ಆಗಿದ್ದು, ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಅನುಷ್ಕಾ ರಾಣಿ ಲಕ್ಷ್ಮೀ ಬಾಯಿ ಪಾತ್ರದಲ್ಲಿ ನಟಿಸಲಿದ್ದಾರಂತೆ. ರುದ್ರಮ್ಮ ದೇವಿ ಸಿನಿಮಾದ ನಂತರ ಅನುಷ್ಕಾ ಇದೀಗ ಐತಿಹಾಸಿಕ ಸಿನಿಮಾ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲಿದ್ದು, ಅಧಿಕೃತವಾಗಿ ಅನುಷ್ಕಾ ಪಾತ್ರದ ಬಗ್ಗೆ ಯಾವುದೇ ಸುಳಿವನ್ನು ಬಿಟ್ಟುಕೊಟ್ಟಿಲ್ಲ. ಈಗಾಗಲೇ ಚಿತ್ರೀಕರಣ ಮುಗಿಸಿ ಫೊಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಸೈರಾ ನರಸಿಂಹ ರೆಡ್ಡಿ ಗಾಂಧಿಜಯಂತಿ ಪ್ರಯುಕ್ತ ಅಕ್ಟೋಬರ್ 2ರಂದು ತೆರೆ ಕಾಣಲಿದೆ. ಮೆಗಾಸ್ಟಾರ್ ಚಿರಂಜೀವಿಗೆ ನಯನತಾರ ನಟಿಸಿದ್ದು, ಚಿರಂಜೀವಿ ಮಗ ರಾಮ್ ಚರಣ್ ತೇಜ್ ನಿರ್ಮಾಣ ಮಾಡುತ್ತಿದ್ದಾರೆ.

CG ARUN

ವಿದೇಶಕ್ಕೆ ಹಾರಲಿದೆ ಐ ಲವ್ ಯು!

Previous article

ಬಾಂಗ್ಲಾ ಗೆಲುವಿಗೆ ಟ್ವೀಟ್ ಮಾಡಿದ ಚಮಕ್ ಡೈರೆಕ್ಟರ್!

Next article

You may also like

Comments

Leave a reply

Your email address will not be published. Required fields are marked *